ವ್ಹೀಲಿಂಗ್ ಶೋಕಿಗೆ ಬೈಕ್​​ಗಳನ್ನು ಕದಿಯುತ್ತಿದ್ದ ಯುವಕನ ಬಂಧನ

| Updated By: ವಿವೇಕ ಬಿರಾದಾರ

Updated on: Jul 26, 2022 | 8:26 PM

ವ್ಹೀಲಿಂಗ್ ಶೋಕಿಗೆ ಡಿಯೊ ಬೈಕ್​ಗಳನ್ನು ಕದಿಯುತ್ತಿದ್ದ ಯುವಕನನ್ನು ಪೀಣ್ಯಾ ಪೊಲೀಸರು  ಬಂಧಿಸಿದ್ದಾರೆ.

ವ್ಹೀಲಿಂಗ್ ಶೋಕಿಗೆ ಬೈಕ್​​ಗಳನ್ನು ಕದಿಯುತ್ತಿದ್ದ ಯುವಕನ ಬಂಧನ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ವ್ಹೀಲಿಂಗ್ ಶೋಕಿಗೆ ಡಿಯೊ ಬೈಕ್​ಗಳನ್ನು ಕದಿಯುತ್ತಿದ್ದ ಯುವಕನನ್ನು ಪೀಣ್ಯಾ ಪೊಲೀಸರು  ಬಂಧಿಸಿದ್ದಾರೆ. ಟಿ.ದಾಸರಹಳ್ಳಿಯ ಅಪ್ಜಲ್ (19)ಬಂಧಿತ ಆರೋಪಿ. ಪೀಣ್ಯಾ ಪೊಲೀಸರು ತಪಾಸಣೆ ವೇಳೆ  ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 3ಡಿಯೋ ಬೈಕ್,ಮೊಬೈಲ್ ಪೊಲೀಸರು ಜಪ್ತಿ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಲೈಕ್ ಪಡೆಯಲು ಕೃತ್ಯ ಎಸಗುತ್ತಿದ್ದನಂತೆ. ಪೋಷಕರಿಗೆ ತಿಳಿಯದೆ ಕದ್ದ ಬೈಕ್​ಗಳನ್ನು ಸ್ನೇಹಿತರ ಮನೆ ಮುಂದೆ ನಿಲ್ಲಿಸುತ್ತಿದ್ದನು. ವ್ಹೀಲಿಂಗ್ ವೇಳೆ ಪೊಲೀಸರಿಗೆ ಸಿಕ್ರೆ ಬೈಕ್ ಬಿಟ್ಟು ಪರಾರಿಯಾಗುತ್ತಿದ್ದನು.

ಪೀಣ್ಯಾ  ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಾದ ಬೈಕ್ ಕಳವು ಬಗ್ಗೆ  ಸ್ಪೆಷಲ್ ಡ್ರೈವ್ ಮಾಡುತ್ತಿದ್ದಾಗ ಅರೋಪಿ ಅಪ್ಜಲ್ ಬಲೆಗೆ ಬಿದ್ದಿದ್ದಾನೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಮೆಂಟ್​ ಮಿಕ್ಸಿಂಗ್​ ಲಾರಿ ಡಿಕ್ಕಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ಹೊಸಕೋಟೆ : ಸಿಮೆಂಟ್​ ಮಿಕ್ಸಿಂಗ್​ ಲಾರಿ ಡಿಕ್ಕಿ ಹೊಡೆದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕೊಳತೂರು ಗೇಟ್​ ಸಮೀಪ ನಡೆದಿದೆ. 19 ವರ್ಷದ ಚೈತನ್ಯಾ ಮೃತ ದುರ್ದೈವಿ. ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹೊಸಕೋಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಕಲಬುರಗಿ : ಚಿಂಚೋಳಿ ತಾಲೂಕಿನ ಜಟ್ಟೂರು ಬಳಿ ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ಶವ ಎಲ್ಲಿಂದಲೋ ತೇಲಿಕೊಂಡು ಬಂದಿದೆ. ಮಹಿಳೆಯ ಶವ ಹೊರತಗೆಯಲು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದಾರೆ. ಸುಲೇಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಡಿಕ್ಕಿಯಿಂದ 8 ವರ್ಷದ ಬಾಲಕಿಗೆ ಗಾಯ

ಬಾಗಲಕೋಟೆ: ಬಾಗಲಕೋಟೆ ನಗರದ ರೈಲ್ವೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು 8 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದೆ. ಬಾಲಕಿ ಉಲ್ಪತ್‌ಗೆ ಗಂಭೀರ ಗಾಯಗಳಾಗಿದ್ದು,  ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಬಾಗಲಕೋಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೊಸಾಳಿ ರೈಲ್ವೆ ಹಳಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆ

ಉತ್ತರ ಕನ್ನಡ: ಕಾರವಾರ ತಾಲೂಕಿನ ಹೊಸಾಳಿ ರೈಲ್ವೆ ಹಳಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ವಯಸ್ಸು ಸುಮಾರು 50 ವರ್ಷ ಎಂದು ಅಂದಾಜಿಸಲಾಗಿದೆ. ಮೃತ ಮಹಿಳೆಯ ದೇಹದ ಗುರುತು ಇನ್ನು ಪತ್ತೆಯಾಗಿಲ್ಲ. ಮಹಿಳೆ ಮೃತ ದೇಹವನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.