AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ಬೆನ್ನುಹತ್ತಿರುವ CCB ಮತ್ತು ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೊಡ್ಡ ಬ್ರೇಕ್ ಥ್ರೂ ಸಿಕ್ಕಿದೆ. ಬೆದರಿಕೆ ಪತ್ರದ ಜೊತೆ ಓರ್ವ ವ್ಯಕ್ತಿಯ ಗುರುತಿನ ಚೀಟಿ ಹಾಗೂ ಎರಡು ಫೋನ್ ನಂಬರ್​ಗಳನ್ನು ಸಹ ಉಲ್ಲೇಖಿಸಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ. ಆ ಗುರುತಿನ ಚೀಟಿ ಶಿವಪ್ರಕಾಶ್ ಎಂಬುವವರಿಗೆ ಸೇರಿದ್ದು ಅನ್ನೋ ಮಾಹಿತಿ ಕಲೆಹಾಕಲಾಗಿದೆ. ಈ ಕುರಿತು ಶಿವಪ್ರಕಾಶ್​ನನ್ನು ವಿಚಾರಿಸಿದಾಗ ಆತನ ಹೇಳಿಕೆ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು […]

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ:  ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!
KUSHAL V
|

Updated on:Oct 20, 2020 | 12:33 PM

Share

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ಬೆನ್ನುಹತ್ತಿರುವ CCB ಮತ್ತು ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೊಡ್ಡ ಬ್ರೇಕ್ ಥ್ರೂ ಸಿಕ್ಕಿದೆ. ಬೆದರಿಕೆ ಪತ್ರದ ಜೊತೆ ಓರ್ವ ವ್ಯಕ್ತಿಯ ಗುರುತಿನ ಚೀಟಿ ಹಾಗೂ ಎರಡು ಫೋನ್ ನಂಬರ್​ಗಳನ್ನು ಸಹ ಉಲ್ಲೇಖಿಸಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.

ಆ ಗುರುತಿನ ಚೀಟಿ ಶಿವಪ್ರಕಾಶ್ ಎಂಬುವವರಿಗೆ ಸೇರಿದ್ದು ಅನ್ನೋ ಮಾಹಿತಿ ಕಲೆಹಾಕಲಾಗಿದೆ. ಈ ಕುರಿತು ಶಿವಪ್ರಕಾಶ್​ನನ್ನು ವಿಚಾರಿಸಿದಾಗ ಆತನ ಹೇಳಿಕೆ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರನ್ನು ತುಮಕೂರು ಜಿಲ್ಲೆ ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲೂಕಿನ ಹಾಗಲವಾಡಿಯ ವೇದಾಂತ ಎಂದು ಗುರುತಿಸಲಾಗಿದೆ.

ರಾಜಶೇಖರ ಮತ್ತು ವೇದಾಂತನನ್ನು ರಾತ್ರಿಯೇ ವಶಕ್ಕೆ ಪಡೆದು, ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಈಗ ಸ್ಥಳ ಮಹಜರಿಗಾಗಿ ಗುಬ್ಬಿಯತ್ತ ಕರೆದು ಕೊಂಡು ವಾಪಸ್ ಹೋಗುತ್ತಿದ್ದಾರೆ.

ಶಿವಪ್ರಕಾಶ್​ ಮೇಲೆ ಹಗೆ ಸಾಧಿಸುವ ನಿಟ್ಟಿನಲ್ಲೆ ಪ್ರೈಮರಿ ಅಥವಾ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಥ್ರೆಟ್​ ಲೆಟರ್ ಬರೆಸಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ವಶಕ್ಕೆ ಪಡೆಯಲಾದ ವ್ಯಕ್ತಿಗಳ ಹ್ಯಾಂಡ್ ರೈಟಿಂಗ್ ಪರಿಶೀಲನೆ ನಡೆಸಲಾಗುತ್ತಿದೆ.

ಬೆದರಿಕೆ ಪತ್ರದ ಪ್ರಕರಣ ಸಿಸಿಬಿಗೆ ವರ್ಗಾವಣೆ ಇದೀಗ, ಉಗ್ರ ಸಂಘಟನೆಯ ಹೆಸರಿನಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ಕಳುಹಿಸಿದ್ದ ಕೇಸ್​ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ, ಹಲಸೂರು ಗೇಟ್ ಠಾಣೆಯಿಂದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿದ್ದಾರೆ.

ಸಿಟಿ ಸಿವಿಲ್ ಕೋರ್ಟ್‌ಗೆ 1 ಲೆಟರ್ ಮತ್ತು 1 ಕವರ್ ಬಂದಿತ್ತು. ಅದನ್ನ ಓಪನ್ ಮಾಡಿದಾಗ ಡಿಟೋನೇಟರ್, ವೈರ್ ಪತ್ತೆಯಾಗಿದೆ. ಸದ್ಯ ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ 3 ತಂಡ ರಚಿಸಲಾಗಿದೆ ಎಂದು ಕಮಲ್‌ ಪಂತ್ ಮಾಹಿತಿ ನೀಡಿದ್ದಾರೆ.

ಶಿವಪ್ರಕಾಶ್ ಎಂಬುವವರ ವೋಟರ್ ಐಡಿ ಪತ್ತೆಯಾಗಿದೆ. ದ್ವೇಷದ ಹಿನ್ನೆಲೆಯಲ್ಲಿ ಬೆದರಿಕೆ ಪತ್ರ ಬರೆದಿರುವ ಶಂಕೆಯಿದೆ. ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಪೊಲೀಸ್ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್‌ಗೆ ಬೆದರಿಕೆ ಪತ್ರವನ್ನು ಬರೆದಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿದ್ದಾರೆ.

ಇದನ್ನೂ ಓದಿ: ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ

ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!

Published On - 11:33 am, Tue, 20 October 20