Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿ ಮೇಲೆ ವಿಲಕ್ಷಣ ಪ್ರೇಮಿಗೆ ಅದೆಷ್ಟು ಕೋಪವಿತ್ತೆಂದರೆ ಅವಳನ್ನು ಉಸಿರುಗಟ್ಟಿಸಿ ಕೊಂದ ಬಳಿಕವೂ ದೇಹಕ್ಕೆ ಚಾಕುವಿನಿಂದ ಹತ್ತಾರು ಬಾರಿ ತಿವಿದಿದ್ದ!

ಅವಳ ದೇಹದ ಮೇಲೆ ಚಾಕುವೊಂದರಿಂದ ತಿವಿದ ಗಾಯಗಳು ಆಕೆ ಸತ್ತ ಮೇಲೆ ಆಗಿವೆ ಎಂದು ಮೆಸ್ಸೀಯ ವಕೀಲ ಡ್ಯಾನ್ ಟ್ರೇವರ್ಸ್ ಹೇಳಿದ್ದಾರೆ. ತಮ್ಮ ಕಕ್ಷಿದಾರನ ಬಗ್ಗೆ ಮಾತಾಡಿರುವ ವಕೀಲರು, ‘ಅವಳನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ’ ಅಂತ ಮೆಸ್ಸೀ ಹೇಳಿದ್ದಾನೆ ಅಂದರು.

ಪ್ರೇಯಸಿ ಮೇಲೆ ವಿಲಕ್ಷಣ ಪ್ರೇಮಿಗೆ ಅದೆಷ್ಟು ಕೋಪವಿತ್ತೆಂದರೆ ಅವಳನ್ನು ಉಸಿರುಗಟ್ಟಿಸಿ ಕೊಂದ ಬಳಿಕವೂ ದೇಹಕ್ಕೆ ಚಾಕುವಿನಿಂದ ಹತ್ತಾರು ಬಾರಿ ತಿವಿದಿದ್ದ!
ಜಾಕ್ವೆಲಿನ್ ಫಾರೆಸ್ಟ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 11, 2022 | 6:16 PM

ದಯಾಳು ಮತ್ತು ಹಾಸ್ಯಪ್ರವೃತ್ತಿಯ ಮಹಿಳೆಯಾಗಿದ್ದ ತನ್ನ ಪ್ರೇಯಸಿಯನ್ನು ಅವಳ ಮನೆಯಲ್ಲೇ ಕೊಂದ ಬಳಿಕ ಅವಳ ಪ್ರಿಯಕರ ಮೃತದೇಹವನ್ನು ಸಹ ಹಲವಾರು ಬಾರಿ ತಿವಿದ ವಿಲಕ್ಷಣ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. 43-ವರ್ಷ-ವಯಸ್ಸಿನ ರಾಬರ್ಟ್ ಮೆಸ್ಸೀ (Robert Massey) ತನ್ನ ಗರ್ಲ್ಫ್ರೆಂಡ್ 49-ವರ್ಷ-ವಯಸ್ಸಿನ ಜಾಕ್ವೆಲಿನ್ ಫಾರೆಸ್ಟ್ ಳನ್ನು (Jacqueline Forrest) ಆಗಸ್ಟ್ 30 ರಂದು ಕೊಂದಿರುವುದಾಗಿ ಲಿವರಫೂಲ್ ಕ್ರೌನ್ ನ್ಯಾಯಾಲಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲದೆ, ಅಂತೋಣಿ ಪೌಲ್ ಮರ್ಫಿ ಮತ್ತು ಗ್ರಹಾಂ ರಾಬರ್ಟ್ಸ್ (Graham Roberts) ಹೆಸರಿನ ಇಬ್ಬರು ವ್ಯಕ್ತಿಗಳನ್ನು ಕೊಲ್ಲುವ ಪ್ರಯತ್ನ ಮಾಡಿದ್ದನ್ನು ಸಹ ಅವನು ಕೋರ್ಟಲ್ಲಿ ಅಂಗೀಕರಿಸಿದ್ದಾನೆ.

ಆಗಸ್ಟ್ 31 ರಂದು ಹೇಡಾಕ್ ನ ಪೀಲೆ ರಸ್ತೆಯಲ್ಲಿರುವ ಜಾಕ್ವೆಲಿನ್ ಮನೆಯ ನೆರೆಗೊರೆಯವರು ಅವಳ ಸುರಕ್ಷತೆಯ ಬಗ್ಗೆ ಕಳವಳಗೊಂಡು ಮರ್ಸಿಸೈಡ್ ಪೊಲೀಸರಿಗೆ ಫೋನ್ ಮಾಡಿ ಅವಳ ಮನೆ ಕರೆಸಿದ್ದಾರೆ. ತನ್ನ ಸ್ನೇಹಿತರಿಂದ ಜಾಕಿ ಎಂದು ಕರೆಸಿಕೊಳ್ಳುತ್ತಿದ್ದ ಜಾಕ್ವೆಲಿನ್ ದೇಹ ಅವಳ ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿದೆ. ಜಾಕಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವಳ ಸಾವು ತಲೆಗೆ ಬಲವಾದ ಹೊಡೆತದಿಂದಾದ ಪೆಟ್ಟು ಮತ್ತು ಮಾನವಕೃತ ಉಸಿರುಗಟ್ಟಿಸುವಿಕೆಯಿಂದ ಸಂಭವಿಸಿದೆ ಅಂತ ಹೇಳಲಾಗಿದೆ.

ಅವಳ ದೇಹದ ಮೇಲೆ ಚಾಕುವೊಂದರಿಂದ ತಿವಿದ ಗಾಯಗಳು ಆಕೆ ಸತ್ತ ಮೇಲೆ ಆಗಿವೆ ಎಂದು ಮೆಸ್ಸೀಯ ವಕೀಲ ಡ್ಯಾನ್ ಟ್ರೇವರ್ಸ್ ಹೇಳಿದ್ದಾರೆ. ತಮ್ಮ ಕಕ್ಷಿದಾರನ ಬಗ್ಗೆ ಮಾತಾಡಿರುವ ವಕೀಲರು, ‘ಅವಳನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ’ ಅಂತ ಮೆಸ್ಸೀ ಹೇಳಿದ್ದಾನೆ ಅಂದರು.

ಮೊದಲು ನಡೆದ ವಿಚಾರಣೆಯಲ್ಲಿ ವಿಡಿಯೋ ಲಿಂಕ್ ಮೂಲಕ ಹಾಜರಾಗಿದ್ದ ಮೆಸ್ಸೀ ನಂತರದ ವಿಚಾರಣೆಯಲ್ಲಿ ಖುದ್ದಾಗಿ ಕೋರ್ಟ್ ಮುಂದೆ ಹಾಜರಾಗಿದ್ದ. ಎರಡನೇ ವಿಚಾರಣೆಯಲ್ಲಿ ಅವನು ಆಗಸ್ಟ್ 31 ರಂದು ಮರ್ಫಿ ಮತ್ತು ರಾಬರ್ಟ್ಸ್ ರನ್ನು ಕೊಲೆ ಮಡುವ ಪ್ರಯತ್ನ ನಡೆಸಿದ್ದನ್ನು ಮತ್ತು ಅದೇ ದಿನ ಲಿವರಪೂಲ್ ನ ಚಾರ್ನಕ್ ರಸ್ತೆಯಲ್ಲಿ ನ ತನ್ನೊಂದಿಗೆ ಒಂದು ಹರಿತವಾದ ಕತ್ತರಿ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಮೆಸ್ಸೀ ಈಗ ಪೊಲೀಸ್ ಕಸ್ಟಡಿಯಲ್ಲಿದ್ದು ಅವನಮ ಶಿಕ್ಷೆಯ ಪ್ರಮಾಣವನ್ನು ನವೆಂಬರ 10 ರಂದು ಪ್ರಕಟಿಸಲಾಗುವುದು. ಮೊದಲಿಗೆ ವಿಚಾರಣೆ ದಿನಾಂಕವನ್ನು ಮುಂದಿನ ಫೆಬ್ರುವರಿಗೆ ನಿಗದಿಪಡಿಸಲಾಗಿತ್ತಾದರೂ ನಂತರ ಅದನ್ನು ರದ್ದು ಮಾಡಲಾಯಿತು.

‘ಮೆಸ್ಸೀಯ ವಕೀಲರು ಮತ್ತು ಸರ್ಕಾರಿ ವಕೀಲರಿ ಹೆಚ್ಚಿನ ತಯಾರಿಗಾಗಿ ಸಮಯ ಕೇಳಿರುವುದರಿಂದ ಅವನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ದಿನಾಂಕವನ್ನು ನವೆಂಬರ್ 10 ಕ್ಕೆ ಮುಂದೂಡಲಾಗಿದೆ,’ ಎಂದು ನ್ಯಾಯಾಧೀಶ ಬ್ರಿಯಾನ್ ಕುಮ್ಮಿಂಗ್ಸ್ ಹೇಳಿದ್ದಾರೆ.

ಮೆಸ್ಸೀಯು ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿರುವುದರಿಂದ ಶಿಕ್ಷೆಯ ಪ್ರಮಾಣದಲ್ಲಿ ಕೊಂಚ ರಿಯಾಯಿತಿ ಪಡೆಯಲು ಅರ್ಹನಾಗಿದ್ದಾನೆ. ಶಿಕ್ಷೆಯ ಪ್ರಮಾಣ ಮುಂದಿನ ವಿಚಾರಣೆಯಲ್ಲಿ ಗೊತ್ತಾಗಲಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಜಾಕಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಸ್ನೇಹಿತರು ಆಕೆ ದಯಾಳು ಮತ್ತು ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿದ್ದಳು ಮತ್ತು ತಮ್ಮೊಂದಿಗೆ ನಿರಂತರವಾಗಿ ಜೋಕ್ ಗಳನ್ನು ಶೇರ್ ಮಾಡುತ್ತಿದ್ದಳು ಅಂತ ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟೊಂದನ್ನು ಶೇರ್ ಮಾಡಿರುವ ಸೂಸನ್ ಹಂಟರ್ ಎನ್ನವವರು ಹೀಗೆ ಬರೆದಿದ್ದಾರೆ: ‘ರಿಪ್ ಜಾಕಿ, ವಜ್ರದಂತೆ ಹೊಳೆಯುತ್ತಿರು.’ ಟ್ರೇಸಿ ಸ್ಟ್ಯಾನ್ಲೀ ಹೆಸರಿನ ಮತ್ತೊಬ್ಬರು, ‘ರಿಪ್ ಜಾಕಿ, ಅವಳ ಕುಟುಂಬ ಮತ್ತು ಆಕೆಯ ಪ್ರೀತಿಪಾತ್ರರ ಬಗ್ಗೆ ಯೋಚನೆ ಮಾಡುತ್ತಿರುವೆ,’ ಎಂದು ಬರೆದಿದ್ದಾರೆ.

Published On - 6:15 pm, Tue, 11 October 22