ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್​ ಮೇಲೆ ಫೈರಿಂಗ್, ಬಂಧನ

|

Updated on: Mar 07, 2021 | 9:54 AM

ಚಡ್ಡಿ ಕಿರಣ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಮೊದಲಿಗೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ.

ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್​ ಮೇಲೆ ಫೈರಿಂಗ್, ಬಂಧನ
ಕಿರಣ ಅಲಿಯಾಸ್ ಚಡ್ಡಿ ಕಿರಣ್ ಮತ್ತು PSI ನವೀದ್
Follow us on

ಬೆಂಗಳೂರು: ಬೆಳ್ಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮೇಲೆ ಗುಂಡು ಹಾರಿಸಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಿರಣ ಅಲಿಯಾಸ್ ಚಡ್ಡಿ ಕಿರಣ್ ಬಂಧಿತ ರೌಡಿ ಶೀಟರ್. ಸದ್ಯ ಈಗ ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಹಿಂದ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ. ಈತ ಇರುವ ಸುಳಿವು ತಿಳಿಯುತ್ತಿದ್ದಂತೆ ಇಂದು ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಕಿರಣ್​ನನ್ನು ಅರೆಸ್ಟ್ ಮಾಡಲು ಪೊಲೀಸ್ ತಂಡ ಹೊರೆಟಿತ್ತು. ಈ ವೇಳೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆ ಸೇತುವೆ ಬಳಿ ರೌಡಿ ಶೀಟರ್ ಕಿರಣ್ ಮತ್ತು ಪೊಲೀಸರ ನಡುವೆ ದಾಳಿ-ಪ್ರತಿದಾಳಿ ಆರಂಭವಾಗಿದೆ.

ಚಡ್ಡಿ ಕಿರಣ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಮೊದಲಿಗೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಆದರೆ ರೌಡಿ ಶೀಟರ್ ಕಿರಣ್ ಮತ್ತೆ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಹೀಗಾಗಿ PSI ನವೀದ್ ಕಿರಣ್​ನ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. 2019ರಲ್ಲಿ ಚಡ್ಡಿ ಕಿರಣ್, ಪೊಲೀಸರ ಮೇಲೆ ಒಮ್ಮೆ ಮಚ್ಚು ಬೀಸಿದ್ದ. ಹೊಯ್ಸಳದಲ್ಲಿ ರೌಂಡ್ಸ್​ನಲ್ಲಿ ಇದ್ದ ಪೊಲೀಸರು ಚಡ್ಡಿ ಕಿರಣ್​ನನ್ನು ಲಾಕ್ ಮಾಡಿದ್ರು. ಈ ವೇಳೆ ಹೊಯ್ಸಳ ವಾಹನ ಅಡ್ಡಗಟ್ಟಿದ್ದ ಕಿರಣ್ ಗ್ಯಾಂಗ್ ಹೊಯ್ಸಳ ವಾಹನ ಜಖಂ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿ ಕಿರಣ್​ನನ್ನು ಬಿಡಿಸಿಕೊಂಡು ಹೋಗಿದ್ದರು.

ನೆಲಮಂಗಲದಲ್ಲಿ ರೌಡಿಶೀಟರ್​ಗಳಿಗೆ ಎಸಿಪಿ ವಾರ್ನಿಂಗ್
ಇನ್ನು ಬಾಗಲಗುಂಟೆ ಠಾಣೆಯಲ್ಲಿ ರೌಡಿಗಳಿಗೆ ಬೆಂಗಳೂರು ಉತ್ತರ ವಿಭಾಗ ಎಸಿಪಿ ಶ್ರೀನಿವಾಸ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಏರಿಯಾಗಳಲ್ಲಿ ಹಲ್ಲೆ, ಗುಂಪುಗಾರಿಕೆ, ನಡೆಸುತ್ತಿದ್ದ ರೌಡಿಶೀಟರ್​ಗಳನ್ನು ಕರೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ್ರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯೋಹನ್ ಅಲಿಯಾಸ್ ಪಾಪು, ವಿನಿ ಅಲಿಯಾಸ್ ಜಿಮ್‌ ವಿನಿ, ಬಾಬು ಅಲಿಯಾಸ್ ಟೂಲ್ಸ್‌ ಬಾಬು, ಯಶವಂತ, ಇಡ್ಲಿಸೋಮ, ರೂಪೇಶ್ ಅಲಿಯಾಸ್ ರೂಪಿ ಸೇರಿ 56 ರೌಡಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಪೊಲೀಸರಿಂದ ಫೈರಿಂಗ್.. 

Published On - 7:58 am, Sun, 7 March 21