Kannada News Crime ನಗರದಲ್ಲಿ ಡ್ರಗ್ಸ್ ದಂಧೆ ಮೂಸಿ ನೋಡಲು ನಾರ್ಕೋಟಿಕ್ಸ್ ನಾಯಿಗಳ ಛೂಬಿಟ್ಟ CCB
ನಗರದಲ್ಲಿ ಡ್ರಗ್ಸ್ ದಂಧೆ ಮೂಸಿ ನೋಡಲು ನಾರ್ಕೋಟಿಕ್ಸ್ ನಾಯಿಗಳ ಛೂಬಿಟ್ಟ CCB
[lazy-load-videos-and-sticky-control id=”cXU10nAaKWU”] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಗೆ ನಾರ್ಕೋಟಿಕ್ಸ್ ಡಾಗ್ ಬಳಕೆ ಮಾಡುತ್ತಿದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಈ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೇವಲ ಕರ್ನಾಟಕವಷ್ಟೇ ಅಲ್ಲದೆ ದೇಶಾದ್ಯಂತ ಡ್ರಗ್ಸ್ ಜಾಲದ ನಶೆ ಹಬ್ಬಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ಹೋಗಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಗಾಗಿ ಪೊಲೀಸರು ನಾರ್ಕೋಟಿಕ್ಸ್ ಡಾಗ್ ಬಳಕೆ ಮಾಡಲು ಮುಂದಾಗಿದ್ದಾರೆ. […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಗೆ ನಾರ್ಕೋಟಿಕ್ಸ್ ಡಾಗ್ ಬಳಕೆ ಮಾಡುತ್ತಿದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಈ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೇವಲ ಕರ್ನಾಟಕವಷ್ಟೇ ಅಲ್ಲದೆ ದೇಶಾದ್ಯಂತ ಡ್ರಗ್ಸ್ ಜಾಲದ ನಶೆ ಹಬ್ಬಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ಹೋಗಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ಪತ್ತೆಗಾಗಿ ಪೊಲೀಸರು ನಾರ್ಕೋಟಿಕ್ಸ್ ಡಾಗ್ ಬಳಕೆ ಮಾಡಲು ಮುಂದಾಗಿದ್ದಾರೆ.
ಸ್ಮೆಲ್ ಪತ್ತೆಗೆ ಬೆಲ್ಜಿಯಂನ ಮಾಲಿನೋಯಿಸ್ ಎತ್ತಿದ ಕೈ
ಬೆಲ್ಜಿಯಂನ ಮಾಲಿನೋಯಿಸ್ ಡಾಬರ್ ಮೆನ್ ಹಾಗೂ ಜರ್ಮನ್ ಶೆಫರ್ಡ್ ಶ್ವಾನಗಳಿಂದ ತೀವ್ರ ತಪಾಸಣೆ ಮಾಡಲಾಗುತ್ತೆ. ಈ ಶ್ವಾನಗಳು ಬೆಂಗಳೂರಿನ ಎಲ್ಲಾ ಕಡೆ ಓಡಾಡಲಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣ, ಸೂಕ್ಷ್ಮ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗುತ್ತೆ. ಸ್ಮೆಲ್ ಪತ್ತೆಗೆ ಬೆಲ್ಜಿಯಂನ ಮಾಲಿನೋಯಿಸ್ ಎತ್ತಿದ ಕೈ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.