ಒರೆಗಾನ್ ಸರಣಿ ಹಂತಕ ಬ್ರುಡೋಸ್ ಮಹಿಳೆಯರನ್ನು ಕೊಂದು ಸ್ಮರಣಾರ್ಥವಾಗಿ ಅವರ ಶೂಗಳನ್ನು ಗ್ಯಾರೇಜ್ ನಲ್ಲಿ ಬಚ್ಚಿಡುತ್ತಿದ್ದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 30, 2022 | 7:57 AM

ಲಿಂಡಾಳನ್ನು ಕೊಂದ ನಂತರ ಅವನು ಕರೆನ್ ಸ್ಪ್ರಿಂಕ್ಲರ್ 18, ಜಾನ್ ಸುಸಾನ್ ವ್ಹಿಟ್ನೀ 23 ಮತ್ತು 22-ವರ್ಷದ ಲಿಂಡಾ ಸ್ಯಾಲಿಯನ್ನು ಹತ್ಯೆಗೈದ. 1969 ರಲ್ಲಿ ಇಬ್ಬರು ಮಹಿಳೆಯರನ್ನು ಅಪಹರಿಸುವ ಪ್ರಯತ್ನವೂ ಬ್ರುಡೋಸ್ ನಿಂದ ನಡೆಯಿತು.

ಒರೆಗಾನ್ ಸರಣಿ ಹಂತಕ ಬ್ರುಡೋಸ್ ಮಹಿಳೆಯರನ್ನು ಕೊಂದು ಸ್ಮರಣಾರ್ಥವಾಗಿ ಅವರ ಶೂಗಳನ್ನು ಗ್ಯಾರೇಜ್ ನಲ್ಲಿ ಬಚ್ಚಿಡುತ್ತಿದ್ದ!
ಜೆರ್ರಿ ಬ್ರುಡೋಸ್ ಮತ್ತು ಅವನಿಗೆ ಬಲಿಯಾದ ಮಹಿಳೆಯರು
Follow us on

ಅರವತ್ತರ ದಶಕದ ಕೊನೆಭಾಗದಲ್ಲಿ ಅಮೆರಿಕದ ಮಹಿಳೆಯಲ್ಲಿ ಇನ್ನಿಲ್ಲದ ಭೀತಿ ಮೂಡಿಸಿದ್ದ ಜಿರೋಮ್ ಹೆನ್ರಿ ‘ಜೆರ್ರಿ’ ಬ್ರುಡೋಸ್ (Jerome Henry Jerry Brudos) ಅಮೆರಿಕದ ಸರಣಿ ಹಂತಕನಾಗಿದ್ದ (serial killer) ಮತ್ತು ತಾನು ಕೊಂದ ಮಹಿಳೆಯರ ದೇಹಗಳನ್ನು ಕೆಲ ಸಮಯದವರೆಗೆ ಗ್ಯಾರೇಜ್ ನಲ್ಲಿಟ್ಟು ಅವುಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಅಮೆರಿಕ ಒರೆಗಾನ್ ನಲ್ಲಿ (Oregon) ಬ್ರುಡೋಸ್ 1968 ಮತ್ತು 1969 ರ ನಡುವೆ ನಾಲ್ವರು ಮಹಿಳೆಯರನ್ನು ಕೊಂದಿದ್ದ. ಅವನಲ್ಲಿದ್ದ ಮತ್ತೊಂದು ವಿಲಕ್ಷಣ ಸ್ವಭಾವ ಏನು ಗೊತ್ತಾ? ಮಹಿಳೆಯರು ಧರಿಸುವ ಹೈ ಹೀಲ್ಡ್ ಚಪ್ಪಲಿಗಳು. ತಾನು ಕೊಂದ ಮಹಿಳೆಯರ ಹೈ ಹೀಲ್ಡ್ ಪಾದರಕ್ಷೆಗಳನ್ನು ನೆನಪಿನ ಕಾಣಿಕೆಗಳಾಗಿ ಅವನು ಇಟ್ಟುಕೊಳ್ಳುತ್ತಿದ್ದ!

ತಂದೆ ತಾಯಿಗಳ ಎರಡು ಮಕ್ಕಳಲ್ಲಿ ಕಿರಿಯವನಾಗಿದ್ದ ಬ್ರುಡೋಸ್ ಪೋಷಕರಿಗೆ ಬೇಡದ ಮಗುವಾಗಿದ್ದ. ಅವನಮ್ಮನಿಗೆ ಎರಡನೇ ಮಗು ಹೆಣ್ಣು ಬೇಕಿತ್ತು. ಆದರೆ ಹುಟ್ಟಿದ್ದು ಅವನು. ಸೆರೆಸಿಕ್ಕ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಅವನು ತನ್ನ ಬಾಲ್ಯ ಕೆಟ್ಟದ್ದಾಗಿತ್ತು, ಯಾತನಾಮಯವಾಗಿತ್ತು ಅಂತ ಹೇಳಿಕೊಂಡಿದ್ದಾನೆ. ತನ್ನಮ್ಮ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಬ್ರುಡೋಸ್ ಹೇಳಿದ್ದಾನೆ.

ಹದಿಹರೆಯದ ಹೆಚ್ಚಿನ ಭಾಗವನ್ನು ಅವನು ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಕಳೆದ. ಒಮ್ಮೆ ಒಳರೋಗಿಯಾಗಿ ಇನ್ಮೊಮ್ಮೆ ಹೊರರೋಗಿಯಾಗಿ.

ಬ್ರುಡೋಸ್ 17 ವರ್ಷದವನಾಗಿದ್ದಾಗ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಯುವತಿಯನ್ನು ಅಪಹರಿಸಿ ಅವಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದ. ಆಗ ಪೊಲೀಸರು ಅವನನ್ನು ಬಂಧಿಸಿ ಒರೆಗಾನ್ ಸರ್ಕಾರೀ ಆಸ್ಪತ್ರೆಯ ಸೈಕಿಯಾಟ್ರಿಕ್ ವಾರ್ಡ್ನಲ್ಲಿ ದಾಖಲಿಸಿದ ಬಳಿಕ ಒಂಬತ್ತು ತಿಂಗಳವರೆಗೆ ಚಿಕಿತ್ಸೆ ನೀಡಲಾಗಿತ್ತು. ಆಗಲೇ ಅವನು ಸ್ಕಿಜೊಫ್ರೆನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅಂಶ ಬೆಳಕಿಗೆ ಬಂದಿತ್ತು.

ಬ್ರುಡೋಸ್, 1961ರಲ್ಲಿ ಅವನು ಮದುವೆ ಮಾಡಿಕೊಂಡು ಎರಡು ಮಕ್ಕಳ ತಂದೆಯಾಗಿ ಒರೆಗಾನ್ ನಗರದ ಹೊರವಲಯದಲ್ಲಿ ವಾಸವಾಗಿದ್ದ. ಅಮೆರಿಕ ಅಪರಾಧ ಲೋಕದ ಇತಿಹಾಸ ಬ್ರುಡೋಸ್ ನನ್ನು ‘ಶೂ ಫೆಟಿಶ್ ಸ್ಲೇಯರ್’ ಜೊತೆ ‘ದಿ ಲಸ್ಟ್ ಕಿಲ್ಲರ್’ ಅಂತಲೂ ಗುರುತಿಸುತ್ತದೆ. ಒಂದು ಮಾಹಿತಿಯ ಪ್ರಕಾರ 5 ವರ್ಷದ ಪ್ರಾಯದಲ್ಲೇ ಅವನಿಗೆ ಮಹಿಳೆಯರ ಶೂಗಳ ಬಗ್ಗೆ ವ್ಯಾಮೋಹ ಆರಂಭವಾಗಿತ್ತು.

ಸರಣಿ ಹಂತಕರ ಬಗ್ಗೆ ಪೀಟರ್ ರಾಂಸ್ಕಿ ಬರೆದಿರುವ: ದಿ ಮೆಥಡ್ ಅಂಡ್ ಆಫ್ ಮಾನ್ಸ್ಟರ್ಸ್ ಪುಸ್ತಕದಲ್ಲಿ ಉಲ್ಲೇಖವಾಗಿರುವ ಹಾಗೆ ಬ್ರುಡೋಸ್ ಬಾಲ್ಯದಲ್ಲಿ ನೆರೆಹೊರೆಯ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. 1961 ರಿಂದ 1969 ರ ವರೆಗೆ ಅವನು ಹೆಂಗಸರ ಶೂ ಮತ್ತು ಒಳ ಉಡುಪುಗಳನ್ನು ಕದ್ದು ತನ್ನ ಗ್ಯಾರೇಜ್ ನಲ್ಲಿ ಬಚ್ಚಿಟ್ಟಿದ್ದ.

ಅವನಿಗೆ ಮೊದಲು ಬಲಿಯಾಗಿದ್ದು 19-ವರ್ಷ-ವಯಸ್ಸಿನ ಲಿಂಡಾ ಸ್ಲಾಸನ್. ಅವಳ ಮೇಲೆ ಅತ್ಯಾಚಾರವೆಸಗಿ ಕೊಂದು ಶೂ ಮತ್ತು ಒಂದು ಕಾಲನ್ನು ಸ್ಮರಣಾರ್ಥವಾಗಿ ಗ್ಯಾರೇಜಲ್ಲಿಟ್ಟಿದ್ದ.

ಲಿಂಡಾಳನ್ನು ಕೊಂದ ನಂತರ ಅವನು ಕರೆನ್ ಸ್ಪ್ರಿಂಕ್ಲರ್ 18, ಜಾನ್ ಸುಸಾನ್ ವ್ಹಿಟ್ನೀ 23 ಮತ್ತು 22-ವರ್ಷದ ಲಿಂಡಾ ಸ್ಯಾಲಿಯನ್ನು ಹತ್ಯೆಗೈದ. 1969 ರಲ್ಲಿ ಇಬ್ಬರು ಮಹಿಳೆಯರನ್ನು ಅಪಹರಿಸುವ ಪ್ರಯತ್ನವೂ ಬ್ರುಡೋಸ್ ನಿಂದ ನಡೆಯಿತು.

ಮೇ 1969 ರಲ್ಲಿ ಲಾಂಗ್ ಟಾಮ್ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರಿಗೆ ಸ್ಯಾಲಿ ಮತ್ತು ಸ್ಪ್ರಿಂಕ್ಲರ್ ದೇಹಗಳು ಸಿಕ್ಕವು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಬ್ರುಡೋಸ್ ಮೇಲೆ ಸಂಶಯ ಹುಟ್ಟಿ ಅವನನ್ನು ಬಂಧಿಸಿದರು.

ಜೂನ್ 28, 1969 ರಂದು ನ್ಯಾಯಾಲಯ ಎದುರು ಮೂವರು ಮಹಿಳೆಯರನ್ನು ಕೊಂದ ಸಂಗತಿಯನ್ನು ಬ್ರುಡೋಸ್ ಒಪ್ಪಿಕೊಂಡ. ನ್ಯಾಯಾಧೀಶರು ಒಂದಾದ ನಂತರ ಒಂದರಂತೆ ಮೂರು ಜೀವಾವಧಿ ಸೆರೆವಾಸದ ಶಿಕ್ಷೆಯನ್ನು ವಿಧಿಸಿದರು. ಸ್ಲಾಸನ್ ಕೊಂದಿದ್ದನ್ನೂ ಬ್ರುಡೋಸ್ ಕೋರ್ಟ್ ನಲ್ಲಿ ಒಪ್ಪಿಕೊಂಡನಾದರೂ ಈ ಅಪರಾಧಕ್ಕಾಗಿ ಯಾವತ್ತೂ ಅವನ ವಿಚಾರಣೆ ನಡೆಯಲಿಲ್ಲ.

ಅವನ ಬದುಕನ್ನಾಧರಿಸಿ ಮೈಂಡ್ ಹಂಟರ್ ಶೀರ್ಷೆಕೆಯ ಸೀರಿಯಲ್ ನೆಟ್ ಫ್ಲಿಕ್ಸ್ ನಲ್ಲಿ ಬಿತ್ತರಗೊಂಡಿದೆ.
ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬ್ರುಡೋಸ್ 2006ರಲ್ಲಿ ಜೇಲಿನಲ್ಲೇ ಕೊನೆಯುಸಿರೆಳೆದ.

ಮತ್ತಷ್ಟು ಕ್ರೈಮ್​  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ