ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್ ಹತ್ಯೆ

ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್​ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಈ ಘಟನೆ ನಡೆದಿದೆ. ಆರಿಫ್ ಜಮಾಲ್ ತನ್ನ ಅಂಗಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಬೈಕ್​ನಲ್ಲಿ ಬಂದ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ.

ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್ ಹತ್ಯೆ
Follow us
ನಯನಾ ರಾಜೀವ್
|

Updated on: Dec 24, 2023 | 8:42 AM

ಬಿಹಾರದಲ್ಲಿ ಎಐಎಂಐಎಂ ನಾಯಕ ಆರಿಫ್ ಜಮಾಲ್​ನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹುಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುತುಬ್ ಛಾಪ್ರಾ ತಿರುವಿನಲ್ಲಿ ಈ ಘಟನೆ ನಡೆದಿದೆ. ಆರಿಫ್ ಜಮಾಲ್ ತನ್ನ ಅಂಗಡಿಯಲ್ಲಿ ಕುಳಿತಿದ್ದ ಸಮಯದಲ್ಲಿ ಬೈಕ್​ನಲ್ಲಿ ಬಂದ ಮೂವರು ಅಪರಿಚಿತರು ದಾಳಿ ನಡೆಸಿದ್ದಾರೆ.

ಆರಿಫ್ ಜಮಾಲ್ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದಾರೆ, ರಾತ್ರಿ 8.30ರಿಂದ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಆರಿಫ್ ಜಮಾಲ್ ನನ್ನು ಜನರು ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಹುಸೈಂಗಂಜ್ ಪೊಲೀಸ್ ಠಾಣೆಯ ಪ್ರಭಾರಿ ವಿಜಯ್ ಯಾದವ್ ಅವರು ಆರಿಫ್ ಜಮಾಲ್ ಅವರನ್ನು ಕ್ರಿಮಿನಲ್‌ಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಿದ್ದಾರೆ. ಗುಂಡು ಅವರ ಹೊಟ್ಟೆಗೆ ತಗುಲಿತ್ತು. ಸ್ಥಳೀಯರು ಮತ್ತು ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

ದುಷ್ಕರ್ಮಿಗಳು ಆರಿಫ್ ಜಮಾಲ್ ಹೊಟ್ಟೆಗೆ ಒಂದೇ ಒಂದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ, ಜನರು ಮೊದಲು ಅವರನ್ನು ಸದರ್ ಆಸ್ಪತ್ರೆಗೆ ಕರೆದೊಯ್ದರು. ಇದಾದ ಬಳಿಕ ಇಲ್ಲಿಂದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.

ಮತ್ತಷ್ಟು ಓದಿ: ಹಾವೇರಿ: ಹೆತ್ತವರ ಕಣ್ಣು ಮುಂದೆಯೇ ಹರಿತು ಮಗಳ ನೆತ್ತರು!ಕೊಲೆ ಮಾಡಿದ ಪತಿಗೆ ಗ್ರಾಮಸ್ಥರಿಂದ ಧರ್ಮದೇಟು

ಆರಿಫ್ ಜಮಾಲ್ ಕೂಡ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ. 2015 ರಲ್ಲಿ ಅವರು ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇದಾದ ಬಳಿಕ 2022ರ ಜಿಲ್ಲಾ ಪರಿಷತ್ ಚುನಾವಣೆಗೂ ಸ್ಪರ್ಧಿಸಿದ್ದರು. ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ