AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ

ಹಾಡಹಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿರುವಂತಹ ಘಟನೆ ನಗರದ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ.

ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕೊಲೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 02, 2023 | 4:31 PM

ಬೆಂಗಳೂರು: ಹಾಡಹಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು (stabbed) ಇರಿದು ಕೊಲೆ ಮಾಡಿರುವಂತಹ ಘಟನೆ ನಗರದ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ. ಕಾಶಿಪುರ ಗ್ರಾಮದ ಲಯಸ್ಮಿತಾ(19) ಕೊಲೆಯಾದ ವಿದ್ಯಾರ್ಥಿನಿ. ಹೊಟ್ಟೆ, ಎದೆ ಭಾಗ, ಕೈಗಳಿಗೆ ಚುಚ್ಚಿ ಕೊಲೆ ಮಾಡಲಾಗಿದೆ. ವಿದ್ಯಾರ್ಥಿನಿಯನ್ನು ಕೊಂದು ನಂತರ ವಿದ್ಯಾರ್ಥಿ ಪವನ್ ಕಲ್ಯಾಣ್ ತಾನೂ ಇರಿದುಕೊಂಡಿದ್ದಾನೆ. ಗಂಭೀರ ಸ್ಥಿತಿಯಲ್ಲಿರುವ ಪವನ್ ಕಲ್ಯಾಣ್​​ ನನ್ನು ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗಿದೆ. ಪ್ರೀತಿ ಪ್ರೇಮದ ವಿಚಾರಕ್ಕೆ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರೂ ವಿದ್ಯಾರ್ಥಿಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಾಶಿಪುರ ನಿವಾಸಿಗಳು. ಲಯಸ್ಮಿತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಟೆಕ್​ ವಿದ್ಯಾರ್ಥಿನಿ. ಪವನ್ ಕಲ್ಯಾಣ್ ನೃಪತುಂಗ ಯೂನಿವರ್ಸಿಟಿಯ ಮೊದಲ ವರ್ಷದ ಬಿಸಿಎ ವಿದ್ಯಾರ್ಥಿ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸದ್ಯ ರಕ್ಷಾ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.

ಶನಿವಾರ ಮತ್ತು ಇಂದು ಕಾಲೇಜಿಗೆ ಪವನ್ ಗೈರು: ಡಾ.ರಾಮಕೃಷ್ಣಾರೆಡ್ಡಿ

ಟಿವಿ9ಗೆ ನೃಪತುಂಗ ವಿವಿ ಪ್ರಿನ್ಸಿಪಲ್ ಡಾ.ರಾಮಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದು, ಪವನ್ ಕಲ್ಯಾಣ್ ರೆಗ್ಯುಲರ್ ಆಗಿ ನಿತ್ಯವೂ ತರಗತಿಗೆ ಬರ್ತಿದ್ದ. ಇತರೆ ವಿದ್ಯಾರ್ಥಿಗಳಂತೆ ತರಗತಿಯಲ್ಲಿ ಪಾಠ ಕೇಳ್ತಿದ್ದ. ಆದರೆ ಶನಿವಾರ ಮತ್ತು ಇಂದು(ಜ.2) ಕಾಲೇಜಿಗೆ ಪವನ್​ ಗೈರಾಗಿದ್ದಾನೆ. ಘಟನೆ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಕಾಲೇಜಿನಲ್ಲಿ ಯಾವುದೇ ಕಿರಿಕ್ ಮಾಡಿಕೊಂಡಿಲ್ಲ. ಕಾಲೇಜಿನ ಹೊರಗೆ ನಡೆದಿರುವುದರಿಂದ ಹೆಚ್ಚಿನ ಮಾಹಿತಿ ಇಲ್ಲ. ಕಳೆದ ವರ್ಷ ಸೆಪ್ಟೆಂಬರ್​ನಿಂದ ಕಾಲೇಜು ಆರಂಭವಾಗಿದೆ.

ಹೊಸ ವರ್ಷದ ಪಾರ್ಟಿ ಬಳಿಕ ಏರ್​ಫೋನ್​ಗಾಗಿ ಸ್ನೇಹಿತನ ಕೊಲೆ

ಹೊಸ ವರ್ಷದ ಪಾರ್ಟಿ ಬಳಿಕ ಏರ್​ಫೋನ್​ಗಾಗಿ ಸ್ನೇಹಿತನ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರಿನ ದೊಡ್ಡನಾಗಮಂಗಲದಲ್ಲಿ ನಡೆದಿದೆ. ಸ್ನೇಹಿತ ಕಾರ್ತಿಕ್​(27) ಕೊಲೆಯಾದ ವ್ಯಕ್ತಿ. ಕುಡಿದ ಅಮಲಿನಲ್ಲಿ ಏರ್​ಫೋನ್​ಗಾಗಿ ಸ್ನೇಹಿತರು ಹೊಡೆದು ಕೊಂದಿದ್ದಾರೆ. ಹೊಸ ವರ್ಷದಂದೇ ಆರೋಪಿ ರಜಿನೇಶ್​ ಹುಟ್ಟುಹಬ್ಬವೂ ಇತ್ತು. ಹುಟ್ಟುಹಬ್ಬಕ್ಕೆಂದು ಸ್ನೇಹಿತರನ್ನು ತನ್ನ ಕೊಠಡಿಗೆ ರಜಿನೇಶ್ ಕರೆದಿದ್ದ. ಬಾಲಾಜಿ ಕನ್ಸ್ಟ್ರಕ್ಷನ್​ ಸೈಟ್​ನಲ್ಲಿ ಐವರು ಸ್ನೇಹಿತರು ಪಾರ್ಟಿ ಮಾಡಿದ್ದರು. ಹತ್ಯೆಯಾದ ಕಾರ್ತಿಕ್ ಸೇರಿದಂತೆ ಎಲ್ಲರೂ ಪೇಂಟಿಂಗ್​ ಮಾಡುತ್ತಿದ್ದರು. ಹೊಸ ವರ್ಷ, ಬರ್ತ್​ಡೇ ಹಿನ್ನೆಲೆಯಲ್ಲಿ ಐವರು ಒಟ್ಟಿಗೆ ಸೇರಿದ್ದರು. ಮದ್ಯ ಸೇವಿಸಿ, ಊಟ ಮಾಡಿ ಐವರು ಸ್ನೇಹಿತರು ಒಟ್ಟಿಗೆ ಮಲಗಿದ್ದಾರೆ.

ಇನ್ನು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದು, ಯುವತಿ ಜತೆ ಮಾತುಕತೆ ವೇಳೆ ಬ್ಯಾಗ್​ನಿಂದ ಚಾಕು ತೆಗೆದು ಇರಿದಿದ್ದಾನೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇಬ್ಬರೂ ಕೋಲಾರ ಜಿಲ್ಲೆಯ ಮೂಲದವರು ಎಂದು ತಿಳಿದುಬಂದಿದೆ. ಯುವಕ ಪವನ್​​ ಕಲ್ಯಾಣ್​​ ಎದೆಭಾಗಕ್ಕೆ ಗಂಭೀರ ಗಾಯವಾಗಿದೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಸ್​ಗಾಗಿ ಪ್ರತಿಭಟನೆ ನಡೆಸಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಓರ್ವ ವಿದ್ಯಾರ್ಥಿನಿ ಸಾವು, ಇಬ್ಬರಿಗೆ ಗಂಭೀರ ಗಾಯ

ರಜಿನೇಶ್​ಗೆ ಏರ್​ಫೋನ್​ ಹಾಕಿಕೊಂಡು ಮಲಗುವುದು ಅಭ್ಯಾಸ. ನಿದ್ದೆಯಿಂದ ಎದ್ದಾಗ ಏರ್​ಫೋನ್​ ಇಲ್ಲದಿದ್ದರಿಂದ ಹುಡುಕಾಡಿದ್ದ. ಕಾರ್ತಿಕ್​ ಬಳಿ ಏರ್​ಫೋನ್​ ಸಿಕ್ಕಿದ್ದರಿಂದ ಸಿಟ್ಟಿಗೆದ್ದು ಹಲ್ಲೆ ಮಾಡಿದ್ದರು. ಬೆಳಗ್ಗೆ ಕಾರ್ತಿಕ್​ ಮೇಲೇಳದಿದ್ದರಿಂದ ಮೇಸ್ತ್ರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮೇಸ್ತ್ರಿ ಸೂಚನೆ ಮೇರೆಗೆ ಕಾರ್ತಿಕ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸ್ನೇಹಿತ ಕಾರ್ತಿಕ್ ಮೃತಪಟ್ಟಿದ್ದ. ಘಟನೆ ಬಗ್ಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಂದ ತನಿಖೆ ಮಾಡಿದ್ದು, ಬಳಿಕ ಹೊಡೆದು ಸಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ರಜಿನೇಶ್, ರವಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಮಿಸ್ ಫೈರಿಂಗ್: ಓರ್ವ ಸಾವು

ಶಿವಮೊಗ್ಗ: ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆ ವೇಳೆ ಮಿಸ್ ಫೈರಿಂಗ್​​ನಿಂದ ಗುಂಡು ತಗುಲಿ ಗಾಯಗೊಂಡಿದ್ದ ವಿನಯ್(34) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ (ಡಿ. 31/2022) ಉದ್ಯಮಿ ಮಂಜುನಾಥ್ ಹೊಸ ವರ್ಷಾಚರಣೆ ವೇಳೆ ರಾತ್ರಿ ಗಾಳಿಯಲ್ಲಿ ಗುಂಡು ಹಾರಿಸುವ ವೇಳೆ ಮಿಸ್ ಫೈರಿಂಗ್ ಆಗಿತ್ತು. ಇದೆ ವೇಳೆ ನ್ಯೂ ಇಯರ್ ಪಾರ್ಟಿಗೆ ಬಂದಿದ್ದ ವಿನಯ್​ಗೆ ಗುಂಡು ತಗುಲಿತ್ತು. ಘಟನೆಯ ಬಳಿಕ ಹೃದಯಾಘಾತದಿಂದ ಮಂಜುನಾಥ ಮೃತಪಟ್ಟಿದ್ದನು.

ಇದನ್ನೂ ಓದಿ: shocking ಹೊಸ ವರ್ಷಾಚರಣೆ ವೇಳೆ ಭೀಕರ ಅಪಘಾತ, ಯುವತಿಯನ್ನು ಎಳೆದೊಯ್ದಿ ಕಾರು: 4ಕಿ.ಮೀ ದೂರದಲ್ಲಿ ಶವ ಪತ್ತೆ

ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿ ಗಲಾಟೆ; ಯುವಕ ಸಾವು

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾರ್ಟಿ ಮಾಡುವ ವೇಳೆ ಕುಡಿದ ಮತ್ತಿನಲ್ಲಿ ಬಿಯರ್​ ಬಾಟಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಐಮರೆಡ್ಡಿಹಳ್ಳಿ ಗ್ರಾಮದ ಐಮರೆಡ್ಡಿಹಳ್ಳಿಯ ಮಂಜಮ್ಮ ಡಾಬಾದಲ್ಲಿ ಬಿಯರ್ ಬಾಟಲಿಯಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದೊಡ್ಡ ಗಂಜೂರಿನ ನವೀನ್(28)ಕೊಲೆಯಾದ ದುರ್ದೈವಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Mon, 2 January 23

ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ