ಆಪರೇಶನ್ ಸಮುದ್ರಗುಪ್ತ: 12000 ಕೋಟಿ ಮೌಲ್ಯದ ಡ್ರಗ್ಸ್ ಸೀಜ್, ಆರೋಪಿಗಳನ್ನು ಗೌಪ್ಯವಾಗಿಟ್ಟ NCB
ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗೆ ತಲುಪಿಸಲು ತರಲಾಗುತ್ತಿದ್ದ 12000 ಕೋಟಿ ರೂ. ಮೌಲ್ಯದ ಡ್ರಗ್ಸ್ನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಬೆಂಗಳೂರು: ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗೆ ತಲುಪಿಸಲು ತರಲಾಗುತ್ತಿದ್ದ 12000 ಕೋಟಿ ರೂ. ಮೌಲ್ಯದ ಡ್ರಗ್ಸ್ನ್ನು (Drugs) ಸೀಜ್ ಮಾಡಿದ್ದಾರೆ. ಬೆಂಗಳೂರು ಎನ್ಸಿಬಿ ಜೋನಲ್ ಡೈರೆಕ್ಟರ್ ಅರವಿಂದನ್, ಎನ್ಸಿಬಿ ಡೆಪ್ಯುಟಿ ಡೈರೆಕ್ಟರ್ ಸಂಜಯ್ ಕುಮಾರ್ ಸಿಂಗ್ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆಯಲಾಗಿದೆ. ನೇವಿ ಮತ್ತು ಎನ್ಎನ್ಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಆಪರೇಶನ್ ಸಮುದ್ರಗುಪ್ತ ಹೆಸರಲ್ಲಿ ಭಾರತದ ಸಮುದ್ರದಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನ್ನಿಂದ ಬೋಟ್ನಲ್ಲಿ ಭಾರತದ ಕಡೆಗೆ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು.
ಭಾರತದ ಇತಿಹಾಸದಲ್ಲಿ ಸೀಜ್ ಮಾಡಿರುವ ಅತಿದೊಡ್ಡ ಕಾರ್ಯಚರಣೆ ಇದಾಗಿದ್ದು, ಕ್ರಿಸ್ಟಲ್ ಮಾದರಿಯಲ್ಲಿ ಇದ್ದ 2500 ಕೆಜಿ ಡ್ರಗ್ಸ್ನ್ನು ಒಟ್ಟು 134 ಚೀಲಗಳಲ್ಲಿ ಪ್ಯಾಕ್ ಮಾಡಿತರಲಾಗಿತ್ತು. ಹೀಗೆ ಪ್ಯಾಕ್ ಮಾಡಿದ್ದ ಹಲವಾರು ಚೀಲದಲ್ಲಿ ಮೇಡ್ ಇನ್ ಪಾಕಿಸ್ತಾನ ಎಂಬ ಹೆಸರು ಮುದ್ರಿತ ಆಗಿದೆ. ಸದ್ಯ ಆರೋಪಿಗಳ ಗುರುತು ಗೌಪ್ಯವಾಗಿಟ್ಟಿದ್ದು, ಎನ್ಸಿಬಿ ತನಿಖೆ ಮುಂದುವರೆಸಿದ್ದಾರೆ.
ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್‌ಗಳ ಮೂಲಕ ಡ್ರಗ್ಸ್ ಮಾರುತ್ತಿದ್ದ ಆರೋಪಿಗಳ ಬಂಧನ
ಆನ್ಲೈನ್ನಲ್ಲಿ ಡೆಲಿವರಿ ಅಪ್ಲಿಕೇಶನ್‌ಗಳ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಅಶೋಕನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಡ್ರಗ್ಸ್‌ಗಳನ್ನು ಗಿಫ್ಟ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುತ್ತಿದ್ದರು ಮತ್ತು ಪ್ರತಿಯಾಗಿ ಅದೇ ಬ್ಯಾಕ್ಸ್ಗಳಲ್ಲಿ ಹಣ ಪಡೆಯುತ್ತಿದ್ದರು.
ಇದನ್ನೂ ಓದಿ: ಎದುರಿಗಿರುವವರು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ, ಬೆಂಗಳೂರಿನ ನಾಲ್ವರು ಅರೆಸ್ಟ್
ಆರೋಪಿಗಳು ಆಫ್ರಿಕನ್ ಪ್ರಜೆಗಳಿಂದ ಡ್ರಗ್ಸ್ ಪಡೆದು ನಗರದ ದಂಧೆ ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳ ಹಿಂದೆ, ಸಿಸಿಬಿ ಅಧಿಕಾರಿಗಳು, ಸುಳಿವು ಆಧರಿಸಿ, ಅವರನ್ನು ಪತ್ತೆಹಚ್ಚಿ ಬಂಧಿಸಿದ್ದರು. ಮಾದಕ ವಸ್ತುಗಳ ವಿರುದ್ಧ ಒಂದು ತಿಂಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 7 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್.ಡಿ. ಶರಣಪ್ಪ ತಿಳಿಸಿದ್ದರು.
19 ಮಂದಿಯ ಬಂಧನ
ಪೊಲೀಸರು ಕಳೆದ ಕೆಲವು ತಿಂಗಳಿನಿಂದ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು, 19 ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ 10 ಪೆಡ್ಲರ್‌ಗಳು ಕೇರಳದವರಾಗಿದ್ದರೇ, ಉಳಿದವರಲ್ಲಿ ಇಬ್ಬರು ನೈಜೀರಿಯಾ, ಐವರು ಕೋಸ್ಟ್‌ನವರಾಗಿದ್ದರು. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯದ ತಲಾ ಒಬ್ಬರನ್ನು ಬಂಧಿಸಿದ್ದರು.
ಇದನ್ನೂ ಓದಿ: ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಗಂಡನಿಂದ ದೂರು, ಉದ್ಯಮಿ ಪರಾರಿ
ಆರೋಪಿಗಳಿಂದ ಅಧಿಕಾರಿಗಳು 7.06 ಕೋಟಿ ರೂ. ಮೌಲ್ಯದ 6 ಕೆಜಿ ಡ್ರಗ್ಸ್, ಹ್ಯಾಶಿಶ್ ಆಯಿಲ್, 51.8 ಕೆಜಿ ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳು, 236 ಎಕ್‌ಸ್ಟಸಿ ಮಾತ್ರೆಗಳು, 34 ಎಲ್‌ಎಸ್‌ಡಿ ಸ್ಟ್ರಿಪ್‌ಗಳು ಮತ್ತು 23 ಗ್ರಾಂ ಕೊಕೇನ್ಅನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Sun, 14 May 23