
ನೆಲಮಂಗಲ: ಪಿಟ್ ಗುಂಡಿ ತೆಗೆಯೋ ವಿಚಾರದಲ್ಲಿ ಗಲಾಟೆಯಾಗಿ, ಯುವಕನಿಗೆ ಪಕ್ಕದ ಮನೆಯಾತ ಚಾಕು ಇರಿದಿರುವ ಘಟನೆ ಹೆಸರಘಟ್ಟ ರಸ್ತೆಯ ಗಣಪತಿ ನಗರದಲ್ಲಿ ನಡೆದಿದೆ. ಪ್ರದೀಪ್(22) ಚಾಕು ಇರಿತಕ್ಕೊಳಗಾದ ಯುವಕ.
ಗಣಪತಿ ನಗರದಲ್ಲಿ ಮನೆ ನಿರ್ಮಾಣ ಮಾಡಿ ಪಿಟ್ ಗುಂಡಿ ತೆಗೆಯೋ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ತಾರಕ್ಕಕೇರಿ ನೆರೆಮನೆಯಾತ ಪ್ರದೀಪ್ಗೆ ಚಾಕು ಇರಿದಿದ್ದಾನೆ. ಜ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ನಾರಾಯಣಸ್ವಾಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Published On - 11:12 am, Thu, 30 January 20