Bengaluru news: ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆ ಪ್ರಕರಣ, ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಎಲ್ಲೆಲ್ಲಿ ಸಿಕ್ತು ಗೊತ್ತಾ?

ಆತ್ಮಹತ್ಯೆಗೂ ಮುನ್ನ ಪ್ರದೀಪ್ ಮೂರು ಡೆತ್ ನೋಟ್​ಗಳನ್ನು ಬರೆದಿಟ್ಟಿದ್ದರು. ಒಂದು ಮಿಸ್ ಆದರೂ ಇನ್ನೊಂದು ಸಿಗಬೇಕು ಎನ್ನುವ ಉದ್ದೇಶದಿಂದ ಮೂರು ಡೆತ್​ನೋಟ್ ಬರೆದಿಟ್ಟಿದ್ದು, ಇದರ ಜೊತೆಗೆ ಬ್ಯಾಂಕ್ ದಾಖಲೆಗಳನ್ನ ಕೂಡ ಇಟ್ಟಿದ್ದರು.

Bengaluru news: ತಲೆಗೆ ಗುಂಡು ಹಾರಿಸಿ ಆತ್ಮಹತ್ಯೆ ಪ್ರಕರಣ, ಪ್ರದೀಪ್ ಬರೆದಿಟ್ಟಿದ್ದ ಮೂರು ಡೆತ್ ನೋಟ್ ಎಲ್ಲೆಲ್ಲಿ ಸಿಕ್ತು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jan 03, 2023 | 7:55 AM

ಬೆಂಗಳೂರು: ತನಗಾದ ಅನ್ಯಾಯ ಸಮಾಜಕ್ಕೆ ಗೊತ್ತಾಗಬೇಕು ಅಂತ ಆತ್ಮಹತ್ಯೆಗೂ ಮುನ್ನ ಪ್ರದೀಪ್ ಒಂದಲ್ಲ ಮೂರು ಡೆತ್​ನೋಟ್​ಗಳನ್ನು ಬರೆದಿಟ್ಟು ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Pradeep Suicide Case) ಮಾಡಿಕೊಂಡಿರುವುದು ತಿಳಿದುಬಂದಿದೆ. ರೆಸಾರ್ಟ್​​ನಲ್ಲಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಭಾಗಿಯಾದ ನಂತರ ಮೂರು ಡೆತ್ ನೋಟ್ ಬರೆದಿದ್ದ ಪ್ರದೀಪ್, ಒಂದನ್ನು ಪತ್ನಿ ನಮಿತಾ ವಾರ್ಡ್ ರೋಮ್​ನಲ್ಲಿಟ್ಟಿದ್ದಾರೆ. ಬಳಿಕ ರೆಸಾರ್ಟ್​​ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನ ಇಟ್ಟಿದ್ದರು. ಮೂರನೇ ಡೆತ್​ನೋಟ್​ ಅನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದರು. ಡೆತ್ ನೋಟ್ ಜೊತೆಗೆ ಬ್ಯಾಂಕ್ ದಾಖಲೆಗಳನ್ನ ಕೂಡ ಇಟ್ಟಿದ್ದರು. ಆತ್ಮಹತ್ಯೆಗೂ ಮುನ್ನವೇ ಈ ಡೆತ್​ನೋಟ್ ಪ್ರದೀಪ್ ಕುಟುಂಬಸ್ಥರ ಕಣ್ಣಿಗೆ ಬಿದ್ದಿದೆ.

ಡೆತ್​ನೋಟ್ ಗಮನಿಸದ ಸಂಬಂಧಿಕರು ಜನವರಿ 1ರ ಸಂಜೆ ಸುಮಾರು 4 ಗಂಟೆಗೆ ರೆಸಾರ್ಟ್​​ನಿಂದ ಹೊರಟಿದ್ದಾರೆ. ಅದನ್ನ ಕಂಡ ಪ್ರದೀಪ್, ಸಂಬಂಧಿಕರು ಹೋಗುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದಾರೆ. ಬಳಿಕ ಒಂದು‌ ಕಿ.ಮೀ ದೂರದಲ್ಲಿ‌ ನಿಟ್ಟಿಗೆರೆ ಎಂಬಲ್ಲಿ ಸಂಬಂಧಿಕರು ಹಿಂದೆ ಬರುತ್ತಿರುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ವೇಳೆ ಪಿಸ್ತೂಲ್ ಕೈಗೆತ್ತಿಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಬಳಿ ಬಂದು ನೋಡಿದಾಗ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಾನು ಆತ್ಮಹತ್ಯೆ ಮಾಡಿಕೊಂಡರೆ ಅನಾಥ ಶವ ಆಗಬಾರದು ಅನ್ನೋ ಕಾರಣಕ್ಕೆ ಪ್ರದೀಪ್ ಇಷ್ಟೇಲ್ಲಾ ಸರ್ಕಸ್ ಮಾಡಿದ್ದರು.

ಇದನ್ನೂ ಓದಿ: ಶಾಸಕ ಅರವಿಂದ ಲಿಂಬಾವಳಿಯನ್ನೂ ಪೊಲೀಸರು ವಿಚಾರಣೆ ಮಾಡ್ತಾರಂತೆ, ಉದ್ಯಮಿ ಪ್ರದೀಪ್ ಅತ್ಮಹತ್ಯೆಗೆ 6 ಜನರು ಕಾರಣ

ಡೆತ್​​ನೋಟ್​ನಲ್ಲಿ ಶಾಸಕ ಹೆಸರು ತೆಗೆಯಲು ಪೊಲೀಸರಿಗೆ ಕಾಲ್​ ಮೇಲೆ ಕಾಲ್

ಪ್ರದೀಪ್ ಆತ್ಮಹತ್ಯೆ ಬಳಿಕ ಡೆತ್​ನೋಟ್​ನಲ್ಲಿ ಶಾಸಕರ ಹೆಸರು ಉಲ್ಲೇಖಿಸಿರುವುದು ತಿಳಿದ ನಂತರ ಆ ಹೆಸರನ್ನು ಅಳಿಸಿಹಾಕಲು ಪೊಲೀಸರಿಗೆ ಹಲವು ಒತ್ತಡದ ಕರೆಗಳು ಬಂದಿದ್ದವು. ಶಾಸಕರ ಹೆಸರನ್ನು ತೆಗೆಯುವಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಂದಲೇ ಕರೆಗಳು ಬಂದಿವೆ. ಆದರೆ ಅಷ್ಟೋತ್ತಿಗೆ ಆಗಲೇ ಕಗ್ಗಲೀಪುರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈಗಲೇ ಶುರುವಾಗಿದ್ದು ಅಸಲಿ ಡ್ರಾಮ. ದೂರು ಕೊಟ್ಟಿದ್ದ ಪ್ರದೀಪ್ ಪತ್ನಿ ನಮಿತಾ ನಂತರ ದೂರು ವಾಪಸ್ಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಒಂದೇ ಗಂಟೆಯಲ್ಲಿ ಪ್ರದೀಪ್ ಪತ್ನಿ ನಮಿತಾ ಹಿಂದೇಟು ಹಾಕಿದ್ದಾರೆ.

ಪ್ರದೀಪ್ ಪತ್ನಿಯ ಮೇಲೂ ಪೊಲೀಸರಿಗೆ ಅನುಮಾನ?

ಪತಿಯ ಆತ್ಮಹತ್ಯೆ ಬಗ್ಗೆ ದೂರು ನೀಡಿ ಬಳಿಕ ಯಾಕೆ ವಾಪಸ್ ಪಡೆಯುತ್ತೇನೆ ಅಂದರು, ಯಾರಾದರೂ ಒತ್ತಡ ಹಾಕಿದರೇ?ಸ್ವಂತ ಗಂಡನನ್ನು ಕಳೆದುಕೊಂಡು ದೂರು ಬೇಡ ಅಂದಿದ್ದು ಯಾಕೆ ಎಂಬ ಅನುಮಾನ ಪೊಲೀಸರಲ್ಲೂ ಹುಟ್ಟಿಕೊಂಡಿದೆ. ಹೀಗಾಗಿ ಆರೋಪಿಗಳ ಮೊಬೈಲ್ ನಂಬರ್ ಜೊತೆಗೆ ನಮಿತಾ ನಂಬರ್​​ನ‌ ಸಿಡಿಆರ್ ಪರಿಶೀಲನೆ ನಡೆಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಇಂದು ಕಗ್ಗಲೀಪುರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಐವರು ಸ್ನೇಹಿತರಿಗೂ ನೊಟೀಸ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Pradeep Suicide: ಆತ್ಮಹತ್ಯೆಗೆ ಶರಣಾದ ಪ್ರದೀಪ್ ಪಕ್ಷದ ಕಾರ್ಯಕರ್ತನೇ, ತನಿಖೆಗೆ ಸಹಕರಿಸ್ತೇನೆ: ಘಟನೆ ಬಗ್ಗೆ ಲಿಂಬಾವಳಿ ಸ್ಪಷ್ಟನೆ

ಪ್ರದೀಪ್ ಯಾಕೆ ಗನ್ ಪಡೆದಿದ್ದರು?

ತನ್ನ ಐವರು ಸ್ನೇಹಿತರ ಜೊತೆಗೂಡಿ 2.25 ಕೋಟಿ ಬಂಡವಾಳ ಹಾಕಿ 2017-18 ರಲ್ಲಿ ಬೆಳ್ಳಂದೂರಿನಲ್ಲಿ ಓಪೋಸ್ ಅನ್ನೋ ಪಬ್ ತೆರೆಸಿದ್ದರು. ಓಪೋಸ್ ಪಬ್ ತೆರೆಯುವಾಗ ಗನ್ ಸೈಲೆನ್ಸ್​​ಗಾಗಿ 2018 ರಲ್ಲಿ ಗನ್ ಸೈಲೆನ್ಸ್​​ಗೆ ಪ್ರದೀಪ್ ಅರ್ಜಿ ಹಾಕಿದ್ದಾರೆ. ಉದ್ಯಮಿ ಆಗಿದ್ದ ಕಾರಣಕ್ಕೆ ವ್ಯವಹಾರ ನಿಮಿತ್ತವಾಗಿ ಓಡಾಡುತ್ತಾ ಇರುತ್ತೇನೆ. ಹೀಗಾಗಿ ಗನ್ ಲೈಸನ್ಸ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. 2018 ರಿಂದ ಪ್ರತಿ ವರ್ಷವೂ ಗನ್ ಅನ್ನು ಪ್ರದೀಪ್ ರಿನಿವಲ್ ಮಾಡಿಸುತ್ತಿದ್ದರು. ಕೊರೋನಾದಿಂದಾಗಿ 2019 ರಲ್ಲಿ ಪಬ್ ಕ್ಲೋಸ್ ಆಗಿದ್ದು ಇದುವರೆಗೂ ಓಪನ್ ಆಗಿಲ್ಲ. 2022 ರಲ್ಲಿಯೂ ಗನ್ ಅನ್ನು ರಿನಿವಲ್ ಮಾಡಿಕೊಂಡಿಸಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ