AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ: ವಿವಾಹೇತರ ಸಂಬಂಧ, ಯುವತಿ ಮದುವೆಯಾಗು ಎಂದಿದ್ದಕ್ಕೆ ಆಕೆಯ ಕೊಂದು 31 ತುಂಡುಗಳಾಗಿ ಕತ್ತರಿಸಿದ 5 ಮಕ್ಕಳ ತಂದೆ

ವ್ಯಕ್ತಿಯೊಬ್ಬ ಯುವತಿಯನ್ನು ಕೊಂದು ಆಕೆಯ ದೇಹವನ್ನು 31 ತುಂಡುಗಳಾಗಿ ಕತ್ತರಿಸಿ ಅರಣ್ಯದಲ್ಲಿ ಎಸೆದಿರುವ ಘಟನೆ ಒಡಿಶಾದ ನಬರಂಗ್​ಪುರ ಜಿಲ್ಲೆಯಲ್ಲಿ ನಡೆದಿದೆ. ಐದು ಮಕ್ಕಳ ತಂದೆಯಾಗಿರುವ ವ್ಯಕ್ತಿ ಬುಡಕಟ್ಟು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಆಕೆ ಆತನ ಮನೆಗೆ ತೆರಳಿ ಮದುವೆಯಾಗುವಂತೆ ಕೇಳಿದ್ದಳು. ಅದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯನ್ನು ಹತ್ಯೆ ಮಾಡಿ ದೇಹವನ್ನು 31 ಭಾಗಗಳಾಗಿ ಕತ್ತರಿಸಿ ಅರಣ್ಯದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಾಧImage Credit source: Indian Express
ನಯನಾ ರಾಜೀವ್
|

Updated on:Nov 26, 2023 | 10:53 AM

Share

ವ್ಯಕ್ತಿಯೊಬ್ಬ ಯುವತಿಯನ್ನು ಕೊಂದು ಆಕೆಯ ದೇಹವನ್ನು 31 ತುಂಡುಗಳಾಗಿ ಕತ್ತರಿಸಿ ಅರಣ್ಯದಲ್ಲಿ ಎಸೆದಿರುವ ಘಟನೆ ಒಡಿಶಾದ ನಬರಂಗ್​ಪುರ ಜಿಲ್ಲೆಯಲ್ಲಿ ನಡೆದಿದೆ. ಐದು ಮಕ್ಕಳ ತಂದೆಯಾಗಿರುವ ವ್ಯಕ್ತಿ ಬುಡಕಟ್ಟು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಆಕೆ ಆತನ ಮನೆಗೆ ತೆರಳಿ ಮದುವೆಯಾಗುವಂತೆ ಕೇಳಿದ್ದಳು. ಅದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯನ್ನು ಹತ್ಯೆ ಮಾಡಿ ದೇಹವನ್ನು 31 ಭಾಗಗಳಾಗಿ ಕತ್ತರಿಸಿ ಅರಣ್ಯದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಆರೋಪಿ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತಂದೆ ನೀಡಿದ ದೂರಿನ ಪ್ರಕಾರ ಯುವತಿ ಬುಧವಾರ ಮನೆಯಿಂದ ಹೋಗಿದ್ದಳು, ಬಳಿಕ ಕುಟುಂಬದವರು ಗ್ರಾಮಸ್ಥರು ಎಲ್ಲರೂ ಆಕೆಯನ್ನು ಹುಡುಕುವ ಪ್ರಯತ್ನ ಮಾಡಿದ್ದರು.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶ್ರೀ ಸೇನ್ ಹೇಳಿದರು. ಮಹಿಳೆಯ ಶವವನ್ನು ಬರಂಗ್‌ಪುರ ಜಿಲ್ಲೆಯ ಅರಣ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪತಿ-ಪತ್ನಿ ಕೊಲೆ ಮಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಜೈಪುರ: ಟಿಂಡರ್ ಡೇಟ್​​ಗಾಗಿ ಹೋದ 28 ವರ್ಷದ ಯುವಕ ಹೆಣವಾಗಿ ಪತ್ತೆ

ಬಂಧಿತ ಆರೋಪಿಗಳ ವಿಚಾರಣೆ ನಡೆಸಿ ಕೊಲೆಯ ನಿಗೂಢತೆ ಬೇಧಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ಘಟನೆಯಿಂದ ಮತ್ತೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯನ್ನು ನೆನಪಿಸುತ್ತಿದೆ, ಆಕೆಯ ಪ್ರಿಯಕರ ಶ್ರದ್ಧಾಳನ್ನು ಕೊಂದು, ಆಕೆಯನ್ನು ತುಂಡುಗಳಾಗಿ ಕತ್ತರಿಸಿ ನಗರದ ವಿವಿಧ ಭಾಗಗಳಲ್ಲಿ ಎಸೆದಿದ್ದ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:53 am, Sun, 26 November 23

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ

ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!

ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?

ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ