ಕೊರೊನಾ ಸಂಕಷ್ಟದಲ್ಲೂ ಭ್ರಷ್ಟಾಚಾರ: ಮೂವರು ಸಬ್ ರಿಜಿಸ್ಟ್ರಾರ್ಸ್ ಸಸ್ಪೆಂಡ್
ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆಯೂ ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ರಾ ಸಬ್ ರಿಜಿಸ್ಟ್ರಾರ್ಗಳು? ಬೆಂಗಳೂರಿನಲ್ಲಿ ಮೂವರು ಸಿನಿಯರ್ ಸಬ್ ರಿಜಿಸ್ಟ್ರಾರ್ಗಳನ್ನು ಅಮಾನತು ಮಾಡಲಾಗಿದೆ. ಮೂವರ ವಿರುದ್ಧವೂ ಇಲಾಖಾ ತನಿಖೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿಆರ್ ಕೆ.ಪಿ.ಮೋಹನ್ ರಾಜ್ ಆದೇಶ ಮಾಡಿದ್ದಾರೆ. ಮಾದನಾಯಕನಹಳ್ಳಿ ಹಿರಿಯ ಉಪನೋಂದಣಾಧಿಕಾರಿ ಲಲಿತಾ ಅಮೃತೇಶ್, ಜಾಲ ಹಿರಿಯ ಉಪನೋಂದಣಾಧಿಕಾರಿ ರಾಮಪ್ರಸಾದ್, ದಾಸನಪುರ ಹಿರಿಯ ಉಪನೋಂದಣಾಧಿಕಾರಿ ಮಧುಕುಮಾರ ಅಮಾನತಾದವರು. ಅಧಿಕಾರಿಗಳ ಮೇಲಿರುವ ಆರೋಪಗಳು: ಕಂಪ್ಯೂಟರ್ ಫಾರಂ 9 ಮತ್ತು 11ಎ, 11ಬಿಯನ್ನು ಪಡೆಯದೆ ನೋಂದಣಿ ಮಾಡಿದ್ದಾರೆ. […]
ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆಯೂ ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ರಾ ಸಬ್ ರಿಜಿಸ್ಟ್ರಾರ್ಗಳು? ಬೆಂಗಳೂರಿನಲ್ಲಿ ಮೂವರು ಸಿನಿಯರ್ ಸಬ್ ರಿಜಿಸ್ಟ್ರಾರ್ಗಳನ್ನು ಅಮಾನತು ಮಾಡಲಾಗಿದೆ. ಮೂವರ ವಿರುದ್ಧವೂ ಇಲಾಖಾ ತನಿಖೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿಆರ್ ಕೆ.ಪಿ.ಮೋಹನ್ ರಾಜ್ ಆದೇಶ ಮಾಡಿದ್ದಾರೆ.
ಮಾದನಾಯಕನಹಳ್ಳಿ ಹಿರಿಯ ಉಪನೋಂದಣಾಧಿಕಾರಿ ಲಲಿತಾ ಅಮೃತೇಶ್, ಜಾಲ ಹಿರಿಯ ಉಪನೋಂದಣಾಧಿಕಾರಿ ರಾಮಪ್ರಸಾದ್, ದಾಸನಪುರ ಹಿರಿಯ ಉಪನೋಂದಣಾಧಿಕಾರಿ ಮಧುಕುಮಾರ ಅಮಾನತಾದವರು.
ಅಧಿಕಾರಿಗಳ ಮೇಲಿರುವ ಆರೋಪಗಳು: ಕಂಪ್ಯೂಟರ್ ಫಾರಂ 9 ಮತ್ತು 11ಎ, 11ಬಿಯನ್ನು ಪಡೆಯದೆ ನೋಂದಣಿ ಮಾಡಿದ್ದಾರೆ. ಅಲ್ಲದೇ ಕಾವೇರಿ ಇ-ಸ್ವತ್ತು ಪಡೆಯದೇ ಕೆಲ ಆಸ್ತಿಗಳ ರಿಜಿಸ್ಟರ್ ಮಾಡಿರುವ ಆರೋಪವಿದೆ. ಏಪ್ರಿಲ್ 24 ರಿಂದ ಮೇ 18ರ ವೇಳೆ ನಡೆದ ನೋಂದಣಿಯಲ್ಲಿ ಈ ಕೃತ್ಯ ಎಸಗಿದ್ದಾರೆ.
ಕೆಲವೊಂದು ಆಸ್ತಿಗಳಿಗೆ ಇ-ಖಾತೆ ಇಲ್ಲದಂತೆ ಆಸ್ತಿ ನೋಂದಣಿ ಮಾಡಿದ್ದಾರೆ. ಇದಕ್ಕಾಗಿ ಅವರು ಹಣ ಪಡೆದು ಭ್ರಷ್ಟಾಚಾರ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೆಲವೊಂದೆಡೆ ಕಾವೇರಿ ತಂತ್ರಜ್ಞಾನದಲ್ಲಿ ಸುಳ್ಳು ಮಾಹಿತಿ ಎಂಟ್ರಿ ಮಾಡಿದ್ದಾರೆ. ಕೆಲವೊಂದು ಗ್ರಾಮೀಣ ಪ್ರದೇಶ ಆಸ್ತಿಗಳಿಗೆ ಬಿಬಿಎಂಪಿ ವ್ಯಾಪ್ತಿ ಎಂದು ಉಲ್ಲೇಖಿಸಿದ್ದಾರೆ. ಅಂದ್ರೆ ಆ ಜಾಗದ ಮೌಲ್ಯ ಹೆಚ್ಚು ಮಾಡಲು ಸುಳ್ಳಿ ಎಂಟ್ರಿ ನೀಡಲಾಗಿದೆ.
ಆ ಜಾಗದ ಮಾಲೀಕರಿಗೆ ಮುಂದೆ ಮಾರಾಟ ಮಾಡಲು ಹೆಚ್ಚು ಲಾಭ ತರುವ ಉದ್ದೇಶದಿಂದ ಈ ರೀತಿಯಾಗಿ ಮಾಡಿದ್ದಾರೆ. ನಗರ ವ್ಯಾಪ್ತಿಯ ಆಸ್ತಿ ಅಂತಾ ತೋರಿಸಿ ಅದಕ್ಕೆ ಅವರಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪವಿದೆ. ಜಿಲ್ಲಾ ನೋಂದಣಾಧಿಕಾರಿಗಳು ತನಿಖೆ ಮಾಡಿದಾಗ ಈ ಅಂಶ ಬಯಲಾಗಿದೆ. ಅಲ್ಲದೆ ಈ ಅಧಿಕಾರಿಗಳು ಇನ್ನೂ ಲಕ್ಷಾಂತರ ರೂಪಾಯಿ ಹಣ ಪಡೆದಿರುವ ಅನುಮಾನ ವ್ಯಕ್ತವಾಗಿದೆ.