Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರ: ಇಸ್ರೇಲ್ ಸಹಾಯ ಕೇಳುವ ಸಾಧ್ಯತೆ

ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರ: ಇಸ್ರೇಲ್ ಸಹಾಯ ಕೇಳುವ ಸಾಧ್ಯತೆ

ಸಾಧು ಶ್ರೀನಾಥ್​
|

Updated on: Jul 08, 2023 | 5:43 PM

ಇಸ್ರೇಲ್ ಕ್ರಿಪ್ಟೋ ವಾಲೆಟ್ ಗಳನ್ನ ವಶಪಡಿಸಿಕೊಳ್ಳುವಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದೆ. ಆದರೆ ಭಾರತದಲ್ಲಿ ಆ ಟೆಕ್ನಾಲಜಿ ಕೊರತೆ ಇದೆ. ಇದಲ್ಲದೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಕ್ರಿಪ್ಟೋ ಕರೆನ್ಸಿ ಹಗರಣಗಳು ನಡೆದಿಲ್ಲ.

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರವಾಗಿ ಬಿಟ್ ಕಾಯಿನ್ (Bitcoin scam) ವಶಕ್ಕೆ ಪಡೆಯಲು ಕರ್ನಾಟಕ ಸರ್ಕಾರವು (Karnataka Government) ಇಸ್ರೇಲ್ (Israel) ಸಹಾಯ ಕೇಳುವ ಸಾಧ್ಯತೆಯಿದೆ. ಇಸ್ರೇಲ್ ರಕ್ಷಣಾ ಇಲಾಖೆಯು ಉಗ್ರರಿಗೆ ಸಂದಾಯವಾಗುವ ಬಾಬತ್ತಿನಲ್ಲಿ ಹಮಾಸ್ ಉಗ್ರ ಸಂಘಟನೆಗೆ ಸೇರಿದ ಹಲವು ಕ್ರಿಪ್ಟೋ ವಾಲೆಟ್ ಗಳನ್ನ ವಶಕ್ಕೆ ಪಡೆದಿತ್ತು. ಇಸ್ರೇಲ್ ರಕ್ಷಣಾ ಇಲಾಖೆಯು ದೆಹಲಿ ಪೊಲೀಸರಿಗೂ ಈ ಬಗ್ಗೆ ಕಳೆದ ವರ್ಷ ಮಾಹಿತಿ ನೀಡಿತ್ತು. ಹೀಗಾಗಿ ಬಿಟ್ ಕಾಯಿನ್ ಹಗರಣದಲ್ಲಿ ಇಸ್ರೇಲ್ ನ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ಸಂಸ್ಥೆಯ ಸಹಾಯ ಕೇಳುವ ಸಾಧ್ಯತೆಯಿದೆ.

ಇಸ್ರೇಲ್ ಕ್ರಿಪ್ಟೋ ವಾಲೆಟ್ ಗಳನ್ನ ವಶಪಡಿಸಿಕೊಳ್ಳುವಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದೆ. ಆದರೆ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯನ್ನ ವಶಪಡಿಸಿಕೊಳ್ಳಲು ಬೇಕಾದ ಟೆಕ್ನಾಲಜಿ ಕೊರತೆ ಇದೆ. ಇದಲ್ಲದೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಕ್ರಿಪ್ಟೋ ಕರೆನ್ಸಿ ಹಗರಣಗಳು ನಡೆದಿಲ್ಲ. ಹೀಗಾಗಿ ಇಸ್ರೇಲ್ ಸಹಾಯ ಕೇಳುವ ಸಾಧ್ಯತೆಯಿದೆ. ಈ ಹಿಂದೆ ಬೇರೆ ತನಿಖಾ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಗೃಹ ಸಚಿವ ಡಾ.ಜಿ‌.ಪರಮೇಶ್ವರ್ ಹೇಳಿದ್ದರು ಎಂಬುದು ಗಮನಾರ್ಹ.