Crime News: ಪಿಯುಸಿ ವಿದ್ಯಾರ್ಥಿನಿ ಮೇಲೆ ಶಾಲಾ ಬಸ್ ಚಾಲಕನಿಂದ ನಿರಂತರ ಅತ್ಯಾಚಾರ

|

Updated on: Aug 23, 2024 | 10:05 PM

12ನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲಾ ಬಸ್ ಚಾಲಕ ತಿಂಗಳುಗಟ್ಟಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದಿಟ್ಟುಕೊಂಡು ಆತ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.

Crime News: ಪಿಯುಸಿ ವಿದ್ಯಾರ್ಥಿನಿ ಮೇಲೆ ಶಾಲಾ ಬಸ್ ಚಾಲಕನಿಂದ ನಿರಂತರ ಅತ್ಯಾಚಾರ
ಅತ್ಯಾಚಾರ
Follow us on

ನವದೆಹಲಿ: ಪಿಯುಸಿ ಓದುತ್ತಿರುವ 17 ವಯಸ್ಸಿನ ವಿದ್ಯಾರ್ಥಿನಿ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಕ್ಕಾಗಿ ಚಂಡೀಗಢದ ಪ್ರಮುಖ ಶಾಲೆಯೊಂದರ ಬಸ್ ಚಾಲಕನನ್ನು ಜಿರಾಕ್‌ಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಚಂಡೀಗಢದ ಮಣಿಮಜ್ರಾದ 26 ವರ್ಷದ ಬಸ್ ಚಾಲಕ ಮೊಹಮ್ಮದ್ ರಜಾಕ್ ಎಂದು ಗುರುತಿಸಲಾಗಿದೆ. ಆತ ಆಕೆಯ ಮಾರ್ಫ್ ಮಾಡಿದ ಫೋಟೋಗಳನ್ನು ಇಟ್ಟುಕೊಂಡು ಆ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದಾದ ನಂತರ ಮೇ ಮತ್ತು ಜುಲೈ ನಡುವೆ 3 ಭೀಕರ ಹಲ್ಲೆಗಳಿಗೆ ಕಾರಣವಾಯಿತು. ಈ ಎಲ್ಲ ಹಲ್ಲೆಗಳೂ ಆಕೆಯ ನಿವಾಸದಲ್ಲಿ ನಡೆದಿವೆ.

ಈ ಘಟನೆಯಿಂದ ಆಘಾತಗೊಂಡ ಆ ಯುವತಿ ತನ್ನ ಹೆತ್ತವರಲ್ಲಿ ಘೋರ ಅನುಭವಗಳ ಬಗ್ಗೆ ಹೇಳಿಕೊಳ್ಳುವ ಧೈರ್ಯ ಮಾಡಲಿಲ್ಲ. ಕೊನೆಗೂ ಆಕೆ ಮನೆಯವರ ಬಳಿ ಈ ಬಗ್ಗೆ ಹೇಳಿದಾಗ ಅವರು ಪೊಲೀಸರಿಗೆ ದೂರು ನೀಡಿದರು. ರಜಾಕ್ ತನ್ನನ್ನು ತಿಂಗಳುಗಟ್ಟಲೆ ಹಿಂಬಾಲಿಸುತ್ತಿದ್ದ ಮತ್ತು ಸ್ನೇಹವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ. ಮನೆಯಲ್ಲಿ ನಡೆದ ಕಾರ್ಯಕ್ರಮದಿಂದ ತನ್ನ ಫೋಟೋಗಳನ್ನು ತೆಗೆದ ಆತ ಅದನ್ನು ಮಾರ್ಫಿಂಗ್ ಮಾಡಿ, ಬೆದರಿಕೆ ಹಾಕಿದ್ದ ಎಂದು ಆಕೆ ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ಅತ್ಯಾಚಾರ ವಿರೋಧಿ ಕಾನೂನನ್ನು ಕಠಿಣಗೊಳಿಸುವಂತೆ ಕೋರಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

ಮೇ 18ರಂದು, ಆಕೆ ಮತ್ತು ಆಕೆಯ ಸಹೋದರಿ ಮನೆಯಲ್ಲಿದ್ದರು. ಅವರ ಪೋಷಕರು ಕೆಲಸಕ್ಕೆ ಹೋಗಿದ್ದರು. ಆಗ ರಝಾಕ್ ಆಕೆಯ ಮನೆಗೆ ಭೇಟಿ ನೀಡಿದ್ದ. ಅವಳು ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಆಕೆಯ ಆಕ್ಷೇಪಾರ್ಹ ಚಿತ್ರಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಕ್ಕೆ ಹೆದರಿದ ಆಕೆ ಸುಮ್ಮನಿದ್ದಳು. ಹೀಗೆ ನಿರಂತರವಾಗಿ ಆಕೆಗೆ ಬೆದರಿಕೆ ಹಾಕುತ್ತಲೇ ಜುಲೈ 6 ಮತ್ತು ಜುಲೈ 26ರಂದು ಮತ್ತೆರಡು ಬಾರಿ ಮನೆಗೆ ಭೇಟಿ ನೀಡಿ ಅತ್ಯಾಚಾರ ಎಸಗಿದ್ದಾನೆ.

ಇದನ್ನೂ ಓದಿ: ಚಂಡೀಗಢ: ಅಪ್ರಾಪ್ತ ಬಾಲಕಿ ಮೇಲೆ ಶಾಲಾ ಬಸ್​ ಚಾಲಕನಿಂದ ತಿಂಗಳುಗಟ್ಟಲೆ ಅತ್ಯಾಚಾರ

ವರದಿಗಳ ಪ್ರಕಾರ, ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಶಾಲಾ ಚಾಲಕನನ್ನು ವಜಾಗೊಳಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಆರೋಪಿಯನ್ನು ಜಿರಕ್‌ಪುರ ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ