AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Accident ಯುವತಿ ಮೇಲೆ ಅತ್ಯಾಚಾರವಾಗಿಲ್ಲ, ಮೆದುಳು ನಾಪತ್ತೆ: ಮರಣೋತ್ತರ ಪರೀಕ್ಷೆ ವರದಿಯ ಸ್ಪೋಟಕ ಮಾಹಿತಿ ಬಹಿರಂಗ

ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಿ ಕೆಲವೇ ಸಮಯದಲ್ಲಿ ಕಾರಿನಡಿ ಸಿಲುಕಿ ಭಯಾನಕವಾಗಿ ಮೃತಪಟ್ಟಿದ್ದ ದೆಹಲಿಯ 20 ವರ್ಷದ ಯುವತಿಯ ಮರಣೋತ್ತರ ಪರೀಕ್ಷೆ ಬಹಿರಂಗವಾಗಿದೆ.

Delhi Accident ಯುವತಿ ಮೇಲೆ ಅತ್ಯಾಚಾರವಾಗಿಲ್ಲ, ಮೆದುಳು ನಾಪತ್ತೆ: ಮರಣೋತ್ತರ ಪರೀಕ್ಷೆ ವರದಿಯ ಸ್ಪೋಟಕ ಮಾಹಿತಿ ಬಹಿರಂಗ
ದೆಹಲಿ ಅಪಘಾತ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jan 04, 2023 | 6:03 PM

Share

ನವದೆಹಲಿ: ಜನವರಿ 1ರಂದು ರಾತ್ರಿ ನವದೆಹಲಿಯ(Delhi Accident)) ಸುಲ್ತಾನ್​ಪುರಿ ಪ್ರದೇಶದಲ್ಲಿ ಅಂಜಲಿ ಎನ್ನುವ ಯುವತಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಕಿ.ಮೀ.ಗಟ್ಟಲೆ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಎಳೆದೊಯ್ಯುವ ಮುನ್ನ ಕೊಂದು ಹಾಕಿರಬಹುದು ಎಂದು ಶಂಕಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಿಗ ಮೃತ ಯುವತಿ ಅಂಜಲಿ ಮರಣೋತ್ತರ ಪರೀಕ್ಷೆ ವರದಿ(post mortem report) ಬಹಿರಂಗವಾಗಿದ್ದು, ಅತ್ಯಾಚಾರ ಮಾಡಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕುಡಿದು ಸ್ಕೂಟಿ ಓಡಿಸುತ್ತಿದ್ದ ಆಕೆ ಕಾರಿನಡಿ ಸಿಲುಕಿದ್ದು ಗೊತ್ತಾದರೂ ಕಾರು ನಿಲ್ಲಿಸಲಿಲ್ಲ; ಕರಾಳ ರಾತ್ರಿಯ ಘಟನೆ ಬಿಚ್ಚಿಟ್ಟ ದೆಹಲಿ ಯುವತಿಯ ಗೆಳತಿ

ಕಿಲೋಮೀಟರ್​ಗಟ್ಟಲೇ ಕಾರು ಎಳೆದುಕೊಂಡು ಹೋಗಿದ್ದರಿಂದ ಆಕೆಯ ದೇಹದ ಬಹುತೇಕ ಎಲ್ಲಾ ಭಾಗಗಳಲ್ಲಿ ಗಾಯಗಳಾಗಿವೆ. ಅಲ್ಲದೇ ದೇಹದ ಹಿಂಬದಿಯ ಚರ್ಮ ಕಿತ್ತುಹೋಗಿ ಪಕ್ಕೆಲುಬುಗಳು ಕೂಡ ಹೊರಗೆ ಕಾಣಿಸುತ್ತಿದ್ದವು. ಹಾಗೇ ಅಂಜಲಿ ಮೆದುಳು ನಾಪತ್ತೆಯಾಗಿದೆ. ಆದ್ರೆ, ಅತ್ಯಾಚಾರ ಮಾಡಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಬದಲಾಗಿ ಅಘಾತದಿಂದ ರಕ್ತಸ್ರಾವವಾಗಿ ಮೃತಟ್ಟಿದ್ದಾಳೆ ಎನ್ನುವ ಅಂಶ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸುಲ್ತಾನ್​ಪುರಿ ಪೊಲೀಸ್​ ಠಾಣೆಗೆ ಇಂದು(ಜನವರಿ 04) FSL ತಜ್ಞರು ಭೇಟಿ ನೀಡಿದ್ದು, ಯುವತಿಗೆ ಡಿಕ್ಕಿ ಹೊಡೆಸಿ ಎಳೆದೊಯ್ದಿದ್ದ DL​ 8CAY 6414 ನಂಬರ್​ನ ಕಾರು ಪರಿಶೀಲನೆ ಮಾಡಿದರು.

ಹೊಸ ವರ್ಷದ ನಸುಕಿನಲ್ಲಿ ಭಯಾನಕ ಅಪಘಾತ

ಜನವರಿ 01ರಂದು ನಸುಕಿನ ವೇಳೆ ಅಂಜಲಿ ಸ್ಕೂಟರ್ ಅಪಘಾತಕ್ಕೀಡಾಗಿತ್ತು. ಕಾರಿನ ಚಕ್ರಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡು ಕಿಲೋಮೀಟರ್​ ವರೆಗೂ ಎಳೆದೊಯ್ದಿತ್ತು. ದೇಹ ರಸ್ತೆ ಬದಿಯಲ್ಲಿ ಅಂಜಲಿ ಸಿಂಗ್ ಅವರ ಮೃತದೇಹದ ಮೇಲೆ ಬಟ್ಟೆಗಳೇ ಇರಲಿಲ್ಲ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗರಬಹುದು ಎಂದು ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲದೇ ಈ ಬಗ್ಗೆ ಯುವತಿಯ ತಾಯಿಯೂ ಸಹ ಶಂಕೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕುಡಿದು ಸ್ಕೂಟಿ ಓಡಿಸುತ್ತಿದ್ದ ಆಕೆ ಕಾರಿನಡಿ ಸಿಲುಕಿದ್ದು ಗೊತ್ತಾದರೂ ಕಾರು ನಿಲ್ಲಿಸಲಿಲ್ಲ; ಕರಾಳ ರಾತ್ರಿಯ ಘಟನೆ ಬಿಚ್ಚಿಟ್ಟ ದೆಹಲಿ ಯುವತಿಯ ಗೆಳತಿ

ಸುಲ್ತಾನ್​ಪುರಿ ಪ್ರದೇಶದಲ್ಲಿ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಆಕೆಯ ಕಾಲು ಆಕ್ಸೆಲ್‌ಗೆ ಸಿಕ್ಕಿಕೊಂಡಿತ್ತು. ಒಳಗಿದ್ದ ಐವರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದರಿಂದ ತಮಗೆ ಇದರ ಪರಿವೇ ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಕಾರು ಮುಂದೆ ಸಾಗಿದಂತೆ, ಅಂಜಲಿಯ ದೇಹ ನೆಲದ ಮೇಲೆಯೇ ಹೋಗುತ್ತಿತ್ತು. ಇದರಿಂದ ಬಟ್ಟೆಗಳು ಹರಿದುಹೋಗಿವೆ ಎನ್ನಲಾಗಿದೆ. ಕೊನೆಗೂ ಕಾರಿನಲ್ಲಿದ್ದ ಒಬ್ಬಾತ ಯೂ ಟರ್ನ್ ತೆಗೆದುಕೊಳ್ಳುವ ವೇಳೆ ಕಾರಿನ ಅಡಿ ಆಕೆಯ ಕೈ ಕಂಡಿದ್ದ. ತಿರುವು ಪಡೆಯುವಾಗ ದೇಹ ಬಿದ್ದಿದ್ದರಿಂದ ಗಾಬರಿಗೊಂಡಿದ್ದ ಅವರು, ಅಲ್ಲಿಂದ ಪರಾರಿಯಾಗಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!