Crime News: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಗೆ ಚಾಕುವಿನಿಂದ ಇರಿದ ಪ್ರೇಮಿ; ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ
ತಮ್ಮ ಸಂಬಂಧವನ್ನು ಮುಂದುವರೆಸಲು ಆ ಯುವತಿ ನಿರಾಕರಿಸಿದ್ದರಿಂದ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.
ನವದೆಹಲಿ: ದೆಹಲಿಯ ಕಾಂಜಾವಾಲಾದಲ್ಲಿ (Kanjhawala Accident) ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಆಕೆಯನ್ನು ಎಳೆದುಕೊಂಡು ಹೋಗಿ ಕೊಂದ ಘಟನೆಯ ಬೆನ್ನಲ್ಲೇ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ (Shocking News) ಬೆಳಕಿಗೆ ಬಂದಿದೆ. ಜನವರಿ 2ರಂದು ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ಯುವತಿಯೊಬ್ಬಳು ತನ್ನ ಜೊತೆಗಿನ ಪ್ರೀತಿಯನ್ನು ಮುಂದುವರೆಸಲು ಒಪ್ಪದ ಕಾರಣ ಕೋಪಗೊಂಡ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಆಕೆಗೆ ಇರಿದು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ, ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾಳೆ.
ತಮ್ಮ ಸಂಬಂಧವನ್ನು ಮುಂದುವರೆಸಲು ಆ ಯುವತಿ ನಿರಾಕರಿಸಿದ್ದರಿಂದ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವನನ್ನು ಹರಿಯಾಣದ ಅಂಬಾಲಾದಿಂದ ಬಂಧಿಸಲಾಗಿದೆ. ಗಾಯಗೊಂಡ ಯುವತಿಯನ್ನು ದೆಹಲಿಯ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ
#WATCH | A 22-year-old youth namely Sukhvinder arrested for stabbing a girl in Adarsh Nagar area on Jan 2. Both were friends &due to some dispute, he stabbed her 3-4 times.The girl is admitted to a hospital&her condition is stable: Delhi Police
(CCTV visuals confirmed by police) pic.twitter.com/VLMvdmWGuH
— ANI (@ANI) January 4, 2023
ಮಾಧ್ಯಮ ವರದಿಗಳ ಪ್ರಕಾರ, ಆ ಯುವತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಕಳೆದ 5 ವರ್ಷಗಳ ಹಿಂದೆ ಸುಖ್ವಿಂದರ್ ಜೊತೆ ಸಂಬಂಧ ಹೊಂದಿದ್ದಳು. ಎಎನ್‌ಐ ಹಂಚಿಕೊಂಡಿರುವ ಸಿಸಿಟಿವಿ ಫೂಟೇಜ್‌ನಲ್ಲಿ ಆರೋಪಿಯು ಆ ಯುವತಿಗೆ ಪದೇ ಪದೇ ಚಾಕುವಿನಿಂದ ಇರಿದಿರುವುದು ಕಂಡುಬಂದಿದೆ.