ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಗುಂಡು ಹಾರಿಸಿದ ಬಾಲಕಿ

ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಬಾಲಕಿಯೊಬ್ಬಳು ಗುಂಡು ಹಾರಿಸಿರುವ ಘಟನೆ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ ನಡೆದಿದೆ.

ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಗುಂಡು ಹಾರಿಸಿದ ಬಾಲಕಿ
ಗನ್
Edited By:

Updated on: Jan 08, 2023 | 9:58 AM

ತನ್ನ ಮೇಲೆ ಅತ್ಯಾಚಾರವೆಸಗಿದ್ದ ಯುವಕನ ತಾಯಿಯ ಮೇಲೆ ಬಾಲಕಿಯೊಬ್ಬಳು ಗುಂಡು ಹಾರಿಸಿರುವ ಘಟನೆ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ ನಡೆದಿದೆ. ಪಿಸ್ತೂಲಿನಿಂದ 50 ವರ್ಷದ ಮಹಿಳೆಯ ಮೇಲೆ ಆಕೆ ಗುಂಡು ಹಾರಿಸಿದ್ದಾಳೆ. ಈಶಾನ್ಯ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ 5:30 ರ ಸುಮಾರಿಗೆ ಘಟನೆ ನಡೆದಿದೆ.  ಮಹಿಳೆಯ ಮಗ ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಎನ್ನುವ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಕಿಯ ದೂರಿನ ಮೇರೆಗೆ 2021ರಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಿಳೆ ಉತ್ತರ ಘೋಂಡಾದ ಸುಭಾಷ್ ಮೊಹಲ್ಲಾದಲ್ಲಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ.

ಮಹಿಳೆಯನ್ನು ಸುಭಾಷ್ ಮೊಹಲ್ಲಾ ನಿವಾಸಿ ಖುರ್ಷಿದಾ ಎಂದು ಗುರುತಿಸಲಾಗಿದೆ. ಗುಂಡು ತಗುಲಿದ ಬಳಿಕ ಸ್ಥಳೀಯರು ಆಕೆಯನ್ನು ಜೆಪಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಿಸ್ತೂಲ್ ಕೂಡ ವಶಪಡಿಸಿಕೊಳ್ಳಲಾಗಿದೆ.

ಜೆಪಿಸಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಗಾಯಾಳುಗಳನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us