ಆಂಧ್ರ ರಾಜಕೀಯದಲ್ಲಿ ಸಂಚಲನ: ಚಂದ್ರಬಾಬು ನಾಯ್ಡು ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಸಮಾಲೋಚನೆ

ಆಂಧ್ರ ರಾಜಕೀಯದಲ್ಲಿ ಸಂಚಲನ: ಚಂದ್ರಬಾಬು ನಾಯ್ಡು ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಸಮಾಲೋಚನೆ

ಸಾಧು ಶ್ರೀನಾಥ್​
|

Updated on: Dec 23, 2023 | 4:45 PM

ಇದು ಆಂಧ್ರ ರಾಜಕೀಯಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್. ಪ್ರಮುಖ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಅವರನ್ನು ಇಂದು ಶನಿವಾರ ಭೇಟಿಯಾದರು.

ಇದು ಆಂಧ್ರ ರಾಜಕೀಯಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್. ಪ್ರಮುಖ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು (Indian Political Action Committee (I-PAC) founder and top political and electoral strategist Prashant Kishor) ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ಅವರನ್ನು ಇಂದು ಶನಿವಾರ ಭೇಟಿಯಾದರು. ಪಿಕೆ ನಾರಾ ಲೋಕೇಶ್ ಮತ್ತು ಕಿಲಾರಿ ರಾಜೇಶ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ವಿಜಯವಾಡದಲ್ಲಿ ಈ ಭೇಟಿ ಏರ್ಪಟ್ಟಿದೆ. ಬಳಿಕ ಉಂಡವಳ್ಳಿಯ ನಿವಾಸದಲ್ಲಿ ಚಂದ್ರಬಾಬು ಅವರನ್ನು ಪ್ರಶಾಂತ್ ಭೇಟಿ ಮಾಡಿದರು.

ಕೆಲ ದಿನಗಳಿಂದ ಟಿಡಿಪಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ರಾಬಿನ್ ಶರ್ಮಾ ಕೂಡ ಪ್ರಶಾಂತ್ ಕಿಶೋರ್ ಹಾಗೂ ಚಂದ್ರಬಾಬು ನಡುವಿನ ಸಭೆಯಲ್ಲಿ ಭಾಗವಹಿಸಿದ್ದರು. ರಾಬಿನ್ ಶರ್ಮಾ ಅವರು ಸಭೆಯಲ್ಲಿ ರಾಜಕೀಯ ಸಮೀಕ್ಷೆಗಳನ್ನು ಚರ್ಚಿಸಲಿದ್ದಾರೆ. ಪ್ರಶಾಂತ್ ಕಿಶೋರ್ ಕಳೆದ ಚುನಾವಣೆ ವೇಳೆ ವೈಸಿಪಿ ಪರ ಕೆಲಸ ಮಾಡಿದ್ದರು.

ಯುವಗಲಂ ವತಿಯಿಂದ ನಾರಾ ಲೋಕೇಶ್ ಅವರು ಕೈಗೊಂಡಿದ್ದ ಪಾದಯಾತ್ರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಯಾತ್ರೆ ಅಂತ್ಯಗೊಂಡಿದ್ದು, ಪಕ್ಷದ ಚುನಾವಣಾ ಸಿದ್ಧತೆ ಕುರಿತು ವಿವಿಧ ಹಂತಗಳಲ್ಲಿ ಸಭೆ ನಡೆಸಲಾಗುತ್ತಿದೆ. ಟಿಕೆಟ್ ಹಂಚಿಕೆ, ಜನಸೇನಾ ಜೊತೆ ಮೈತ್ರಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಚುನಾವಣೆಗೂ ಮುನ್ನ ಸಾಮಾಜಿಕ ಜಾಲತಾಣಗಳನ್ನು ಬಲಪಡಿಸಲು ಟಿಡಿಪಿ ಕಾರ್ಯತಂತ್ರ ರೂಪಿಸಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ