AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಹುಲಿಯುಗುರಿನ ಪೆಂಡೆಂಟ್​ಗಾಗಿ ಶೋಧ ನಡೆಸಿದ ಅರಣ್ಯಾಧಿಕಾರಿಗಳು

ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಹುಲಿಯುಗುರಿನ ಪೆಂಡೆಂಟ್​ಗಾಗಿ ಶೋಧ ನಡೆಸಿದ ಅರಣ್ಯಾಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Oct 26, 2023 | 12:34 PM

ಪೆಂಡೆಂಟ್ ಪತ್ತೆಯಾಗದೆ ಹೋದರೂ ಅವರ ಮೇಲೆ ಕೇಸು ನಡೆಯೋದು ನಿಶ್ಚಿತ. ಯಾಕೆಂದರೆ ಇವರೆಲ್ಲ ಅದನ್ನು ಧರಿಸಿದ್ದನ್ನು ಕಂಡವರು ಸಲ್ಲಿಸಿರುವ ದೂರುಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದು ಸಿಗದೆ ಹೋದರೆ ಎಲ್ಲಿಟ್ಟಿದ್ದೀರಿ ಅಂತ ಸಂಬಂಧಪಟ್ಟ ತನಿಖಾ ಏಜೆನ್ಸಿಗಳು ಕೇಳೇ ಕೇಳುತ್ತವೆ.

ಬೆಂಗಳೂರು: ಶೋಕಿ, ಗತ್ತು, ವರ್ಚಸ್ಸು ಮತ್ತು ಪ್ರತಿಷ್ಠೆಗಾಗಿ ಕೊರಳಲ್ಲಿ ತೊಟ್ಟ ಹುಲಿ ಉಗುರಿನ ಪೆಂಡೆಂಟ್ (tiger claw pendant) ಉರುಳಾಗಿ ಸಾಬೀತಾದೀತು ಅಂತ ಇವರ್ಯಾರೂ ಅಂದುಕೊಂಡಿರಲಿಲ್ಲ ಅಂತ ಕಾಣುತ್ತೆ. ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್, ಚಿತ್ರನಟ ದರ್ಶನ್, ನಟ ಮತ್ತು ಬಿಜೆಪಿ ನಾಯಕ ಜಗ್ಗೇಶ್, ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh), ಧನಂಜಯ ಗುರೂಜಿ, ವಿನಯ್ ಗುರೂಜಿ (Vinay Guruji) ಮೊದಲಾದವರೆಲ್ಲ ಯಾಕಾದರೂ ತೊಟ್ಟೆವು ಅದನ್ನ ಪರಿತಪಿಸುತ್ತಿದ್ದಾರೆ. ಇವರೆಲ್ಲರ ಮನೆಗಳ ಮೇಲೆ ದಾಳಿ ನಡೆಸಿರುವ ಆರಣ್ಯಾಧಿಕಾರಿಗಳು ಹುಲಿಯುಗುರಿನ ಪೆಂಡೆಂಟ್ ಗಾಗಿ ಶೋಧ ನಡೆಸುತ್ತಿದ್ದಾರೆ. ದೃಶ್ಯದಲ್ಲಿ ನಿಮಗೆ ಕಾಣುತ್ತಿರೋದು ರಾಕ್ ಲೈನ್ ಮನೆ. ಅವರ ಐಷಾರಾಮಿ ಮನೆಯ ಸೆಲ್ಲರ್ ನಲ್ಲಿ ಪಾರ್ಕ್ ಆಗಿರುವ ಕಾರುಗಳ ತಪಾಸಣೆಯನ್ನು ಅಧಿಆಕಾರಿಗಳು ನಡೆಸುತ್ತಿದ್ದಾರೆ. ಪೆಂಡೆಂಟ್ ಪತ್ತೆಯಾಗದೆ ಹೋದರೂ ಅವರ ಮೇಲೆ ಕೇಸು ನಡೆಯೋದು ನಿಶ್ಚಿತ. ಯಾಕೆಂದರೆ ಇವರೆಲ್ಲ ಅದನ್ನು ಧರಿಸಿದ್ದನ್ನು ಕಂಡವರು ಸಲ್ಲಿಸಿರುವ ದೂರುಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದು ಸಿಗದೆ ಹೋದರೆ ಎಲ್ಲಿಟ್ಟಿದ್ದೀರಿ ಅಂತ ಸಂಬಂಧಪಟ್ಟ ತನಿಖಾ ಏಜೆನ್ಸಿಗಳು ಕೇಳೇ ಕೇಳುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 25, 2023 06:38 PM