ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕನ್ನು ವಂಚಿಸಿರುವ ಆರೋಪದಲ್ಲಿ ಸಿಸಿಬಿಯಿಂದ ರಾಕ್​ಲೈನ್ ವೆಂಕಟೇಶ್ ಮಗನ ವಿಚಾರಣೆ!

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕನ್ನು ವಂಚಿಸಿರುವ ಆರೋಪದಲ್ಲಿ ಸಿಸಿಬಿಯಿಂದ ರಾಕ್​ಲೈನ್ ವೆಂಕಟೇಶ್ ಮಗನ ವಿಚಾರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 23, 2023 | 5:32 PM

ಹಾಗೆ ನೋಡಿದರೆ, ರಾಕ್ ಲೈನ್ ಬೇಕಾದಷ್ಟು ಸಂಪಾದನೆ ಮಾಡಿದ್ದಾರೆ. ಅವರನ್ನು ಕುಬೇರರ ಪಟ್ಟಿಯಲ್ಲಿ ಸೇರಿಸಲು ಅಡ್ಡಿಯಿಲ್ಲ. ಹತ್ತು ತಲೆಮಾರುಗಳು ಕುಳಿತು ತಿನ್ನುವಷ್ಟು ಸಂಪಾದನೆ ಮಾಡಿದ್ದಾರೆಂದು ಅವರ ಆಪ್ತರು ಹೇಳುತ್ತಾರೆ. ಪೊಲೀಸರು ಅಭಿಲಾಷ್ ವಿಚಾರಣೆ ನಡೆಸುವಾಗ ಹಣ ವರ್ಗಾವಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರಾಕ್​ಲೈನ್ ವೆಂಕಟೇಶ್ (Rockline Venkatesh) ನಿಸ್ಸಂದೇಹವಾಗಿ ದೊಡ್ಡ ಹೆಸರು. 60-ವರ್ಷ ವಯಸ್ಸಿನ ವೆಂಕಟೇಶ್ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಹಲವಾರು ಚಿತ್ರಗಳನನ್ನು ನಿರ್ಮಿಸಿ ಒಬ್ಬ ಯಶಸ್ವೀ ನಿರ್ಮಾಪಕ (film producer) ಅನಿಸಿಕೊಂಡಿದ್ದ್ದಾರೆ. ವಿಷಯ ಹೀಗಿರುವಾಗ ಅವರ ಮಗ ವೆಂಕಟೇಶ್ ಅಭಿಲಾಷ್ ಗೆ (Venkatesh Abhilash) ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ನಿಂದ ಸಾಲ ಪಡೆಯುವ ಕೇಡು ಯಾಕೆ ಎದುರಾಯಿತೋ ಗೊತ್ತಾಗುತ್ತಿಲ್ಲ. ವಿಷಯವೇನೆಂದರೆ, ಫೇಕ್ ಕಾಗದ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕೊಂದನ್ನು ವಂಚಿಸಿದ ಆರೋಪದಲ್ಲಿ ನಗರದ ಸಿಸಿಬಿ ಪೊಲೀಸ್ 5-ಜನರ ತಂಡವೊಂದನ್ನು ಬಂಧಿಸಿದ್ದು ಅವರ ಪೈಕಿ ಅಭಿಲಾಷ್ ಒಬ್ಬರೆಂದು ಆರೋಪಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಅಭಿಲಾಷ್ ರನ್ನು ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಅವರು ಮಾಧ್ಯಮಗಳ ಕೆಮೆರಾದಿಂದ ತಪ್ಪಿಸಿಕೊಂಡು ವೇಗವಾಗಿ ತನ್ನ ಕಾರಿನತ್ತ ನಡೆದು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ