ಲಾಕ್ಡೌನ್ ವೇಳೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಯ್ತಂತೆ, ಸರ್ಕಾರ ಕೊಟ್ಟ ಲೆಕ್ಕ ಇಲ್ಲಿದೆ
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ದೇಶವನ್ನೇ ಲಾಕ್ಡೌನ್ನಲ್ಲಿಡಲಾಗಿದೆ. ಇದರಿಂದ ಜನರು ರಸ್ತೆಗಿಳಿಯದೆ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಆದ್ರೆ ಈ ಲಾಕ್ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಟ್ಟು 480 ದೂರುಗಳನ್ನು ಸ್ವೀಕರಿಸಲಾಗಿದೆ. ಸಾಂತ್ವನ ಕೇಂದ್ರಗಳಿಗೆ 315 ಕರೆಗಳು ಬಂದಿದ್ದು, ಮಹಿಳಾ ಸಹಾಯವಾಣಿಗೆ 165 ಕರೆಗಳು ಬಂದಿವೆ. 18 ಸಂರಕ್ಷಣಾಧಿಕಾರಿಗಳು ಹಾಗೂ 186 ಪ್ರಭಾರಿಗಳಿದ್ದಾರೆ ಎಂದು ಸರ್ಕಾರ ಮಾಹಿತಿ ಕೊಟ್ಟಿದೆ. ಕೌಟುಂಬಿಕ ದೌರ್ಜನ್ಯ […]
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ದೇಶವನ್ನೇ ಲಾಕ್ಡೌನ್ನಲ್ಲಿಡಲಾಗಿದೆ. ಇದರಿಂದ ಜನರು ರಸ್ತೆಗಿಳಿಯದೆ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಆದ್ರೆ ಈ ಲಾಕ್ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಟ್ಟು 480 ದೂರುಗಳನ್ನು ಸ್ವೀಕರಿಸಲಾಗಿದೆ. ಸಾಂತ್ವನ ಕೇಂದ್ರಗಳಿಗೆ 315 ಕರೆಗಳು ಬಂದಿದ್ದು, ಮಹಿಳಾ ಸಹಾಯವಾಣಿಗೆ 165 ಕರೆಗಳು ಬಂದಿವೆ. 18 ಸಂರಕ್ಷಣಾಧಿಕಾರಿಗಳು ಹಾಗೂ 186 ಪ್ರಭಾರಿಗಳಿದ್ದಾರೆ ಎಂದು ಸರ್ಕಾರ ಮಾಹಿತಿ ಕೊಟ್ಟಿದೆ.
ಕೌಟುಂಬಿಕ ದೌರ್ಜನ್ಯ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿದ್ದಾರೆಯೇ? ಈ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತು. ಲಾಕ್ಡೌನ್ ಅವಧಿಯಲ್ಲಿ ಮಾನಸಿಕ ಕ್ಷೋಭೆ ಹಿನ್ನೆಲೆಯಲ್ಲಿ ನಿಮ್ಹಾನ್ಸ್ನಿಂದ ಕೆಲ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ. ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಲು ನಿಮ್ಹಾನ್ಸ್ನ ಡಾ.ನವೀನ್ ಕುಮಾರ್ಗೆ ಸೂಚನೆ ನೀಡಿ, ವಿಚಾರಣೆಯನ್ನ ಏ.28ಕ್ಕೆ ಹೈಕೋರ್ಟ್ ಮುಂದೂಡಿತು.
Published On - 2:51 pm, Sat, 25 April 20