ರಾತ್ರೋರಾತ್ರಿ ಖಾಕಿ ಗನ್ ಸದ್ದು.. ಆತ್ಮ ರಕ್ಷಣೆಗೆ ಫೈರಿಂಗ್ ಮಾಡಿ ಕೊಲೆ ಆರೋಪಿ ಬಂಧಿಸಿದ ಪೊಲೀಸ್

|

Updated on: Mar 26, 2021 | 9:29 AM

ಆರೋಪಿ ಧನುಷ್ ಮಾ.24ರಂದು ಮಂಜು ಅಲಿಯಾಸ್ ದಡಿಯಾ ಮಂಜುನನ್ನು ಇಟ್ಟಮಡು ಮುಖ್ಯರಸ್ತೆ ಬಳಿಯ ರೂಂನಲ್ಲಿ ಹತ್ಯೆಗೈದಿದ್ದ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದ. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾತ್ರೋರಾತ್ರಿ ಖಾಕಿ ಗನ್ ಸದ್ದು.. ಆತ್ಮ ರಕ್ಷಣೆಗೆ ಫೈರಿಂಗ್ ಮಾಡಿ ಕೊಲೆ ಆರೋಪಿ ಬಂಧಿಸಿದ ಪೊಲೀಸ್
ಆರೋಪಿ ಧನುಷ್‌ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣೆ ಇನ್ಸ್ಪೆಕ್ಟರ್ ಜನಾರ್ದನ್
Follow us on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರೋರಾತ್ರಿ ಖಾಕಿ ಗನ್ ಸದ್ದು ಮಾಡಿದೆ. ಹತ್ಯೆ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ಹೊಸಕೆರೆಹಳ್ಳಿ ಬಳಿಯ ಹನುಮಗಿರಿ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು ಕಾಲಿಗೆ ಗುಂಡು ಹಾರಿಸಿ ಧನುಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಸಿ.ಕೆ.ಅಚ್ಚುಕಟ್ಟು ಠಾಣೆ ಇನ್ಸ್ಪೆಕ್ಟರ್ ಜನಾರ್ದನ್ ಫೈರಿಂಗ್ ಮಾಡಿ ಆರೋಪಿ ಧನುಷ್​ನನ್ನು ಸೆರೆ ಹಿಡಿದಿದ್ದಾರೆ.

ಆರೋಪಿ ಧನುಷ್ ಮಾ.24ರಂದು ಮಂಜು ಅಲಿಯಾಸ್ ದಡಿಯಾ ಮಂಜುನನ್ನು ಇಟ್ಟಮಡು ಮುಖ್ಯರಸ್ತೆ ಬಳಿಯ ರೂಂನಲ್ಲಿ ಹತ್ಯೆಗೈದಿದ್ದ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದ. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಆರೋಪಿ ಬಂಧನಕ್ಕೆ ಪೊಲೀಸರು ಹನುಮಗಿರಿ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ಲೋಕೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಗೆ ಆರೋಪಿ ಧನುಷ್ ಯತ್ನಿಸಿದ್ದ. ಹೀಗಾಗಿ ತಕ್ಷಣ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಜನಾರ್ದನ್‌ರಿಂದ ಗುಂಡಿನ ದಾಳಿ ನಡೆದಿದೆ. ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿ ಧನುಷ್​ನ ಬಲಗಾಲಿಗೆ ಫೈರಿಂಗ್ ಮಾಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಗಾಯಾಳು ಧನುಷ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹಲ್ಲೆಗೆ ಯತ್ನಿಸಿದ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್..