ವಿಡಿಯೋ ಮಾಡಿ, ಹಣಕ್ಕೆ ಡಿಮ್ಯಾಂಡ್: ಮೂವರು ನಕಲಿ ಪತ್ರಕರ್ತರ ಅರೆಸ್ಟ್

|

Updated on: Dec 21, 2019 | 3:42 PM

ವಿಜಯಪುರ: ಜನರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇಂಡಿ ತಾಲೂಕಿನ ಹೊರ್ತಿಯ ಪ್ರಕಾಶ ದಶರಥ ಕೋಳಿ, ವಿಜಯಪುರದ ಝಾಕೀರ ಹುಸೇನ್, ದಶರಥ ನಿಂಗಪ್ಪ ಸೊನ್ನ ಬಂಧಿತ ಆರೋಪಿಗಳು. ಮತ್ತೋರ್ವ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗೆಳತಿಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ಮನೆಗೆ ನುಗ್ಗಿದ ನಕಲಿ ಪತ್ರಕರ್ತರು, ತಾವು ಪೊಲೀಸರೆಂದು ಹೇಳಿಕೊಂಡು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. 2 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಬಳಿಕ 60 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ […]

ವಿಡಿಯೋ ಮಾಡಿ, ಹಣಕ್ಕೆ ಡಿಮ್ಯಾಂಡ್: ಮೂವರು ನಕಲಿ ಪತ್ರಕರ್ತರ ಅರೆಸ್ಟ್
Follow us on

ವಿಜಯಪುರ: ಜನರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇಂಡಿ ತಾಲೂಕಿನ ಹೊರ್ತಿಯ ಪ್ರಕಾಶ ದಶರಥ ಕೋಳಿ, ವಿಜಯಪುರದ ಝಾಕೀರ ಹುಸೇನ್, ದಶರಥ ನಿಂಗಪ್ಪ ಸೊನ್ನ ಬಂಧಿತ ಆರೋಪಿಗಳು. ಮತ್ತೋರ್ವ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗೆಳತಿಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ಮನೆಗೆ ನುಗ್ಗಿದ ನಕಲಿ ಪತ್ರಕರ್ತರು, ತಾವು ಪೊಲೀಸರೆಂದು ಹೇಳಿಕೊಂಡು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. 2 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಬಳಿಕ 60 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.

ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 24 ಸಾವಿರ ನಗದು, ಒಂದು ಕಾರು, ವಿಡಿಯೋ ಕ್ಯಾಮರಾ, ಲ್ಯಾಪ್​ ಟಾಪ್, ಸಿಪಿಯು, 8 ಮೊಬೈಲ್ ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್​ಪಿ ಪ್ರಕಾಶ್ ನಿಕ್ಕಂ ಮಾಹಿತಿ ನೀಡಿದ್ದಾರೆ.



Published On - 3:24 pm, Sat, 21 December 19