ನನಗೆ ಸಹಕರಿಸುವಂತೆ ಸ್ಟಾಪ್ ನರ್ಸ್​ಗೆ ಕಿರುಕುಳ: ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲು

ಸ್ಟಾಪ್ ನಸ್೯ಗೆ ದೈಹಿಕ ಕಿರುಕುಳ ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯನ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನನಗೆ ಸಹಕರಿಸುವಂತೆ ಸ್ಟಾಪ್ ನರ್ಸ್​ಗೆ ಕಿರುಕುಳ: ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲು
ಸ್ಟಾಫ್ ನರ್ಸ್​ಗೆ ದೈಹಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ವೈದ್ಯನ ವಿರುದ್ಧ ದೂರು ದಾಖಲು (ಸಾಂದರ್ಭಿಕ ಚಿತ್ರ)
Updated By: Rakesh Nayak Manchi

Updated on: Jul 15, 2023 | 9:14 AM

ಕೊಪ್ಪಳ, ಜುಲೈ 15: ಸ್ಟಾಪ್ ನಸ್೯ಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ (Physical harassment) ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯನ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನಗೆ ಸಹಕರಿಸು ಎಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಸ್ವತಃ ನರ್ಸ್​ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಕೊಪ್ಪಳ ತಾಲೂಕು ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಮೂಲಿಮನಿ ಸ್ಟಾಪ್ ನಸ್೯ ಅಮಿನಾ ಬೇಗಂ ಅವರಿಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದನು. ಈ ವಿಚಾರವನ್ನು ಅಮಿನಾ ಅವರು ತನ್ನ ಪತಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ವೈದ್ಯ ರಮೇಶ್, ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದು, ಸಂಸಾರ ಒಡೆಯುತ್ತೆನೆ, ದಂಪತಿಯನ್ನು ಬೇರ್ಪಡಿಸುತ್ತೆನೆಂದು ಅವಾಜ್ ಹಾಕಿದ್ದನಂತೆ.

ಇದನ್ನೂ ಓದಿ: ಕಲಬುರಗಿ: ಕಿರುಕುಳಕ್ಕೆ ಬೇಸತ್ತು ಕೆಎಸ್​ಆರ್​ಟಿಸಿ ನೌಕರ ಆತ್ಮಹತ್ಯೆಗೆ ಯತ್ನ

ಅಷ್ಟಕ್ಕೂ ನಿಲ್ಲದ ವೈದ್ಯ ರಮೇಶ್​ನ ಕಿರುಕುಳ, ಅಮಿನಾ ಅವರ ಕಳೆದ ಎರಡೂ ತಿಂಗಳ ಸಂಬಳ ತಡೆಹಿಡಿದಿದ್ದಾನೆ. ಇದನ್ನ ಕೇಳಲು ಹೋಗಿದ್ದ ಅಮಿನಾ ಪತಿಯ ವಿರುದ್ಧವೇ ದೂರು ನೀಡಿ ಜೈಲಿಗಟ್ಟಿದ್ದನು. ಸದ್ಯ ಕಿರುಕುಳದಿಂದ ಬೇಸತ್ತ ಅಮಿನಾ ಬೇಗಂ ಅವರು ಅಳವಂಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದರ ಅನ್ವಯ ಪೊಲೀಸರು ವೈದ್ಯ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sat, 15 July 23