ಮೂರೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅರ್ಚಕನ ಶವ ಪತ್ತೆ: ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಹಣಕಾಸಿನ ವಿಚಾರಕ್ಕೆ ಕಾಡುಗೋಡಿಯ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕ ನೀಲಕಂಠ ದೀಕ್ಷಿತ್​​ನ್ನು ಸೆಪ್ಟಂಬರ್ 5ರಂದು ಮಂಜುನಾಥ್ ಹಾಗೂ ಸಹಚರರು ಕೊಲೆ ಮಾಡಿ, ಸೆಪ್ಟಂಬರ್ 6ರಂದು ತಿರಮಶೆಟ್ಟಿಹಳ್ಳಿ ಕ್ರಾಸ್ ಬಳಿಯ ಕಲ್ಯಾಣ ಮಂಟಪ ಶ್ರೀಲಕ್ಷ್ಮಿ ಪ್ಯಾಲೆಸ್​ನ ಹಿಂದಿನ ಸರ್ಕಾರಿ ಜಾಗದಲ್ಲಿ ಶವವನ್ನು ಹೂತುಹಾಕಿದ್ದರು.

ಮೂರೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅರ್ಚಕನ ಶವ ಪತ್ತೆ: ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ
ಆರೋಪಿಗಳ ಹೇಳಿಕೆ ಮೇರೆಗೆ ಶವ ಪತ್ತೆಹಚ್ಚಿದ ಪೊಲೀಸರು
Follow us
sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 24, 2020 | 3:34 PM

ಬೆಂಗಳೂರು: ನಾಪತ್ತೆಯಾಗಿದ್ದ ಕಾಡುಗೋಡಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕ ನೀಲಕಂಠ ದೀಕ್ಷಿತರ ಶವ ನಿರ್ಮಾಣ ಹಂತದ ಕಸ ವಿಂಗಡಣೆ ಕಟ್ಟಡದಲ್ಲಿ ಪತ್ತೆಯಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವೈಮನಸ್ಸಿನ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮಂಜುನಾಥ್ ಹಾಗೂ ಆತನ ಸಹಚರರು ಸೆ.5ರಂದು ನಾಗರಾಜ್ ದೀಕ್ಷಿತರನ್ನು ಕೊಲೆ ಮಾಡಿದ್ದರು. ಸೆ.6ರಂದು ಶವವನ್ನು ತಿರುಮಲಶೆಟ್ಟಿಹಳ್ಳಿ ಕ್ರಾಸ್​ ಬಳಿಯ ಶ್ರೀಲಕ್ಷ್ಮೀ ಪ್ಯಾಲೇಸ್ ಕಲ್ಯಾಣ ಮಂಟಪದ ಹಿಂದಿನ ಸರ್ಕಾರಿ ಜಾಗದಲ್ಲಿ ಹೂತುಹಾಕಿದ್ದರು.

ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದ 108 ದಿನಗಳ ಬಳಿಕ ಆರೋಪಿ ಮಂಜುನಾಥ್ ಮತ್ತು ಆತನ ಸಹಚರರು ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದರು. ಇದೀಗ ತಹಶೀಲ್ದಾರ್ ಅಜಿತ್ ಕುಮಾರ್ ರೈ ಸಮ್ಮುಖದಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ತ್ರಿವಳಿ ಅರ್ಚಕರ ಕೊಲೆ ಪ್ರಕರಣ: ಮತ್ತೆ ನಾಲ್ವರು ಅರೆಸ್ಟ್

Published On - 3:34 pm, Thu, 24 December 20