ಮದ್ಯಕ್ಕಾಗಿ ಗೆಳೆಯನನ್ನೇ ಕೊಲೆ ಮಾಡಲು ಯತ್ನಿಸಿದ ಆರೋಪಿ ಮೇಲೆ ಪೊಲೀಸ್ ಫೈರಿಂಗ್

|

Updated on: Jun 03, 2020 | 3:04 PM

ಬೆಂಗಳೂರು: ಮುಂಜಾನೆಯೇ ಪೊಲೀಸರ ಬಂದೂಕು ಸದ್ದು ಮಾಡಿದೆ. ಪೊಲೀಸರು ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿ ನಡೆದಿದೆ. ಆರೋಪಿ ಮುನಿಕೃಷ್ಣ ಅಲಿಯಾಸ್ ಕಪ್ಪೆ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌‌ರಿಂದ ಫೈರಿಂಗ್ ನಡೆದಿದೆ. ಆರೋಪಿ ಮುನಿಕೃಷ್ಣ ಮದ್ಯ ನೀಡಿಲ್ಲವೆಂದು ಗೆಳೆಯನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಅಲ್ಲದೆ ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಅಮೃತಹಳ್ಳಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ […]

ಮದ್ಯಕ್ಕಾಗಿ ಗೆಳೆಯನನ್ನೇ ಕೊಲೆ ಮಾಡಲು ಯತ್ನಿಸಿದ ಆರೋಪಿ ಮೇಲೆ ಪೊಲೀಸ್ ಫೈರಿಂಗ್
Follow us on

ಬೆಂಗಳೂರು: ಮುಂಜಾನೆಯೇ ಪೊಲೀಸರ ಬಂದೂಕು ಸದ್ದು ಮಾಡಿದೆ. ಪೊಲೀಸರು ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಬಾಗಲೂರು ಬಳಿ ನಡೆದಿದೆ. ಆರೋಪಿ ಮುನಿಕೃಷ್ಣ ಅಲಿಯಾಸ್ ಕಪ್ಪೆ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌‌ರಿಂದ ಫೈರಿಂಗ್ ನಡೆದಿದೆ.

ಆರೋಪಿ ಮುನಿಕೃಷ್ಣ ಮದ್ಯ ನೀಡಿಲ್ಲವೆಂದು ಗೆಳೆಯನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಅಲ್ಲದೆ ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಅಮೃತಹಳ್ಳಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಾಗಲೂರಿನಲ್ಲಿಂದು ಆರೋಪಿ ಮುನಿಕೃಷ್ಣ ಕಾಣಿಸಿಕೊಂಡಿದ್ದಾನೆ.

ಆತನನ್ನು ಬಂಧಿಸಲು ಅಮೃತಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಹಾಗೂ ತಂಡ ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆ ವೇಳೆ ಕಾನ್ಸ್‌ಟೇಬಲ್ ನಂದೀಶ್‌ಗೆ ಗಾಯವಾಗಿದೆ. ಶರಣಾಗುವಂತೆ ಸೂಚಿಸಿದರೂ ಆರೋಪಿ ಕೇಳಲಿಲ್ಲ ಹೀಗಾಗಿ ಆತ್ಮರಕ್ಷಣೆಗೆಂದು ಇನ್ಸ್‌ಪೆಕ್ಟರ್ ಆರೋಪಿ ಮುನಿಕೃಷ್ಣ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 8:07 am, Wed, 3 June 20