ಪಾದರಾಯನಪುರ ಪುಂಡಾಟಿಕೆ: ಪೊಲೀಸರಿಗೂ ಕ್ವಾರಂಟೈನ್ ‘ಬಂಧನ’

|

Updated on: Apr 25, 2020 | 11:25 AM

ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್​ ಮೇಲೆ ಪುಂಡಾಟ ನಡೆಸಿದ್ದ ಆರೋಪಿಗಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ಪುಂಡರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರನ್ನೂ ಸಹ ಕ್ವಾರಂಟೈನ್ ಮಾಡಲಾಗಿದೆ. ಗಾಂಧಿನಗರದ ರಾಜ್​ಮಹಲ್ ಹೋಟೆಲ್​ನಲ್ಲಿ ಪೊಲೀಸರ ‘ಬಂಧನ’ ಪುಂಡರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಈಗಾಗಲೇ ಐವರು ಪುಂಡರಿಗೆ ಕೊರೊನಾ ಅಟ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಂಗಳೂರು ಉತ್ತರ, ಪಶ್ಚಿಮ ವಿಭಾಗ, ಸಿಸಿಬಿ ಪೊಲೀಸರು ಸೇರಿದಂತೆ ಒಟ್ಟು 23 ಜನರಿಗೆ ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು […]

ಪಾದರಾಯನಪುರ ಪುಂಡಾಟಿಕೆ: ಪೊಲೀಸರಿಗೂ ಕ್ವಾರಂಟೈನ್ ‘ಬಂಧನ’
Follow us on

ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್​ ಮೇಲೆ ಪುಂಡಾಟ ನಡೆಸಿದ್ದ ಆರೋಪಿಗಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗಾಗಿ ಪುಂಡರನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರನ್ನೂ ಸಹ ಕ್ವಾರಂಟೈನ್ ಮಾಡಲಾಗಿದೆ.

ಗಾಂಧಿನಗರದ ರಾಜ್​ಮಹಲ್ ಹೋಟೆಲ್​ನಲ್ಲಿ ಪೊಲೀಸರ ‘ಬಂಧನ’
ಪುಂಡರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಈಗಾಗಲೇ ಐವರು ಪುಂಡರಿಗೆ ಕೊರೊನಾ ಅಟ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಂಗಳೂರು ಉತ್ತರ, ಪಶ್ಚಿಮ ವಿಭಾಗ, ಸಿಸಿಬಿ ಪೊಲೀಸರು ಸೇರಿದಂತೆ ಒಟ್ಟು 23 ಜನರಿಗೆ ನಗರದ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಟಿವಿ9ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Published On - 11:23 am, Sat, 25 April 20