ಬಾಲಕನ ಕಿಡ್ನಾಪ್ ಮಾಡಿದ್ದ ಪ್ರಮುಖ ಆರೋಪಿ ಮೇಲೆ ಖಾಕಿ ಫೈರಿಂಗ್
ಬೆಂಗಳೂರು: ನಗರದಲ್ಲಿ ಮತ್ತೊಮ್ಮೆ ಖಾಕಿ ಗನ್ ಮೊಳಗಿದೆ. ಇದೀಗ, ಬಾಲಕನ ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹಣಕ್ಕಾಗಿ ಉದ್ಯಮಿಯ ಪುತ್ರನ Kidnap.. ಕೊನೆಗೂ ಸಿಕ್ಕಿಬಿದ್ದ ದುಷ್ಕರ್ಮಿಗಳು, ಎಲ್ಲಿ? ಶ್ಯಾಂಪುರ ರೈಲ್ವೆ ಗೇಟ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದ್ದು ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಝೈನ್ಗೆ ಗುಂಡೇಟು ತಗಲಿದೆ. ಭಾರತಿನಗರ ಠಾಣೆ ಇನ್ಸ್ಪೆಕ್ಟರ್ ಆನಂದ್ರಿಂದ ಫೈರಿಂಗ್ ನಡೆದಿದ್ದು ಅರೋಪಿಯ ಬಲಗಾಲಿಗೆ ತಗುಲಿದೆ. ಸದ್ಯ ಆರೋಪಿ ಮೊಹಮ್ಮದ್ […]
ಬೆಂಗಳೂರು: ನಗರದಲ್ಲಿ ಮತ್ತೊಮ್ಮೆ ಖಾಕಿ ಗನ್ ಮೊಳಗಿದೆ. ಇದೀಗ, ಬಾಲಕನ ಕಿಡ್ನ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಣಕ್ಕಾಗಿ ಉದ್ಯಮಿಯ ಪುತ್ರನ Kidnap.. ಕೊನೆಗೂ ಸಿಕ್ಕಿಬಿದ್ದ ದುಷ್ಕರ್ಮಿಗಳು, ಎಲ್ಲಿ?
ಶ್ಯಾಂಪುರ ರೈಲ್ವೆ ಗೇಟ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದ್ದು ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಝೈನ್ಗೆ ಗುಂಡೇಟು ತಗಲಿದೆ. ಭಾರತಿನಗರ ಠಾಣೆ ಇನ್ಸ್ಪೆಕ್ಟರ್ ಆನಂದ್ರಿಂದ ಫೈರಿಂಗ್ ನಡೆದಿದ್ದು ಅರೋಪಿಯ ಬಲಗಾಲಿಗೆ ತಗುಲಿದೆ. ಸದ್ಯ ಆರೋಪಿ ಮೊಹಮ್ಮದ್ ಝೈನ್ನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.