ಎಣ್ಣೆ ಪಾರ್ಟಿಯಲ್ಲಿ ನೀರು ಕೊಡದಿದ್ದಕ್ಕೆ ಸ್ನೇಹಿತರ ನಡುವೆ ಗಲಾಟೆ: ಓರ್ವ ಸಾವು,ಇಬ್ಬರಿಗೆ ಗಾಯ

| Updated By: ರಮೇಶ್ ಬಿ. ಜವಳಗೇರಾ

Updated on: Dec 24, 2023 | 4:36 PM

ಗೆಳಯರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಆದ್ರೆ, ಸ್ವಲ್ಪ ಎಣ್ಣೆ ಕಿಕ್​ ಹಪಡೆಯುತ್ತಿದ್ದಂತೆಯೇ ನೀರಿಗಾಗಿ ಗೆಳಯರ ನಡುವೆ ಜಗಳ ಶುರುವಾಗಿದೆ. ಕೊನೆಗೆ ಸ್ನೇಹಿತರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಎಣ್ಣೆ ಪಾರ್ಟಿಯಲ್ಲಿ ನೀರು ಕೊಡದಿದ್ದಕ್ಕೆ ಸ್ನೇಹಿತರ ನಡುವೆ ಗಲಾಟೆ: ಓರ್ವ ಸಾವು,ಇಬ್ಬರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಹಾಸನ, (ಡಿಸೆಂಬರ್ 24): ಮದ್ಯ ಪಾರ್ಟಿ ವೇಳೆ ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಓರ್ವ ಸಾವಿನಲ್ಲಿ ಅಂತ್ಯವಾಗಿದೆ. ಹಾಸನ (Hassan) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಲ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚನ್ನಪಟ್ಟಣ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ನಾಗೇಶ್ (30) ಕೊಲೆಯಾದ ಯುವಕ. ಮೋಹನ್ ,ಮಂಜು ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ನಿನ್ನೆ(ಡಿಸೆಂಬರ್ 24) ಸಂಜೆ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದ ನಾಗೇಶ್, ರಾಮಚಂದ್ರ ಹಾಗೂ ಮಂಜು, ಚೇತು ಸ್ಚಾಮಿ ಮತ್ತು ಶಿವು, ವಡ್ಡರಹಟ್ಟಿಯ ನಾಗೇಶ್ , ರಾಮಚಂದ್ರ, ಮಂಜು ಹಾಗು ಸಾಣೇನಹಳ್ಳಿಯ, ಚೇತು, ಸ್ವಾಮಿ, ಶಿವು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಆದ್ರೆ, ಕಿಕ್ ಹೆಚ್ಚಾಗುತ್ತಿದ್ದಂತೆಯೇ ಚೇತು ಗೆಳೆಯರು, ನಾಗೇಶ್ ಕಡೆಯವರನ್ನ ನೀರು ಕೇಳಿದ್ದಾರೆ. ಆದ್ರೆ, ನಾಗೇಶ್​ ನೀರು ಕೊಡಲು ನಿರಾಕರಿಸಿದ್ದಾರೆ. ನಾವು ಹಣ ಕೊಟ್ಟು ತಂದಿದ್ದೀವಿ ಕೊಡಲ್ಲ ಎಂದಿದ್ದಾರೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಜಗಳವಾಗುತ್ತಲೆ ಶಿವು ಮತ್ತು ಸ್ವಾಮಿ ಫೋನ್ ಮಾಡಿ ಬೇರೆ ಹುಡುಗರನ್ನ ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ನಾಲ್ಲೈದು ಯುವಕರು ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದಾರೆ. ಈ ವೇಳೆ ಚೂರಿ ಇರಿತದಿಂದ ನಾಗೇಶ್(30) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದು ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.