AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಗ್ಗೆ ದೆಹಲಿ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಹೇಳಿರುವುದೇನು?

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌(Brij Bhushan Sharan Singh) ಅವರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ಚಾರ್ಜ್‌ಶೀಟ್‌ನಲ್ಲಿ ಅವರ ಕೃತ್ಯವನ್ನು ಶಿಕ್ಷಾರ್ಹ ಎಂದು ದೆಹಲಿ ಪೊಲೀಸರು ಪರಿಗಣಿಸಿದ್ದಾರೆ

ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ ಬಗ್ಗೆ ದೆಹಲಿ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಹೇಳಿರುವುದೇನು?
ಬ್ರಿಜ್ ಭೂಷಣ್
Follow us
ನಯನಾ ರಾಜೀವ್
|

Updated on: Jul 11, 2023 | 12:22 PM

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌(Brij Bhushan Sharan Singh) ಅವರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ಚಾರ್ಜ್‌ಶೀಟ್‌ನಲ್ಲಿ ಅವರ ಕೃತ್ಯವನ್ನು ಶಿಕ್ಷಾರ್ಹ ಎಂದು ದೆಹಲಿ ಪೊಲೀಸರು ಪರಿಗಣಿಸಿದ್ದಾರೆ. ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಪ್ರಕಾರ ‘ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಚಾರ್ಜ್​ ಶೀಟ್​ನಲ್ಲಿ ಇದುವರೆಗಿನ ತನಿಖೆಯ ಪ್ರಕಾರ, 6 ಕುಸ್ತಿಪಟುಗಳು ಮಾಡಿದ ಆರೋಪಗಳಿಗಾಗಿ ಅವರನ್ನು ವಿಚಾರಣೆ ಒಳಪಡಿಸಬಹುದು ಹಾಗೂ ಶಿಕ್ಷೆಗೆ ಗುರುಪಡಿಸಬಹುದು’ ಎಂದು ಹೇಳಲಾಗಿದೆ.

ಇದುವರೆಗಿನ ತನಿಖೆಯ ಆಧಾರದ ಮೇಲೆ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಬಹುದಿತ್ತು ಎಂದು ದೆಹಲಿ ಪೊಲೀಸ್ ಚಾರ್ಜ್ ಶೀಟ್ ಹೇಳುತ್ತದೆ.

ಅಲ್ಲದೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದು, ಜೂನ್ 13 ರಂದು ಸಲ್ಲಿಸಲಾದ ಚಾರ್ಜ್ ಶೀಟ್, ಕುಸ್ತಿಪಟುಗಳ ಮೇಲೆ ಸಿಂಗ್ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Wrestlers Protest: ಇನ್ಮುಂದೆ ಬೀದಿಗಿಳಿದು ಪ್ರತಿಭಟನೆ ಮಾಡುವುದಿಲ್ಲ ಏನಿದ್ರೂ ಕೋರ್ಟ್​ನಲ್ಲಿ ಹೋರಾಟ ಎಂದ ಕುಸ್ತಿಪಟುಗಳು

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 6 ಮಹಿಳಾ ಕುಸ್ತಿಪಟುಗಳು ದೂರು ನೀಡಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ದೆಹಲಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಜುಲೈ 7 ರಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ದೇಶದ ಪ್ರಮುಖ ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು. ಕೋರ್ಟ್ ನೀಡಿದ ಸಮನ್ಸ್‌ನಲ್ಲಿ ಜುಲೈ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಇದಲ್ಲದೆ ಸಿಂಗ್ ಅವರ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರಿಗೂ ನ್ಯಾಯಾಲಯ ಸಮನ್ಸ್ ನೀಡಿದೆ. ತೋಮರ್ ವಿರುದ್ಧ ಐಪಿಸಿ ಸೆಕ್ಷನ್ 109 (ಅಪರಾಧ ಅಧಿಕಾರಿ), 354, 354ಎ, 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಿಸಲಾಗಿದೆ. ಚಾರ್ಜ್ ಶೀಟ್ ಸುಮಾರು 200 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ