AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Voters Data Theft: ಪ್ರಕರಣ ಬಯಲಾದ ಒಂದೇ ತಿಂಗಳಿಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು 80 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ

Bengaluru Voter ID scam: ಜನವರಿಯಿಂದ ನವೆಂಬರ್ ವರೆಗಿನ 10 ತಿಂಗಳ ಅವಧಿಯಲ್ಲಿ ಬಿಬಿಎಂಪಿಯು ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು 3,07,000 ಅರ್ಜಿಗಳನ್ನು ಸ್ವೀಕರಿಸಿದೆ. ವೋಟರ್ ಐಡಿ ಹಗರಣದ ನಂತರ ಒಂದೇ ತಿಂಗಳಲ್ಲಿ 80,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

Bengaluru Voters Data Theft: ಪ್ರಕರಣ ಬಯಲಾದ ಒಂದೇ ತಿಂಗಳಿಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು 80 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ
ಬಿಬಿಎಂಪಿ
TV9 Web
| Updated By: Rakesh Nayak Manchi|

Updated on: Jan 03, 2023 | 11:53 AM

Share

ಮತದಾರರ ದತ್ತಾಂಶ ಕಳ್ಳತನ ಪತ್ತೆ (Bengaluru Voters Data Theft case)ಯಾದ ಒಂದು ತಿಂಗಳೊಳಗೆ 80 ಸಾವಿರಕ್ಕೂ ಹೆಚ್ಚು ಜನರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಲು ಬಿಬಿಎಂಪಿ (BBMP)ಗೆ ಅರ್ಜಿ ಸಲ್ಲಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಂತರ ನವೆಂಬರ್ 9 ರಿಂದ ಡಿಸೆಂಬರ್ 8ರ ವರೆಗೆ ಒಟ್ಟು 25 ವಿಧಾನಸಭಾ ಕ್ಷೇತ್ರಗಳಲ್ಲಿ 57,252 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕರ್ ಹೆರಾಲ್ಡ್ ವರದಿ ಮಾಡಿದೆ. ಅಲ್ಲದೆ, ಮಹದೇವಪುರ, ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 23,589 ಅರ್ಜಿಗಳನ್ನು ಹಾಕಲಾಗಿದೆ.

ಜನವರಿಯಿಂದ ನವೆಂಬರ್​ ತಿಂಗಳವರೆಗಿನ 10 ತಿಂಗಳ ಅವಧಿಯಲ್ಲಿ ಬಿಬಿಎಂಪಿಯು ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು 3,07,000 ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಕಳೆದ ಒಂದು ತಿಂಗಳಲ್ಲೇ ಸುಮಾರು 80,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅರ್ಜಿಗಳಲ್ಲಿನ ಈ ಹೆಚ್ಚಳವು ಮತದಾರರ ಪಟ್ಟಿಗೆ ಅಕ್ರಮ ಮಾರ್ಪಾಡುಗಳ ಸಾಧ್ಯತೆಯನ್ನು ಸೂಚಿಸಬಹುದಾದರೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ನಿಂದನೆ ಆರೋಪ: ದರ್ಪ ಮೆರೆದ ವಿಡಿಯೋ ಟ್ವೀಟ್ ಮಾಡಿದ ಕಾರು ಚಾಲಕ

“ಈ ಅವಧಿಯಲ್ಲಿ ನೀಡಿದ ವ್ಯಾಪಕ ಪ್ರಚಾರದ ಹಿನ್ನಲೆಯಿಂದಾಗಿ ಸಾಮಾನ್ಯವಾಗಿ ಹೆಚ್ಚಿನ ಅರ್ಜಿಗಳನ್ನು ಪಡೆಯುತ್ತಿದ್ದೇವೆ. ಆದಾಗ್ಯೂ, ಈ ಬಾರಿ ಅರ್ಜಿಗಳ ಸಂಖ್ಯೆಗಳು ಸ್ವಲ್ಪ ಹೆಚ್ಚಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಹಗರಣದ ನಂತರ ಅನೇಕ ನಾಗರಿಕ ಗುಂಪುಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳು ಕರಡು ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ತಮ್ಮನ್ನು ಸೇರಿಸಿಕೊಳ್ಳಲು ಜನರನ್ನು ಒತ್ತಾಯಿಸಲು ಪ್ರಾರಂಭಿಸಿದವು. ಇದು ಏರಿಕೆಗೆ ಕಾರಣವಾಗಿರಬಹುದು” ಎಂದು ಇನ್ನೊಬ್ಬ ಅಧಿಕಾರಿ ತಿಳಿರುವುದಾಗಿ ವರದಿ ಮಾಡಿದೆ.

ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿಗಳಲ್ಲದೆ ಮಾರ್ಪಾಡುಗಳನ್ನು ಕೋರಿ 44,197 ಅರ್ಜಿಗಳು ಮತ್ತು ಅಳಿಸುವಿಕೆಗಾಗಿ 14,952 ಅರ್ಜಿಗಳನ್ನು ಸಹ ಸ್ವೀಕರಿಸಲಾಗಿದೆ. ಮಹದೇವಪುರ 14,226, ಶಿವಾಜಿನಗರ 5,813 ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ 3,550 ಅರ್ಜಿಗಳು ಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ