AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಾಗಿದೆ ಸುಸಜ್ಜಿತವಾದ ಈ ಎರಡು ಪೊಲೀಸ್ ಠಾಣೆಗಳಿಗೆ? 6 ತಿಂಗಳಾದರೂ ಚಾಮರಾಜನಗರ ಪೊಲೀಸರು ಇಲ್ಲಿಗೆ ಬರೋಲ್ಲಾ ಅಂತಿದಾರೆ, ವಾಸ್ತು ದೋಷವಂತೆ!

ಅದೇನೆ ಹೇಳಿ ಕಾನೂನು ಸುವ್ಯವಸ್ಥೆ ಕಾಪಾಡುವ ಖಾಕಿಗಳೆ ಈ ರೀತಿ ಮನಸ್ಥಿತಿ ಹೊಂದಿದರೆ ಹೇಗೆ? ಮೂಢನಂಬಿಕೆ ಪಕ್ಕಕ್ಕಿಟ್ಟು ಆದಷ್ಟು ಬೇಗ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಆಗಿ ಸಾರ್ವಜನಿಕರ ಸೇವೆಗೆ ಮುಂದಾಗಲಿ ಅನ್ನೋದೆ ಎಲ್ಲರ ಆಶಯ. 

ಏನಾಗಿದೆ ಸುಸಜ್ಜಿತವಾದ ಈ ಎರಡು ಪೊಲೀಸ್ ಠಾಣೆಗಳಿಗೆ? 6 ತಿಂಗಳಾದರೂ ಚಾಮರಾಜನಗರ ಪೊಲೀಸರು ಇಲ್ಲಿಗೆ ಬರೋಲ್ಲಾ ಅಂತಿದಾರೆ, ವಾಸ್ತು ದೋಷವಂತೆ!
ಸುಸಜ್ಜಿತವಾದ ಎರಡು ಪೊಲೀಸ್ ಠಾಣೆ, 6 ತಿಂಗಳಾದರೂ ಚಾಮರಾಜನಗರ ಪೊಲೀಸರು ಇಲ್ಲಿಗೆ ಬರೋಲ್ಲಾ ಅಂತಿದಾರೆ
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​|

Updated on:Jul 15, 2023 | 10:20 AM

Share

ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಿದ್ದ ಗಡಿನಾಡು ಚಾಮರಾಜನಗರ ಜಿಲ್ಲೆ ಈಗ ಹೊಸತೊಂದು ಕಾಂಟ್ರವರ್ಸಿಯಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ವಾಸ್ತು ಸರಿ ಇಲ್ಲ (Vastu Dosha) ಅನ್ನೋ ಕಾರಣ ನೂತನ ಕಟ್ಟಡಕ್ಕೆ ಪೊಲೀಸ್ ಠಾಣೆಯನ್ನ ಸ್ಥಳಾಂತರ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ನೂತನವಾಗಿ ಸಿದ್ದವಾಗಿರೊ ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡ.. ಕಟ್ಟಡ ನಿರ್ಮಾಣವಾಗಿ 6 ತಿಂಗಳು ಕಳೆದ್ರು ಧೂಳು ಹಿಡಿಯುತ್ತಿರುವ ಠಾಣೆ. ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲು ಮೀನಾಮೇಷ ಎಣಿಸುತ್ತಿರುವ ಇಲಾಖಾ ಸಿಬ್ಬಂದಿ. ಈ ಎಲ್ಲಾ ದೃಶ್ಯ ಕಂಡು ಬಂದಿರುವುದು ಚಾಮರಾಜನಗರ ಜಿಲ್ಲೆಯಲ್ಲಿ. ಹೌದು ನೂತನವಾಗಿ ಎರಡು ಕಟ್ಟಡಗಳನ್ನ ಕಟ್ಟಲಾಗಿದೆ. ಚಾಮರಾಜನಗರ ಟೌನ್ ಹಾಗೂ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ (chamarajanagar police) ನೂತನ ಕಟ್ಟಡಗಳು ನಿರ್ಮಾಣವಾಗಿದ್ದರೂ ಇನ್ನಬೂ ಕೂಡ ಹಳೆ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾತಂರವಾಗಿಲ್ಲ. ಇದಕ್ಕೆ ಕಾರಣ ವಾಸ್ತು ಸರಿ ಇರದೆ ಇರುವುದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಲಾ ಎಂಡ್ ಆರ್ಡರ್ ಕಾಪಾಡೊ ಖಾಕಿಗಳೆ ಈ ಮೂಢನಂಬಿಕೆಗೆ (superstition) ಒಳಗಾದ್ರೆ ಏನು ಗತಿ ಎಂಬ ಮಾತುಗಳು ಈಗ ಚಾಮರಾಜನಗರ ಜಿಲ್ಲೆಯಲ್ಲಿ ಸುತ್ತಾಡುತ್ತಿದೆ.

ಕಾನೂನುಪಾಲಕ ಪೊಲೀಸರು ಮೂಢನಂಬಿಕೆ ಪೋಷಿಸುವುದು ಅಪರಾಧ ಅಲ್ಲವಾ?

ಇನ್ನು ಈ ಕುರಿತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳೋದೆ ಬೇರೆ. ಕಟ್ಟಡ ನಿರ್ಮಾಣವಾಗಿ 6 ತಿಂಗಳು ಕಳೆದಿದೆ ನಿಜಾ. ಇಲ್ಲಿ ಯಾವ ವಾಸ್ತು ದೋಷ ಸಹ ಇಲ್ಲ. ಆದ್ರೆ ಕೆಲವೊಂದು ಫರ್ನಿಚರ್ಸ್ ಕೊಂಡುಕೊಳ್ಳಬೇಕಿದೆ. ಹಾಗಾಗಿ ಈ ಎರಡೂ ಪೊಲೀಸ್ ಠಾಣೆಗಳು ಸ್ಥಳಾಂತರ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ಕಟ್ಟಡ ನಿರ್ಮಾಣ ಮಾಡಿ 6 ತಿಂಗಳೇ ಕಳೆದರೂ ಫರ್ನಿಚರ್ಸ್ ಯಾಕೆ ಕೊಂಡಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳಿಗೆ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲು ಮನಸ್ಸಿಲ್ಲವಷ್ಟೇ ಎಂಬ ಮಾತುಗಳು ಸಹ ಕೇಳಿ ಬಂದಿದೆ.

ಒಟ್ಟಾರೆ ಅದೇನೆ ಹೇಳಿ ಕಾನೂನು ಸುವ್ಯವಸ್ಥೆ ಕಾಪಾಡುವ ಖಾಕಿಗಳೆ ಈ ರೀತಿ ಮನಸ್ಥಿತಿ ಹೊಂದಿದರೆ ಹೇಗೆ? ಎಂಬ ಮಾತುಗಳು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿರುವುದಂತೂ ಸುಳ್ಳಲ್ಲ. ಆದಷ್ಟು ಬೇಗ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ ಆಗಿ ಸಾರ್ವಜನಿಕರ ಸೇವೆಗೆ ಮುಂದಾಗಲಿ ಅನ್ನೋದೆ ನಮ್ಮ ಆಶಯ.

ಚಾಮರಾಜನಗರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Sat, 15 July 23