ಮಧ್ಯಪ್ರದೇಶ: ನಾಯಿ ಬೊಗಳಿತೆಂದು ಮಾಲೀಕರನ್ನೇ ಕೊಂದ ವ್ಯಕ್ತಿ
ನಾಯಿ ತನ್ನನ್ನು ನೋಡಿ ಬೊಗಳಿತು ಎನ್ನುವ ಕೋಪದಲ್ಲಿ ವ್ಯಕ್ತಿಯೊಬ್ಬ ಮಾಲೀಕರನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಶನಿವಾರ ರಾತ್ರಿ ಮುಸಖೇಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಾಂತಿ ನಗರದ ನಿವಾಸಿಯಾಗಿದ್ದು, ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ರಾತ್ರಿ 10.30 ರ ಸುಮಾರಿಗೆ ಅವರು ಸಮುದಾಯ ಭವನದ ಬಳಿ ಇದ್ದಾಗ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿತು ಮತ್ತು ಆ ವ್ಯಕ್ತಿಗೆ ರಸ್ತೆಯ ಮೂಲಕ ಹೋಗಲು ಸಾಧ್ಯವಾಗಲಿಲ್ಲ ಎಂದು ಆಜಾದ್‌ನಗರ ಪೊಲೀಸ್ ಠಾಣೆ ಪ್ರಭಾರಿ ನೀರಜ್ ಮೇಧಾ ತಿಳಿಸಿದ್ದಾರೆ. 65 ವರ್ಷದ ಮಹಿಳೆಯೊಬ್ಬರು ತನ್ನ ಮನೆಯಿಂದ ಹೊರಬಂದಿದ್ದರು ಮತ್ತು ಆ ವ್ಯಕ್ತಿ ಜತೆ ಜಗಳಕ್ಕಿಳಿದಿದ್ದರು.
ಆತ ಮಹಿಳೆಯ ಹೊಟ್ಟೆಗೆ ಒದ್ದಿದ್ದಾನೆ, ಆಕೆ ತಕ್ಷಣ ಕುಸಿದು ಬಿದ್ದಿದ್ದಾರೆ. ಅಲ್ಲಿದ್ದವರು ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮತ್ತಷ್ಟು ಓದಿ: ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್ ಹತ್ಯೆ
ಆರೋಪಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Sun, 24 December 23