ಹಾವೇರಿ: ಹೆತ್ತವರ ಕಣ್ಣು ಮುಂದೆಯೇ ಹರಿತು ಮಗಳ ನೆತ್ತರು!ಕೊಲೆ ಮಾಡಿದ ಪತಿಗೆ ಗ್ರಾಮಸ್ಥರಿಂದ ಧರ್ಮದೇಟು

ಆಕೆ ಜೀವನದಲ್ಲಿ ಹತ್ತಾರು ಕನಸು ಕಂಡು ಸಪ್ತಪದಿ ತುಳಿದು, ಗಂಡನ ಮನೆಗೆ ಹೋಗಿದ್ದಳು. ಆದ್ರೆ, ಗಂಡ ಅನುಮಾನ ಎಂಬ ಭೂತ ತಲೆಗೆ ಹತ್ತಿಸಿಕೊಂಡು ಮಾಡಬಾರದ ಕೆಲಸವನ್ನು ಮಾಡಿದ್ದಾನೆ.  ಏಕಾದಶಿ ಹಿನ್ನೆಲೆ, ಪತ್ನಿ ಪವಿತ್ರಾ ಇನ್ನಾದರೂ ನನ್ನ ಗಂಡ ಕುಡಿತದ ಚಟವನ್ನು ಬಿಟ್ಟು, ನನ್ನ ಮುದ್ದಾದ ಎರಡು ಹೆಣ್ಣುಮಕ್ಕಳ ಜೊತೆ ಚೆನ್ನಾಗಿರಲಿ ಶಿವನೇ ಎಂದು ಪ್ರಾರ್ಥನೆ ಮಾಡಿ ಮನೆಗೆ ಬಂದವಳನ್ನ ಶಿವನ ಪಾದಕ್ಕೆ ಕಳುಹಿಸಿದ್ದಾನೆ.

ಹಾವೇರಿ: ಹೆತ್ತವರ ಕಣ್ಣು ಮುಂದೆಯೇ ಹರಿತು ಮಗಳ ನೆತ್ತರು!ಕೊಲೆ ಮಾಡಿದ ಪತಿಗೆ ಗ್ರಾಮಸ್ಥರಿಂದ ಧರ್ಮದೇಟು
ರಾಣೇಬೆನ್ನೂರು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 23, 2023 | 9:44 PM

ಹಾವೇರಿ, ಡಿ.23: ಹೆಂಡತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲ ನಿವಾಸಿ ಆರೋಪಿ ಪತಿ ರೇವಣಪ್ಪ ಕಳೆದ ಐದು ವರ್ಷದ ಹಿಂದೆ ಇದೇ ರಾಣೇಬೆನ್ನೂರು(Ranebennur)ತಾಲ್ಲೂಕಿನ ಹುಲಿಹಳ್ಳಿ ಗ್ರಾಮದ ಪವಿತ್ರಾ ಎನ್ನುವ ಯುವತಿಯನ್ನು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ಇತ್ತು. ಆದರೆ, ಬರು ಬರುತ್ತಾ ಮದ್ಯದ ದಾಸನಾದ ರೇವಣಪ್ಪ ನಿತ್ಯ ಕುಡಿದ ಅಮಲಿನಲ್ಲಿ ಜಗಳ ವಾಡುತ್ತಿದ್ದನಂತೆ. ನೆರೆ-ಹೊರೆಯವರ ಜೊತೆ ಮಾತನಾಡಿದ್ರು, ಸಂಬಂಧ ಕಲ್ಪಿಸಿ ಜಗಳ ವಾಡುತ್ತಾ ಕಿರಿಕಿರಿ ಮಾಡುತ್ತಿದ್ದ. ಆದ್ರೆ, ಈ ಎಲ್ಲವನ್ನು ಸಹಿಸಿಕೊಂಡು ಕಳೆದ ಐದು ವರ್ಷದಿಂದ ಪವಿತ್ರ ಸಂಸಾರ ನಿಬಾಯಿಸಿಕೊಂಡು ಬಂದಿದ್ದಳು. ಇದರ ಪ್ರತಿಫಲವಾಗಿ ಎರಡು ಮುದ್ದಾದ ಹೆಣ್ಣುಮಕ್ಕಳು ಇದ್ದಾವೆ. ಆದ್ರೆ, ನಿನ್ನೆ(ಡಿ.22) ಪತಿ ಮಾಡಬಾರದ ಕೃತ್ಯವನ್ನು ಮಾಡಿದ್ದಾನೆ.

ಪವಿತ್ರಾ ಹಸಿ ಬಾಣತಿ ನಿನ್ನೆ ರಾತ್ರಿ ಐದು ತಿಂಗಳ ಕಂದಮ್ಮನನ್ನು ಕಂಕಳಲ್ಲಿ ಕುರಿಸಿಕೊಂಡು ಏಕಾದಶಿ ಹಿನ್ನೆಲೆ ಶಿವನ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಿದ್ದಳು. ತನ್ನ ಗಂಡ ತನ್ನ ತವರು ಮನೆಗೆ ಬಂದಿದ್ದಾನೆ ಎಂದು ಸುದ್ದಿ ಕೇಳಿದ ತಕ್ಷಣ ಪವಿತ್ರ, ನನ್ನ ಗಂಡ ನನ್ನ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಾನೆ ಎಂಬ ಆಸೆಯಿಂದ ಧಾವಂತದಲ್ಲಿ ಮನೆಗೆ ಬಂದಿದ್ದಳು. ಆದ್ರೆ, ಪಾಪಿ ಪತಿ ಅನುಮಾನ ಎಂಬ ಭೂತವನ್ನು ತಲೆಗೆ ಹಚ್ಚಿಕೊಂಡು  ಕುಡಿದ ಮತ್ತಿನಲ್ಲಿ ಆಕೆಯ ಪೋಷಕರ ಎದುರೇ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಒಟ್ಟಾರೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ಈ ಘಟನೆ. ಕಣ್ಣು ಅರಳಿಸಿ ಪ್ರಪಂಚ ನೋಡುವ ಮುನ್ನವೇ ಈ ಮುದ್ದಾದ ಹೆಣ್ಣು-ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ತಾಯಿ ಮಸಣಕ್ಕೆ ಹೋದರೆ, ತಂದೆ ಕೃಷ್ಣನ ಜನ್ಮಸ್ಥಳಕ್ಕೆ ಹೋಗಿದ್ದಾನೆ. ಆದ್ರೆ, ಈ ಮಕ್ಕಳನ್ನು ನೋಡಿದರೆ ಎಂತಹ ಕಲ್ಲು ಹೃದಯದವರ ಮನಸ್ಸು ಕೂಡ ಕರಗುತ್ತದೆ. ತಂದೆಯ ತಪ್ಪಿನಿಂದ ಇದೀಗ ಮಕ್ಕಳು ಕೊರಗುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ