ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್‌ಗೆ ನೆರವು ನೀಡಿದ್ದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ: ಚಾರ್ಜ್‌ಶೀಟ್
ಆರು ದೂರುಗಳ ಪೈಕಿ ಎರಡರಲ್ಲಿ ತೋಮರ್ ಅವರನ್ನು ಸಹ ಆರೋಪಿ ಎಂದು ಹೆಸರಿಸಲಾಗಿದೆ. ಆರೋಪಪಟ್ಟಿಯ ಪ್ರಕಾರ, ತೋಮರ್ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಸಿಂಗ್ ಅವರನ್ನು ದೆಹಲಿಯ ಅಶೋಕ ರಸ್ತೆಯಲ್ಲಿರುವ WFI ಮುಖ್ಯಸ್ಥರ ಕಚೇರಿ ಮತ್ತು ನಿವಾಸಕ್ಕೆ ಭೇಟಿಯಾಗಲು ಹೋದಾಗ ದೂರುದಾರರು ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡರು.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ (Vinod Tomar) ಅವರು ಆರು ಪ್ರಮುಖ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರಿಗೆ ಉದ್ದೇಶಪೂರ್ವಕವಾಗಿ ನೆರವು ನೀಡಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ. ಆರು ದೂರುಗಳ ಪೈಕಿ ಎರಡರಲ್ಲಿ ತೋಮರ್ ಅವರನ್ನು ಸಹ ಆರೋಪಿ ಎಂದು ಹೆಸರಿಸಲಾಗಿದೆ. ಆರೋಪಪಟ್ಟಿಯ ಪ್ರಕಾರ, ತೋಮರ್ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಸಿಂಗ್ ಅವರನ್ನು ದೆಹಲಿಯ ಅಶೋಕ ರಸ್ತೆಯಲ್ಲಿರುವ WFI ಮುಖ್ಯಸ್ಥರ ಕಚೇರಿ ಮತ್ತು ನಿವಾಸಕ್ಕೆ ಭೇಟಿಯಾಗಲು ಹೋದಾಗ ದೂರುದಾರರು ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡರು. ಮತ್ತೊಂದು ಪ್ರಕರಣದಲ್ಲಿ ಕುಸ್ತಿಪಟುವಿನ ಪತಿ ಮತ್ತು ಇನ್ನೊಂದು ಪ್ರಕರಣದಲ್ಲಿ ತರಬೇತುದಾರರನ್ನು ತಮ್ಮೊಂದಿಗೆ ಬರದಂತೆ “ಉದ್ದೇಶಪೂರ್ವಕವಾಗಿ” ತಡೆದು ನಿಲ್ಲಿಸಿದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಎರಡು ದಶಕಗಳಿಂದ ಡಬ್ಲ್ಯುಎಫ್‌ಐನೊಂದಿಗೆ ಸಂಬಂಧ ಹೊಂದಿದ್ದ ತೋಮರ್ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 109 (ಪ್ರಚೋದನೆ), 354 (ಮಹಿಳೆಯರ ಮೇಲಿನ ದೌರ್ಜನ್ಯ), ಮತ್ತು 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪರಿಶೀಲಿಸಿದ ಚಾರ್ಜ್‌ಶೀಟ್ ಪ್ರಕಾರ, ವಿಚಾರಣೆಯ ಸಮಯದಲ್ಲಿ, ತೋಮರ್ ತನ್ನ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಎಂದು ಉಲ್ಲೇಖಿಸುತ್ತದೆ.
ದೂರುದಾರರು (ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಹೇಳಿಕೆ) ದೆಹಲಿಯ ಡಬ್ಲ್ಯುಎಫ್‌ಐ ಕಚೇರಿಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಭೇಟಿ ಮಾಡಲು ಪತಿ ಜತೆ ಹೋಗಿದ್ದೆ. ಆಗ ವಿನೋದ್ ತೋಮರ್, ಸಂತ್ರಸ್ತೆಯನ್ನು ಮಾತ್ರ ಕಚೇರಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಉದ್ದೇಶಪೂರ್ವಕವಾಗಿ (ಅವಳ ಪತಿ) ಕಚೇರಿಯೊಳಗೆ ಬಿಡಲಿಲ್ಲ. ಆ ದಿನವೇ ಬ್ರಿಜ್ ಭೂಷಣ್ ಆಕೆಗೆ ಕಿರುಕುಳ ನೀಡಿದ್ದು. ಮರುದಿನ ನನ್ನ ಪತಿಯನ್ನು ಪ್ರವೇಶಿಸಲು ಅನುಮತಿಸಲಿಲ್ಲ. ನನಗೆ ಮತ್ತೊಮ್ಮೆ ಕಿರುಕುಳ ನೀಡಲಾಯಿತು ಎಂದು ಕುಸ್ತಿಪಟು ದೂರನ್ನು ಉಲ್ಲೇಖಿಸಿ ಚಾರ್ಜ್‌ಶೀಟ್ ಹೇಳಿದೆ.
ಎರಡು ಘಟನೆಗಳು 2017 ರಲ್ಲಿ ಸಂಭವಿಸಿವೆ ಎಂದು ಹೇಳಲಾಗುತ್ತದೆ. ಮೊದಲ ಬಾರಿಗೆ, ತೋಮರ್ ದೂರುದಾರರ ಪತಿಯನ್ನು ಡಬ್ಲ್ಯುಎಫ್‌ಐ ಕಚೇರಿಯ ಆವರಣದ ಹೊರಗೆ ಕಾಯಲು ಕೇಳಿದರು. ಎರಡನೇ ಸಂದರ್ಭದಲ್ಲಿ, ಆಕೆಯ ಪತಿಯನ್ನು ಡಬ್ಲ್ಯುಎಫ್‌ಐ ಕಚೇರಿಯಲ್ಲಿ ತೋಮರ್‌ನ ಕೋಣೆಯ ಬಳಿ ಕಾಯುವಂತೆ ಮಾಡಲಾಗಿತ್ತು.
ಇದನ್ನೂ ಓದಿ: ಆರೋಪಗಳ ಬಗ್ಗೆ ಪತ್ರಕರ್ತೆ ಪ್ರಶ್ನೆ ಕೇಳಿದಾಗ ‘ಚುಪ್’ ಎಂದು ಗದರಿದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್
ಬ್ರಿಜ್ ಭೂಷಣ್ ಅವರ ಕಚೇರಿಯ ಹೊರಗೆ ಕುಳಿತುಕೊಳ್ಳಲು ಅಥವಾ ಕಾಯಲು ತನ್ನ ಪತಿಗೆ ಅವಕಾಶ ನೀಡದ ವಿನೋದ್ ತೋಮರ್ ಅವರ ಉದ್ದೇಶವು ಬ್ರಿಜ್ ಭೂಷಣ್ ಅವರ ಕಚೇರಿಯ ಬಳಿ ಅವರನ್ನು ಕುಳಿತುಕೊಳ್ಳುವಂತೆ ಮಾಡುವುದು ಆಗಿತ್ತು. ಬ್ರಿಜ್ ಭೂಷಣ್ ಅವರ ಕೋಣೆಯ ಬಾಗಿಲು ಹೊರಗಿನಿಂದ ಗೋಚರಿಸದ ಕಾರಣ ಅವರ ಕಡೆಯಿಂದ ಸ್ಪಷ್ಟವಾದ ದುರುದ್ದೇಶವನ್ನು ಸೂಚಿಸುತ್ತದೆಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ತೋಮರ್ ಅವರು ಈ ಕುಸ್ತಿಪಟುವನ್ನು ತಮ್ಮ ಮನೆಗೆ ಕರೆದಿದ್ದಾರೆ ಎಂದು ಆರೋಪಿಸಲಾಗಿದೆ, ಅಲ್ಲಿ “ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲವಾದ ಕಾರಣದಿಂದ ಆಕೆಗೆ ಅವಮಾನ ಮತ್ತು ಮಾನಸಿಕ ಕಿರುಕುಳ ನೀಡಲಾಯಿತು” ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. 2022 ರಲ್ಲಿ ಇದೇ ರೀತಿಯ ಘಟನೆಯಲ್ಲಿ ಕುಸ್ತಿಪಟು, ಸಿಂಗ್ ಅವರನ್ನು ತನ್ನ ಕಚೇರಿಯಲ್ಲಿ ಭೇಟಿಯಾಗಲು ಕೇಳಿದಾಗ ಹೊರಗೆ ಕಾಯಲು ಇನ್ನೊಬ್ಬ ದೂರುದಾರರ ತರಬೇತುದಾರರನ್ನು ತೋಮರ್ ಕೇಳಿದರು. ದೂರುದಾರರು, ಸೆಕ್ಷನ್ 164 ರ ಅಡಿಯಲ್ಲಿ ತನ್ನ ಹೇಳಿಕೆಯಲ್ಲಿ ವಿನೋದ್ ತೋಮರ್ ಅವರು ಆರೋಪಿ ಬ್ರಿಜ್ ಭೂಷಣ್ ಅವರ ಚೇಂಬರ್ ಒಳಗೆ ಹೋದರು. ಸಂತ್ರಸ್ತೆಯನ್ನು ಚೇಂಬರ್ ಒಳಗೆ ಏಕಾಂಗಿಯಾಗಿ ಹೋಗುವಂತೆ ಕೇಳಿದರು. ಕೋಚ್ ಅನ್ನು ಒಳಗೆ ಹೋಗದಂತೆ ಉದ್ದೇಶಪೂರ್ವಕವಾಗಿ ನಿಲ್ಲಿಸಿದರು. ಬಾಗಿಲು ಮುಚ್ಚಿದರು. ಸಂತ್ರಸ್ತೆ ಆರೋಪಿ ಬ್ರಿಜ್ ಭೂಷಣ್ ಅವರ ಕೊಠಡಿಯಲ್ಲಿ ಒಬ್ಬರೇ ಇರುವಾಗ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದರು. ಆ ಮೂಲಕ, ವಿನೋದ್ ತೋಮರ್ ಯೋಜಿತ ರೀತಿಯಲ್ಲಿ ಸಹಾಯ ಮಾಡಿದರು ಎಂದು ಆರೋಪಪಟ್ಟಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ