ಪೇದೆಗೆ ಚಾಕು ಇರಿದಿದ್ದ ಆರೋಪಿ ಮೇಲೆ ಪೊಲೀಸರ ಫೈರಿಂಗ್

|

Updated on: Dec 02, 2019 | 7:50 AM

ಬೆಂಗಳೂರು: ಸಿಗರೇಟ್ ಸೇದುವುದನ್ನು ಪ್ರಶ್ನಿಸಿದ ಪೊಲೀಸ್ ಪೇದೆ ನಾಗರಾಜ್​ಗೆ ಚಾಕು ಇರಿದಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆರ್.ಟಿ ನಗರದ ಈರುಳ್ಳಿ‌ ಮೈದಾನದ ಬಳಿ‌ ಆರೋಪಿ ಮರ್ದಾನ್ ಖಾನ್​ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದರೂ ಪೊಲೀಸರ ಸೂಚನೆಯನ್ನು ಲೆಕ್ಕಿಸಿದೆ ಕಲ್ಲಿನಿಂದ ಪೊಲೀಸ್ ಜೀಪ್ ಗ್ಲಾಸ್ ಹೊಡೆದಿದ್ದಾನೆ. ತಕ್ಷಣ […]

ಪೇದೆಗೆ ಚಾಕು ಇರಿದಿದ್ದ ಆರೋಪಿ ಮೇಲೆ ಪೊಲೀಸರ ಫೈರಿಂಗ್
Follow us on

ಬೆಂಗಳೂರು: ಸಿಗರೇಟ್ ಸೇದುವುದನ್ನು ಪ್ರಶ್ನಿಸಿದ ಪೊಲೀಸ್ ಪೇದೆ ನಾಗರಾಜ್​ಗೆ ಚಾಕು ಇರಿದಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ಆರ್.ಟಿ ನಗರದ ಈರುಳ್ಳಿ‌ ಮೈದಾನದ ಬಳಿ‌ ಆರೋಪಿ ಮರ್ದಾನ್ ಖಾನ್​ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದರೂ ಪೊಲೀಸರ ಸೂಚನೆಯನ್ನು ಲೆಕ್ಕಿಸಿದೆ ಕಲ್ಲಿನಿಂದ ಪೊಲೀಸ್ ಜೀಪ್ ಗ್ಲಾಸ್ ಹೊಡೆದಿದ್ದಾನೆ.

ತಕ್ಷಣ ಎಚ್ಚೆತ್ತ ಆರ್.ಟಿ.ನಗರ ಠಾಣೆ ಇನ್ಸ್​ಪೆಕ್ಟರ್​ ಮಿಥುನ್ ಶಿಲ್ಪಿ ಆರೋಪಿ ಮರ್ದಾನ್ ಖಾನ್ ಎರಡೂ ಕಾಲಿಗೆ ಗುಂಡು‌ ಹಾರಿಸಿ, ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಮರ್ದಾನ್ ಖಾನ್ ಈ ಹಿಂದೆ ನಾಲ್ಕು ಪ್ರಕರಣಗಳಿಗೆ ಬೇಕಾಗಿದ್ದ ವಾಂಟೆಡ್ ಆರೋಪಿಯಾಗಿದ್ದಾನೆ. ಆರೋಪಿ ಕಲ್ಲು ತೂರಿದ ಹಿನ್ನೆಲೆಯಲ್ಲಿ ಪೇದೆಗಳಾದ ಮುತ್ತಪ್ಪ, ಶ್ರೀಧರ್ ಮೂರ್ತಿಗೆ ಗಾಯವಾಗಿದೆ. ಇಬ್ಬರೂ ಪೇದೆಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 7:15 am, Mon, 2 December 19