ವಿಡಿಯೋ: ಮಂಗಳೂರಿನಲ್ಲಿ ಹುಲಿ ವೇಷಧಾರಿಯ ಟೋಪಿಗೆ ಬೆಂಕಿ, ತಪ್ಪಿದ ದುರಂತ
ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿಹೊತ್ತಿಕೊಂಡಿದೆ.
ಮಂಗಳೂರು, ಅಕ್ಟೋಬರ್ 25: ನವರಾತ್ರಿ, ದಸರಾ ಹಬ್ಬ (Dasara Festival) ಬಂತೆಂದರೆ ಸಾಕು ಮಂಗಳೂರು (Mangaluru) ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹುಲಿ ವೇಷ, ಹುಲಿ ಕುಣಿತದ ಅಬ್ಬರ ಜೋರಿರುತ್ತದೆ. ಈ ವರ್ಷವೂ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಹುಲಿ ಕುಣಿತ ಸೇರಿದಂತೆ ವಿಜೃಂಭಣೆಯಿಂದ ದಸರಾ, ನವರಾತ್ರಿ ಆಚರಿಸಲಾಗಿದೆ. ಈ ಮಧ್ಯೆ, ಅಲ್ಲಲ್ಲಿ ಹುಲಿ ವೇಷಧಾರಿಗಳಿಗೆ ಆವೇಷ ಬಂದ ಘಟನೆಗಳೂ ವರದಿಯಾಗಿದೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಸಮ್ಮುಖದಲ್ಲೇ ಹುಲಿ ವೇಷಧಾರಿಯೊಬ್ಬರಿಗೆ ಆವೇಷ ಬಂದ ವಿಡಿಯೋ ವೈರಲ್ ಆಗಿತ್ತು.
ಇದೀಗ ಅಂಥದ್ದೇ ಮತ್ತೊಂದು ಘಟನೆಯಲ್ಲಿ ಹುಲಿ ವೇಷಧಾರಿಯ ಟೋಪಿಗೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿಹೊತ್ತಿಕೊಂಡಿದೆ. ತಕ್ಷಣ ಅವರು ಟೋಪಿಯನ್ನು ಕಿತ್ತೆಸೆದು ಮೈಗೆ ಬೆಂಕಿ ತಗುಲದಂತೆ ನೋಡಿಕೊಂಡಿದ್ದಾರೆ. ಹುಲಿ ವೇಷಧಾರಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Wed, 25 October 23