ಬೆಂಗಳೂರು: ನಗರದಲ್ಲಿ ತನ್ನ ಮಾದಕ ಜಾಲವನ್ನ ಹಬ್ಬಿಸಿದ್ದ ಡ್ರಗ್ಸ್ ಕಿಂಗ್ಪಿನ್ ಅನಿಕಾ ಸ್ಟಾರ್ಸ್, ಮಾಡೆಲ್ಸ್, ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಹೇಗೆ ಸಪ್ಲೈ ಮಾಡ್ತಿದ್ದಳು ಅಂತಾ ಪಿನ್ ಟು ಪಿನ್ ಡಿಟೇಲ್ಸ್ನ ಟಿವಿ9 ವರದಿ ಮಾಡಿದೆ.
ನಗರದ ಪ್ರತಿಷ್ಠಿತ ಹೋಟೆಲ್, ಪಬ್ ಮತ್ತು ಹೈ-ಎಂಡ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅನಿಕಾ ಈ ಮುಖಾಂತರ ಪಾರ್ಟಿಗೆ ಬರುತ್ತಿದ್ದ ಸ್ಟಾರ್ ನಟ-ನಟಿಯರು, ಮಾಡೆಲ್ಸ್ ಹಾಗೂ ಸಂಗೀತ ನಿರ್ದೇಶಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು.
ಸಿನಿಮಾ ರಿಲೀಸ್ ನಂತರ ನಡೀತಿದ್ದ ಖಾಸಗಿ ಪಾರ್ಟಿಗಳಿಗೆ ಅಟೆಂಡ್ ಆಗ್ತಿದ್ದ ಅನಿಕಾ ಈ ರೀತಿಯ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದಳು ಎಂದು ತಿಳಿದುಬಂದಿದೆ. ಹಾಗಾಗಿ, ಇಂಥ ಪಾರ್ಟಿಗಳಲ್ಲಿ ಅನಿಕಾಳಿಗೆ VVIP ಗೆಸ್ಟ್ಗಳ ಹಾಗೆ ಟ್ರೀಟ್ಮೆಂಟ್ ಸಹ ಸಿಗುತ್ತಿತ್ತಂತೆ.
ಪಾರ್ಟಿಗಳಲ್ಲಿ ಅನಿಕಾಳಿಗೆ ಹಣ ಕೊಟ್ಟು ಸ್ಟಾರ್ಗಳಿಂದ ಡ್ರಗ್ಸ್ ಖರೀದಿಯಾಗುತ್ತಿದ್ದು ಲಾಕ್ಡೌನ್ ವೇಳೆ ಅನಿಕಾ ಇದ್ದೆಡೆಗೆ ಬಂದು ಡ್ರಗ್ಸ್ ಖರೀದಿಸ್ತಿದ್ರು ಎಂಬ ಮಾಹಿತಿ ದೊರೆತಿದೆ. ಜೊತೆಗೆ, ಕೆಲ ಸ್ಟಾರ್ಗಳ ಫಾರ್ಮ್ಹೌಸ್ಗಳಿಗೆ ಸಹ ತೆರಳಿ ಅನಿಕಾ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳಂತೆ.