ಬೆಂಗಳೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೊವಿಡ್ ವಾರಿಯರ್ಸ್ ಮೇಲೆ ಗೂಂಡಾಗಿರಿ ನಡೆಸಿದ್ದ ಪಾದರಾಯನಪುರ ಪುಂಡರಿಗೆ ಜಾಮೀನು ದೊರೆತಿದೆ. ಎಲ್ಲಾ 126 ಆರೋಪಿಗಳಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಎಲ್ಲಾ ಆರೋಪಿಗಳಿಗೂ ಕೊವಿಡ್ 19 ಪರೀಕ್ಷೆ ನಡೆಸಬೇಕು. ಸೋಂಕು ಇರುವವರಿಗೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಎಲ್ಲರೂ ಕೊವಿಡ್-19 ಮಾರ್ಗಸೂಚಿ ಪಾಲಿಸಲೇಬೇಕು. ಇಲ್ಲವಾದರೆ ಜಾಮೀನು ರದ್ದುಗೊಳ್ಳುವುದಾಗಿ ಷರತ್ತುಗಳನ್ನು ವಿಧಿಸಿದೆ.
ಇದೇ ವೇಳೆ 1 ಲಕ್ಷ ರೂಪಾಯಿ ಬಾಂಡ್, ಶ್ಯೂರಿಟಿ ಒದಗಿಸಬೇಕೆಂದು ನ್ಯಾ.ಜಾನ್ ಮೈಕೆಲ್ ಕುನ್ಹಾರವರ ಪೀಠ ಆದೇಶ ನೀಡಿದೆ. ಆರೋಪಿಗಳ ಪರ ವಕೀಲ ಇಸ್ಮಾಯಿಲ್ ಅರ್ಜಿ ಸಲ್ಲಿಸಿದ್ದರು.