shocking ಹೊಸ ವರ್ಷಾಚರಣೆ ವೇಳೆ ಭೀಕರ ಅಪಘಾತ, ಯುವತಿಯನ್ನು ಎಳೆದೊಯ್ದಿ ಕಾರು: 4ಕಿ.ಮೀ ದೂರದಲ್ಲಿ ಶವ ಪತ್ತೆ
ಹೊಸ ವರ್ಷದ ದಿನವೇ ನವದೆಹಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಕ್ರಕ್ಕೆ ಸಿಲುಕಿದ ಯುವತಿಯನ್ನು ಕಾರು 4 ಕಿಲೋಮೀಟರ್ ಎಳೆದೊಯ್ದಿದೆ.
ನವದೆಹಲಿ: 2023 ಹೊಸ ವರ್ಷದ ದಿನ ಮೊದಲ ದಿನವೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳ ಸ್ಕೂಟರ್ (Scooter) ಅಪಘಾತಕ್ಕೀಡಾಗಿದ್ದು, ಆಕೆಯನ್ನು ಕಾರು 4 ಕಿ.ಮೀಟರ್ ವರೆಗೂ ಎಳೆದೊಯ್ದಿದೆ. ಪರಿಣಾಮ 20 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಈ ದುರ್ಘಟನೆ ಜನವರಿ 1 ರಂದು ನಸುಕಿನ ಜಾವ ದೆಹಲಿಯ ಹೊರ ವಲಯದಲ್ಲಿ ನಡೆದಿದೆ.
ಇದನ್ನೂ ಓದಿ: KSRTC ಬಸ್- ಕಾರು ಮಧ್ಯೆ ಭೀಕರ ಅಪಘಾತ: ಹೊಸ ವರ್ಷ ಪಾರ್ಟಿಗೆ ಬಂದ ನಾಲ್ವರು ದುರಂತ ಅಂತ್ಯ
ಯುವತಿಯೊಬ್ಬರ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ಕಾರಿನ ಚಕ್ರಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡು ನಾಲ್ಕು ಕಿಲೋಮೀಟರ್ ವರೆಗೂ ಎಳೆದೊಯ್ದಿದೆ. ನಾಲ್ಕು ಕಿಲೋ ಮೀಟರ್‌ಗಳವರೆಗೆ ಯುವತಿಯನ್ನು ಕಾರು ಎಳೆದಿದ್ದರಿಂದ ಮೈಮೇಲಿದ್ದ ಆಕೆಯ ಬಟ್ಟೆ ಹರಿದು ಹೋಗಿದ್ದು, ದೆಹಲಿಯ ಸುಲ್ತಾನ್‌ಪುರಿ ಪ್ರದೇಶದಲ್ಲಿ ಯುವತಿಯ ಬೆತ್ತಲೆ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
A woman’s body was dragged for a few kms by a car that hit her in Sultanpuri area in early morning hours today.After being hit by the car, the body got entangled in the wheel of the car & was dragged alongside. All the five occupants of the car have been apprehended: Delhi Police pic.twitter.com/g5wqYiDZmW
— ANI (@ANI) January 1, 2023
ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಎಳೆದೊಯ್ಯುವ ಮುನ್ನ ಕೊಂದು ಹಾಕಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಆಕೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಮತ್ತು ಆಕೆಯ ದೇಹವು ಕಾರಿಗೆ ಸಿಕ್ಕಿಹಾಕಿಕೊಂಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಮುಂಜಾನೆ ಮಹಿಳೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ ಮತ್ತು ಮಹಿಳೆಯನ್ನು ಕಾರಿನ ಕೆಳಗೆ 4 ಕಿಲೋಮೀಟರ್ ಎಳೆದೊಯ್ಯಲಾಗಿತ್ತು. ಇನ್ನು, ಈ ಘಟನೆಗೆ ಸಂಬಂಧಪಟ್ಟಂತೆ ಕಾರಿನಲ್ಲಿದ್ದ ಐವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಂಜಾನೆ 3.24ಕ್ಕೆ ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂತು. ಮುಂಜಾನೆ 4.11ಕ್ಕೆ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮತ್ತೊಂದು ಕರೆ ಬಂದಿತ್ತು. ಅದರ ನಂತರ, ಪೊಲೀಸರು ವಾಹನವನ್ನು ಹುಡುಕಲು ಪ್ರಾರಂಭಿಸಿದ್ದರು ಎಂದು ಎಎನ್‌ಐ ವರದಿ ಮಾಡಿದೆ.
ನೋಂದಾಯಿತ ಕಾರು ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತಮ್ಮ ಕಾರು ಸ್ಕೂಟಿಯಿಂದ ಅಪಘಾತಕ್ಕೀಡಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ. ಆದರೆ ಅವರು ತಮ್ಮ ಕಾರಿನ ಕೆಳಗೆ ಯುವತಿ ಸಿಲುಕಿಕೊಂಡಿದ್ದು, ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿರುವುದು ಅವರಿಗೆ ಗೊತ್ತಾಗಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರೇಂದ್ರ ಕೆ ಸಿಂಗ್ ಹೇಳಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಮಾತನಾಡಿ, ಕಾರಿನಲ್ಲಿದ್ದವರು ಕುಡಿದಿದ್ದರು ಎಂದು ವರದಿಯಾಗಿದೆ. ಆಕೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಕಿಲೋಮೀಟರ್‌ಗಳವರೆಗೆ ಎಳೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ. ಈ ಹಿನ್ನೆಲೆ ನಾನು ದೆಹಲಿ ಪೊಲೀಸರಿಗೆ ಹಾಜರಾಗುವಂತೆ ಸಮನ್ಸ್ ನೀಡುತ್ತಿದ್ದೇನೆ. ಸಂಪೂರ್ಣ ಸತ್ಯ ಹೊರಬರಬೇಕು ಎಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:28 pm, Sun, 1 January 23