ಟರ್ಕಿ ದೇಶದ ಜೊತೆ ಸಂಪರ್ಕ ಹೊಂದಿದ್ದ ಪಿಎಫ್ಐಗೆ ಹರಿದುಬಂದ ಹಣದ ಹೊಳೆ

| Updated By: Rakesh Nayak Manchi

Updated on: Oct 11, 2022 | 2:08 PM

ಪಿಎಫ್​​ಐ ಮುಖಂಡರನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಎನ್​ಐಎ, ಆರೋಪಿಗಳಿಂದ ಒಂದೊಂದೇ ಮಾಹಿತಿಯನ್ನು ಹೊರಹಾಕಿಸುತ್ತಿದೆ. ಟರ್ಕಿ ದೇಶದ ಜತೆ ಸಂಪರ್ಕ ಹೊಂದಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ.

ಟರ್ಕಿ ದೇಶದ ಜೊತೆ ಸಂಪರ್ಕ ಹೊಂದಿದ್ದ ಪಿಎಫ್ಐಗೆ ಹರಿದುಬಂದ ಹಣದ ಹೊಳೆ
ಟರ್ಕಿ ದೇಶದ ಜತೆ ಸಂಪರ್ಕ ಹೊಂದಿದ್ದ ಪಿಎಫ್ಐಗೆ ಹರಿದುಬಂದ ಹಣದ ಹೊಳೆ
Image Credit source: Ramandeep Kaur | ThePrint
Follow us on

ಬೆಂಗಳೂರು: ನಿಷೇಧಿತ ಪಿಎಫ್​ಐ ಸಂಘಟನೆಯ ಮುಖಂಡರನ್ನು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಸಾಕಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪಿಎಫ್​ಐಗೆ ಟರ್ಕಿ ದೇಶದ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ತಿಳಿದುಬಂದಿದ್ದು, ಟರ್ಕಿ, ಕತಾರ್​ ದೇಶಗಳಿಂದ ಹಣದ ಹೊಳೆಯೇ ಹರಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಟರ್ಕಿ, ಕತಾರ್​ ದೇಶಗಳಿಂದ ಕೇರಳ ಮೂಲಕ ಪಿಎಫ್​ಐಗೆ ಹವಲಾ ಹಣ ಸಂದಾಯವಾಗುತ್ತಿತ್ತು. ನಂತರ ದೇಶದ ವಿವಿಧ ಕಡೆಗಳಲ್ಲಿರುವ ಪಿಎಫ್​ಐ ಖಾತೆಗಳಿಗೆ ವರ್ಗಾವಣೆಯಾಗುತ್ತಿತ್ತು ಎನ್ನಲಾಗುತ್ತಿದೆ.

ಹೀಗೆ ಹರಿದುಬಂದ ಹಣವನ್ನು ದೇಶ ವಿರೋಧಿ ಕೃತ್ಯಕ್ಕೆ, ಸರ್ಕಾರದ ವಿರುದ್ಧದ ಪ್ರತಿಭಟನೆ, ಅಪರಾಧಿ ಕೃತ್ಯಗಳಲ್ಲಿ ಬಂಧಿತ PFI ಸದಸ್ಯರ ಕುಟುಂಬಗಳಿಗೆ ನೆರವು ಮತ್ತು ತರಬೇತಿ ಶಿಬಿರಗಳಿಗೆ ಬಳಕೆ ಮಾಡಲಾಗುತ್ತಿತ್ತು ಎಂಬೂದು ತನಿಖೆ ವೇಳೆ ತಿಳಿದುಬಂದಿದೆ.

ಕತಾರ್​ಗೆ ಭೇಟಿ ಕೊಟ್ಟ ಪಿಎಫ್​ಐ ತಂಡ

ಭಾರತದಿಂದ ಪಿಎಫ್ಐನ ಒಂದು ತಂಡ ಕತಾರ್​ನಲ್ಲಿನ ದೋಹ ಎಂಬ ಪ್ರದೇಶದಕ್ಕೆ ಬೇಟಿ ನೀಡಿದ್ದು, ಟರ್ಕಿಯಿಂದ ಸಹ ಒಂದು ತಂಡ ಕತಾರ್​​ನ ದೋಹಕ್ಕೆ ಬಂದಿದೆ. ಇಲ್ಲಿ ಎರಡು ದಿನಗಳ ಕಾಲ ಸಭೆ ನಡೆಸಲಾಗಿದೆ. ದೇಶದಲ್ಲಿ ನಡೆದ ಸಿಎಎ ಪ್ರತಿಭಟನೆ ಸೇರಿ ಬೇರೆ ಬೇರೆ ಹಂತದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಎಲ್ಲಾ ಈ ಟರ್ಕಿಯಿಂದ ಹಣ ರವಾನೆ ಅಗಿದೆ. ಈ ಹಣವು ಟರ್ಕಿ ಮೀಟಿಂಗ್ ಬಳಿಕ ವರ್ಗಾವಣೆಯಾಗಿದೆ. ಇದಾದ ಬಳಿಕ ಪಿಎಫ್​ಐನಿಂದ ತೀವ್ರ ಚಟುವಟಿಕೆಗಳು ಆರಂಭವಾದವು. ಸದ್ಯ ಟರ್ಕಿಗೆ ಹೋಗಿದ್ದು, ಅಲ್ಲಿಂದ ಭಾರತಕ್ಕೆ ಹಣ ಬಂದಿದ್ದು ಎಲ್ಲವನ್ನು ಟೈಮ್ ಮ್ಯಾಪಿಂಗ್ ಮಾಡಿರುವ ಎನ್ಐಎ ಟರ್ಕಿ ತೆರಳಿದ್ದ ಸಂಪೂರ್ಣ ಸಾಕ್ಷಿಗಳನ್ನು ಕಲೆಗಾಕಿಕೊಂಡಿದೆ. ಇದನ್ನು ಮುಂದಿಟ್ಟುಕೊಂಡು ಪಿಎಫ್​ಐ ಮುಖಂಡರನ್ನು ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ