Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್ ಕಾಯಿನ್ ಹಗರಣ ಮರು ತನಿಖೆ ಮುಂದಿದೆ ಸಾಲು-ಸಾಲು ಸವಾಲು

ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಮರು ತನಿಖೆಯದ್ದೆ ಸದ್ದು ಪ್ರಾರಂಭವಾಗಿದೆ. ಸರ್ಕಾರ ಕೂಡ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ SIT ತಂಡ ರಚಿಸಿದೆ. ಆದ್ರೆ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಇಸ್ರೇಲ್ ದೇಶದ ಸಹಾಯ ಪಡೆಯಲು ಪಾಲಿಸಬೇಕಿದೆ ಹಂತ-ಹಂತ ಪ್ರಕ್ರಿಯೆ.

ಬಿಟ್ ಕಾಯಿನ್ ಹಗರಣ ಮರು ತನಿಖೆ ಮುಂದಿದೆ ಸಾಲು-ಸಾಲು ಸವಾಲು
Image Credit source: Getty Images
Follow us
Kiran HV
| Updated By: Rakesh Nayak Manchi

Updated on: Jul 15, 2023 | 9:32 AM

ಬೆಂಗಳೂರು, ಜುಲೈ 15: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಿಟ್ ಕಾಯಿನ್‌ ಹಗರಣ (Bitcoin scandal) ಮತ್ತೆ ಸದ್ದು ಮಾಡುತ್ತಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ದಾಖಲಿಸಿದ ಬಳಿಕ ಮರು ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ನಡುವೆ ತನ್ನ ಮೇಲಿನ ಕೇಸ್ ವಜಾಗೊಳಿಸುವಂತೆ ಕೋರಿ ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎಂದು ಹೇಳಲಾಗುತ್ತಿರುವ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕೀ ನ್ಯಾಯಾಲಯದ ಮೊರೆ ಹೋಗಿದ್ದಾನೆ.

ಆದರೆ ಪ್ರಕರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವೇ? ರಾಜ್ಯ ಸರ್ಕಾರ ಕ್ರಿಪ್ಟೋ ಕರೆನ್ಸಿಯ ವಹಿವಾಟಿನ ಜಾಡನ್ನ ಭೇದಿಸಲು ರಚಿಸಿದ SIT ಮುಂದಿರುವ ಸವಾಲುಗಳೇನು? ಬಿಟ್ ಕಾಯಿನ್ ತನಿಖೆಗೆ ಸರ್ಕಾರ ಈ ತಂತ್ರಜ್ಞಾನದಲ್ಲಿ ಮುಂದಿರುವ ದೇಶದ ಸಹಾಯ ಪಡೆಯಲು ಏನೆಲ್ಲಾಕ್ರಮವಹಿಸಬೇಕು? ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಎಲ್ಲಾ ಪ್ರಕ್ರಿಯೆಗೆ ಬೇಕಾಗುವ ಕಾಲಾವಧಿ ಎಷ್ಟು? ಇಲ್ಲಿದೆ ಮಾಹಿತಿ

ಬಿಟ್ ಕಾಯಿನ್ ಹಗರಣ ಮರು ತನಿಖೆ ಮುಂದಿದೆ ಸಾಲು-ಸಾಲು ಸವಾಲು

ಸದ್ಯ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಮರು ತನಿಖೆಯದ್ದೆ ಸದ್ದು ಪ್ರಾರಂಭವಾಗಿದೆ. ಸರ್ಕಾರ ಕೂಡ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಕರ್ಬಿಕರ್ ನೇತೃತ್ವದಲ್ಲಿ SIT ತಂಡ ರಚಿಸಿದೆ. ಆದರೆ ಇದರ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಇಸ್ರೇಲ್ ದೇಶದ ಸಹಾಯ ಪಡೆಯಲು ಹಂತ-ಹಂತ ಪ್ರಕ್ರಿಯೆ ಪಾಲಿಸಬೇಕಿದೆ. ಅಲ್ಲದೇ ಕ್ರಿಪ್ಟೋ ಕರೆನ್ಸಿ ವಾಲೇಟ್​ಗಳನ್ನ ಫ್ರೀಜ್ ಮಾಡುವಷ್ಟು ಟೆಕ್ನಾಲಜಿ ನಮ್ಮಲ್ಲಿ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ರಾಜ್ಯ ಸಿಐಡಿ SIT ತಂಡ ಇದಕ್ಕಾಗಿ ಇಸ್ರೇಲ್ ಬಳಿ ಸಹಾಯ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರ: ಇಸ್ರೇಲ್ ಸಹಾಯ ಕೇಳುವ ಸಾಧ್ಯತೆ

ಈಗಾಗಲೇ ಸಿಸಿಬಿ ಬಿಟ್ ಕಾಯಿನ್ ಪ್ರಕರಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಯಾಗಿದೆ. ಇದೀಗ ಆ ಪ್ರಕರಣಗಳ ತನಿಖೆ ಕೈಗೆತ್ತಿಕೊಳ್ಳಲು SIT ಗೆ ಸಾಲು ಸಾಲು ಸವಾಲುಗಳು ಎದುರಾಗಲಿದೆ. ಒಂದುವೇಳೆ ಬಿಟ್ ಕಾಯಿನ್ ಸಂಬಂದಿಸಿದಂತೆ ಅಡ್ವಾನ್ಸ್ ಟೆಕ್ನಾಲಜಿ ಬಳಕೆಮಾಡಿ ಬಿಟ್ ಕಾಯಿನ್ ರಹಸ್ಯ ಬೇಧಿಸಿದ ಇಸ್ರೇಲ್ ದೇಶದ ಸಹಕಾರ ಪಡೆಯಲು ಸರ್ಕಾರ ಬಯಸಿದಲ್ಲಿ ಈ ನಿಟ್ಟಿನಲ್ಲಿ‌ ಕೆಲ ಮಹತ್ಚದ ಪ್ರಕ್ರಿಯೆಗಳನ್ನ ಪಾಲಿಸಬೇಕಿದೆ.

ತನಿಖೆ ಪ್ರಾರಂಭಕ್ಕೆ ಬೇಕು ಆರು ತಿಂಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಜೆನ್ಸಿಗಳ ಸಹಾಯ ಪಡೆಯಲು ಸರ್ಕಾರ ಕ್ರಮವಹಿಸಬೇಕಿದೆ. ಬಿಟ್ ಕಾಯಿನ್ ಕ್ರಿಪ್ಟೋ ಕರೆನ್ಸಿ ವ್ಯೂಹ ಭೇದಿಸಲು ಅಡ್ವಾನ್ಸ್ ಟೆಕ್ನಾಲಜಿ ನೆರವು ಬೇಕಿದ್ದು, ಎಲ್ಲಿಯೋ ಕುಳಿತು, ಯಾವುದೋ ಐಪಿ ಅಡ್ರೆಸ್ ಬಳಸಿ ನಡೆಸುವ ಬಿಟ್ ಕಾಯಿನ್ ವ್ಯವಹಾರ ಭೇದಿಸಲು ಸರ್ವರ್ ಸೇರಿದಂತೆ ಬಳಸಲಾಗಿವ ಅಗತ್ಯ ಮಾಹಿತಿ ಪಡೆಯಲು ಈ ಎಲ್ಲಾ ವ್ಯವಸ್ಥೆಗಳ ಕಂಟ್ರೋಲ್ ಮಾಡುವ ದೇಶಗಳ ಸಹಕಾರ ಕೂಡ ಬಹುಮುಖ್ಯವಾಗಿದೆ.

ಈಗಾಗಲೇ ಇಸ್ರೇಲ್ ರಕ್ಷಣಾ ಇಲಾಖೆಯ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ಸಾಕಷ್ಟು ಕ್ರಿಪ್ಟೋ ಕರೆನ್ಸಿ ವಾಲೆಟ್ ಗಳನ್ನ ವಶಪಡಿಸಿಕೊಂಡಿದೆ.‌ ಅದರಲ್ಲೂ ಹಮ್ಮಾಸ್ ಉಗ್ರ ಸಂಘಟನೆಗೆ ಫಂಡಿಂಗ್ ಆಗುತ್ತಿದ್ದ ಸಾಕಷ್ಟು ಕ್ರಿಪ್ಟೋ ಕರೆನ್ಸಿ ವಾಲೇಟ್​ಗಳನ್ನ ಇಸ್ರೇಲ್​ನ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ವಶಪಡಿಸಿಕೊಂಡಿದೆ. ಅಲ್ಲದೆ ಉಗ್ರ ಸಂಘಟನೆಗಳಿಗೆ ಭಾರತದಿಂದ ಆಗುತ್ತಿದ್ದ ಕ್ರಿಪ್ಟೋ ಕರೆನ್ಸಿ ಫಂಡಿಂಗ್ ಬಗ್ಗೆ ಹಿಂದೆ ದೆಹಲಿ ಪೊಲೀಸರಿಗೆ ಇಸ್ರೇಲ್‌ ಮಾಹಿತಿ ನೀಡಿತ್ತು.

BINANC ಅಡಿ ಮಾಹಿತಿ ವಿನಿಮಯ, ಇಸ್ರೇಲ್ ನೆರವು ಪಡೆಯಲು ಒಪ್ಪಂದವಾಗಬೇಕಿದೆ. MLAT ಮ್ಯೂಚುವಲ್ ಲೀಗಲ್ ಅಸಿಸ್ಟಿಂಟ್ ಟ್ರೀಟಿ ಬಳಿಕ ತನಿಖೆಗೆ ಸಹಕಾರಿಯಾಗಲಿದ್ದು, ಇಂಟರ್ ಪೋಲ್ ಇನ್ ಫಾ ರ್ರ್ಮೇಶನ್ ಬಳಿಕಷ್ಟೇ ಮಾಹಿತಿ ಲಭ್ಯವಾಗಲಿದೆ. ಸರ್ಕಾರ ಈ ಎಲ್ಲ ಕ್ರಮಗಳನ್ನು ಪಾಲಿಸಿದರೆ ಮತ್ತೊಂದೆಡೆ ಈ ಬಿಟ್ ಕಾಯಿನ್ ಸಂಬಂಧಿತ ಅಂತಾರಾಷ್ಟ್ರೀಯ ಮಟ್ಟದ ಅವ್ಯವಹಾರ ಹಿನ್ನಲೆ ಪ್ರಕರಣಗಳಲ್ಲಿ ಸಾಮ್ಯತೆ ಇದ್ದಲ್ಲಿ ಒಂದೊಂಕ್ಕೊಂದು ಲಿಂಕ್ ಇದ್ದಲ್ಲಿ ಮಾಹಿತಿ ಪಡೆಯಲು ಅಲ್ಲಿನ ನ್ಯಾಯಾಲಯ್ ಜತೆಗೆ LR ಪ್ರೊಸಿಜರ್ ಮೂಲಕ ಪತ್ರ ವ್ಯವಹಾರ ನಡೆಯಬೇಕಿದೆ. ಹೀಗಾಗಿ ಸಿಐಡಿಯ ಎಸ್​ಐಟಿ ತಂಡವೂ ಇಸ್ರೇಲ್ ಬಳಿ ಇದರ ಬಗ್ಗೆ ಸಹಾಯ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಇದಕ್ಕಾಗಿ ಇಸ್ರೇಲ್ ದೇಶದ ಜತೆಗೆ ಮಾಹಿತಿ ವಿನಿಮಯಕ್ಕಾಗಿ ಒಪ್ಪಂದವಾಗಬೇಕಿದೆ.

ಚಾರ್ಜ್ ಶೀಟ್ ದಾಖಲಾಗಿದ್ದರೂ ಬಿಟ್ ಕಾಯಿನ್ ಹಗರಣದ ಸಂಪೂರ್ಣ ತನಿಖೆಗೆ ಮತ್ತೆ ಮುಂದಾಗಿದೆ. ಸದ್ಯ ಈ ವಿಚಾರ ಇನ್ನೂ ಸಿಐಡಿಯಲ್ಲಿ ಚರ್ಚೆಯಾಗುತ್ತಿದೆ. SIT ಟೆಕ್ನಿಕಲ್ ಟೀಂ ಕೂಡ ರಚನೆಯಾಗಲಿದ್ದು ಇದನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರಾ ಅಥವಾ ಇವರೇ ಬೇರೆ ಏನಾದರು ರೀತಿಯಲ್ಲಿ ತನಿಖೆ ಮಾಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಏನೇ ಆದರೂ ಸರ್ಕಾರ ಬೇರೊಂದು ದೇಶದ ಸಹಕಾರ ಪಡೆಯಲು ಇಷ್ಟೇಲ್ಲಾ ಪ್ರಕ್ರಿಯೆ ಪರಿಪೂರ್ಣವಾಗಬೇಕಂದರೆ ಕನಿಷ್ಟ 6 ತಿಂಗಳ ಕಾಲಾವಧಿ ಆದರೂ ಬೇಕಿದೆ. ಆ ಬಳಿಕಷ್ಟೇ ಬಿಟ್ ಕಾಯಿನ್ ತನಿಖೆ ಪ್ರಾರಂಭಗೊಳ್ಳಲಿದೆ. ಈ ಎಲ್ಲಾ ಅಂಶಗಳ ಹಿನ್ನಲೆ ಬಿಟ್ ಕಾಯಿನ್ ಮರುತನಿಖೆ ಅಂದು ಕೊಂಡಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಸವಾಲುಗಳನ್ನ ಸರ್ಕಾರ ಹೇಗೆ ನಿಭಾಯಿಸಲಿದೆ? SIT ತಂಡ ಬಿಟ್ ಕಾಯಿನ್ ಮರು ತನಿಖೆ ನಡೆಸಲು ಎದುರಾಗಲಿರುವ ಚಾಲೆಂಜ್​ಗಳನ್ನ ಭೇದಿಸಲಿದೆಯೇ ಅನ್ನೋದು ಕುತೂಹಲ‌ ಕೆರಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ