ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಸಿಸಿಬಿ ಬಲೆಗೆ
ಬೆಂಗಳೂರು: ದರೋಡೆಗೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳ ಸಮ್ಮು ಅಲಿಯಾಸ್ ಬಷೀರ್ನನ್ನು ಬೆಂಗಳೂರು ಸಿಸಿಬಿ ಪೊಲಿಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಡೀಸೆಲ್ ಆಸೀಫ್ ಪರಾರಿಯಾಗಿದ್ದಾನೆ. ಡಿ.19ರಂದು ಗುರುವಾರ ರಾತ್ರಿ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಆರೋಪಿಗಳಿಬ್ಬರು ದರೋಡೆಗೆ ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡೀಸೆಲ್ ಆಸೀಫ್ ಕಾರಿನಲ್ಲಿ ಪರಾರಿಯಾಗಿದ್ದು, ಕುಖ್ಯಾತ ಕಳ್ಳ ಬಷೀರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 1 ಕಂಟ್ರಿಮೇಡ್ ಪಿಸ್ತೂಲ್, 7 ಜೀವಂತ ಗುಂಡುಗಳು, 51 ಲಕ್ಷ ಮೌಲ್ಯದ […]
ಬೆಂಗಳೂರು: ದರೋಡೆಗೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳ ಸಮ್ಮು ಅಲಿಯಾಸ್ ಬಷೀರ್ನನ್ನು ಬೆಂಗಳೂರು ಸಿಸಿಬಿ ಪೊಲಿಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಡೀಸೆಲ್ ಆಸೀಫ್ ಪರಾರಿಯಾಗಿದ್ದಾನೆ.
ಡಿ.19ರಂದು ಗುರುವಾರ ರಾತ್ರಿ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಆರೋಪಿಗಳಿಬ್ಬರು ದರೋಡೆಗೆ ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡೀಸೆಲ್ ಆಸೀಫ್ ಕಾರಿನಲ್ಲಿ ಪರಾರಿಯಾಗಿದ್ದು, ಕುಖ್ಯಾತ ಕಳ್ಳ ಬಷೀರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 1 ಕಂಟ್ರಿಮೇಡ್ ಪಿಸ್ತೂಲ್, 7 ಜೀವಂತ ಗುಂಡುಗಳು, 51 ಲಕ್ಷ ಮೌಲ್ಯದ ಚಿನ್ನಾಭರಣ, ಚಿನ್ನಾಭರಣ ಕರಗಿಸುವ ಯಂತ್ರ ಹಾಗು 1 ಕಾರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಶ್ರೀಮಂತರನ್ನು ಗುರುತಿಸಿ ಪಿಸ್ತೂಲ್ ತೋರಿಸಿ ಹೆದರಿಸಿ ಕಳ್ಳತನ ಮಾಡುತ್ತಿದ್ದರು. ಬಿಹಾರ ಹಾಗೂ ನೇಪಾಳದ ಗಡಿ ಭಾಗದಲ್ಲಿ ಪಿಸ್ತೂಲ್ ಅನ್ನು ಖರೀದಿಸಿ ತಂದಿದ್ದರು. ಬಂಧಿತನ ಮಾಹಿತಿ ಆಧರಿಸಿ ಕಳ್ಳತನದ ಮಾಲನ್ನು ಖರೀದಿಸುತ್ತಿದ್ದ ಸಜ್ಜದ್ ಆಲಿಬೇಗ್ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.