ಬೆಂಗಳೂರು: ಕದ್ದ ಕಾರಿನಲ್ಲಿ ಊರೂರು ಸುತ್ತುತ್ತಿದ್ದ ಇಬ್ಬರು ಕಳ್ಳರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಹಫೀಜ್ ಮತ್ತು ರೆಹಮಾನ್ ಮನ್ಸೂರ್ ಬಂಧಿತ ಆರೋಪಿಗಳು.
ಕೇಸ್ವೊಂದಕ್ಕೆ ಸಂಬಂಧಿಸಿ ಜಾಮೀನಿಗಾಗಿ ನಿಮ್ಮ ಸಲಹೆ ಬೇಕು ಎಂದು ಆರೋಪಿಗಳು ವಕೀಲ ನಾಗರಾಜುರನ್ನು ಸಂಪರ್ಕಿಸಿ ಫ್ರೇಜರ್ಟೌನ್ನ ಬಂಕ್ ಬಳಿಗೆ ಕರೆತಂದಿದ್ದರು. ವಕೀಲ ನಾಗರಾಜು ಬಂಕ್ ಮ್ಯಾನೇಜರ್ ಬಳಿ ಮಾತಾಡ್ತಿದ್ದ ವೇಳೆ ಮೊಹಮ್ಮದ್ ಮತ್ತು ರೆಹಮಾನ್ ಕಾರು ಕದ್ದು ಪರಾರಿಯಾಗಿದ್ದಾರೆ.
ಕಾರು ಕಳ್ಳತನ ಕುರಿತು ವಕೀಲ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟರಲ್ಲೇ ಕಳ್ಳರು ಕದ್ದ ಕಾರಿನಲ್ಲೇ ಪುಣೆ ಸೇರಿದಂತೆ ಹಲವೆಡೆ ಟ್ರಿಪ್ಗೆ ಹೋಗಿ ಜಾಲಿ ಮಾಡಿಬಿಟ್ಟಿದ್ದರು. ಟ್ರಿಪ್ ಮುಗಿಸಿ ಹಿಂದಿರುಗುವಾಗ ಶಿರಾ ಬಳಿ ಖಾಕಿಗೆ ಲಾಕ್ ಆಗಿದ್ದಾರೆ.