ಹಾಡಹಗಲೇ ವೃದ್ಧೆ ಕತ್ತು ಸೀಳಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ನಗರದಲ್ಲಿ ವೃದ್ಧೆ ಹತ್ಯೆಗೈದು ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ವೀರೇಶ್, ಪತ್ನಿ ಚೈತ್ರಾ, ಪ್ರಶಾಂತ್ ಅರೆಸ್ಟ್ ಆಗಿರುವ ಆರೋಪಿಗಳು. ಕಾಡುಗೋಡಿ ಸಮೀಪದ ಚನ್ನಸಂದ್ರದ ಕಲ್ಲಪ್ಪ ಲೇಔಟ್ನಲ್ಲಿ ಹಾಡಹಗಲೇ ವೃದ್ದೆ ಕತ್ತು ಸೀಳಿ ಕೊಲೆ ಮಾಡಿ, ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಹಂತಕರು ಈಗ ಅರೆಸ್ಟ್ ಆಗಿದ್ದಾರೆ. ಆಗಸ್ಟ್ 12 ರಂದು ಬೆಳಗ್ಗೆ 10. ಗಂಟೆಗೆ ಆರೋಪಿಗಳು 65 ವರ್ಷದ ಜಯಮ್ಮ ಕುತ್ತಿಗೆ ಸೀಳಿ ಕೊಂದು ದರೋಡೆ […]
ಬೆಂಗಳೂರು: ನಗರದಲ್ಲಿ ವೃದ್ಧೆ ಹತ್ಯೆಗೈದು ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ವೀರೇಶ್, ಪತ್ನಿ ಚೈತ್ರಾ, ಪ್ರಶಾಂತ್ ಅರೆಸ್ಟ್ ಆಗಿರುವ ಆರೋಪಿಗಳು.
ಕಾಡುಗೋಡಿ ಸಮೀಪದ ಚನ್ನಸಂದ್ರದ ಕಲ್ಲಪ್ಪ ಲೇಔಟ್ನಲ್ಲಿ ಹಾಡಹಗಲೇ ವೃದ್ದೆ ಕತ್ತು ಸೀಳಿ ಕೊಲೆ ಮಾಡಿ, ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಹಂತಕರು ಈಗ ಅರೆಸ್ಟ್ ಆಗಿದ್ದಾರೆ. ಆಗಸ್ಟ್ 12 ರಂದು ಬೆಳಗ್ಗೆ 10. ಗಂಟೆಗೆ ಆರೋಪಿಗಳು 65 ವರ್ಷದ ಜಯಮ್ಮ ಕುತ್ತಿಗೆ ಸೀಳಿ ಕೊಂದು ದರೋಡೆ ಮಾಡಿದ್ರು. ವೀರೇಶ್, ಚೈತ್ರಾ ದಂಪತಿ ಜಯಮ್ಮಳ ಮನೆಯಲ್ಲೇ ಬಾಡಿಗೆಗಿದ್ದವರು. ಹತ್ಯೆ ಬಳಿಕ ಮನೆಯಲ್ಲಿದ್ದ 45 ಲಕ್ಷ ಹಣ, 88 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ರು.
ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆಯ ಹತ್ಯೆ ಮಾಡಿ, ಚಿನ್ನಾಭರಣ ಕಳ್ಳತನ: ಪರಿಚಿತರ ಕೈವಾಡ ಶಂಕೆ