ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ

| Updated By: ವಿವೇಕ ಬಿರಾದಾರ

Updated on: Aug 23, 2022 | 10:35 PM

ಅನೈತಿಕ ಸಂಬಂಧ ಅನುಮಾನದಿಂದ ಪತ್ನಿಯನ್ನು ಕೊಂದಿದ್ದ ಪತಿಯನ್ನು ಕೆ.ಆರ್ ಪುರಂ ಪೊಲೀಸರು ಬಂಧಸಿದ್ದಾರೆ.

ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಅನೈತಿಕ ಸಂಬಂಧ ಅನುಮಾನದಿಂದ ಪತ್ನಿಯನ್ನು (wife) ಕೊಂದಿದ್ದ ಪತಿಯನ್ನು (Husband) ಕೆ.ಆರ್ ಪುರಂ ಪೊಲೀಸರು ಬಂಧಸಿದ್ದಾರೆ. ಜಾನ್ ಸುಪ್ರಿತ್ (34) ಬಂಧಿತ ಆರೋಪಿ. ನ್ಯಾನ್ಸಿ ಫ್ಲೋರಾ ಕೊಲೆಯಾಗಿದ್ದ ಮಹಿಳೆ. ಶಾಮಿಯಾನ ಬ್ಯುಸಿನೆಸ್ ಮಾಡಿಕೊಂಡಿದ್ದ ಆರೋಪಿ ಪತ್ನಿಯ ಮೇಲೆ ಅನುಮಾನದಿಂದ ಕೆ ಆರ್.ಪುರಂನ ಟಿಸಿ ಪಾಳ್ಯದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದನು.

ಈ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚಲಿಸುತ್ತಿದ್ದ ರೈಲಿನ ಮುಂದೆ ಹೆಂಡತಿಯನ್ನು ತಳ್ಳಿ ಕೊಂದ ಗಂಡ; ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚಲಿಸುತ್ತಿದ್ದ ರೈಲಿನ ಎದುರು ತಳ್ಳಿ, ಕೊಲೆ  ಮಾಡಿ ಆ ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಸೋಮವಾರ ಪಲ್ಘಾರ್ ಜಿಲ್ಲೆಯ ವಸೈ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ನಡುವೆ ವಸೈ ರೋಡ್ ರೈಲ್ವೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಂಡತಿಯನ್ನು ಕೊಂದ ಬಳಿಕ ಆ ವ್ಯಕ್ತಿ ತನ್ನ ಇಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣದಿಂದ ಪರಾರಿಯಾಗಿದ್ದಾನೆ. ಈ ಸಂಪೂರ್ಣ ಘಟನೆ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

30 ವರ್ಷದ ಆಸುಪಾಸಿನ ವ್ಯಕ್ತಿ ಮಲಗಿದ್ದ ತನ್ನ ಹೆಂಡತಿಯನ್ನು ಎಬ್ಬಿಸಿ, ಪ್ಲಾಟ್‌ಫಾರ್ಮ್‌ನ ಅಂಚಿಗೆ ಎಳೆದೊಯ್ದು ಆಕೆಯನ್ನು ಚಲಿಸುವ ಎಕ್ಸ್‌ಪ್ರೆಸ್ ರೈಲಿನ ಮುಂದೆ ತಳ್ಳಿದ್ದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಬಹುದು. ಚಲಿಸುತ್ತಿದ್ದ ರೈಲಿನ ಎದುರು ಬಿದ್ದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸಂತ್ರಸ್ತೆ ತನ್ನ ಮಕ್ಕಳೊಂದಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 5ರಲ್ಲಿ ಮಲಗಿದ್ದಾಗ ಆಕೆಯ ಪತಿ ಅವಳನ್ನು ಎಬ್ಬಿಸಿ, ಅವಧ್ ಎಕ್ಸ್‌ಪ್ರೆಸ್‌ ರೈಲಿನ ಮುಂದೆ ತಳ್ಳಿ ಕೊಂದಿದ್ದಾನೆ ಎಂದು ರೈಲ್ವೆ ಸಹಾಯಕ ಪೊಲೀಸ್ ಆಯುಕ್ತ ಬಾಜಿರಾವ್ ಮಹಾಜನ್ ಹೇಳಿದ್ದಾರೆ. ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆಯ ವಿಡಿಯೋದಲ್ಲಿ ಆರೋಪಿ ತನ್ನ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗುತ್ತಿರುವುದು ಕಂಡುಬಂದಿದೆ.

ಆರೋಪಿಯು ದಾದರ್‌ಗೆ ರೈಲು ಹತ್ತಿ ಅಲ್ಲಿಂದ ಕಲ್ಯಾಣ್‌ಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದಂಪತಿಗಳು ಮೊದಲು ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:30 pm, Tue, 23 August 22