Crime News: ಅಕ್ಕನ ಮಗಳ ಜೊತೆ ಅಕ್ರಮ ಸಂಬಂಧ; ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಕೆಯನ್ನು ಕೊಂದ ಮಾವ
ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಕ್ಕನ ಮಗಳನ್ನು (ಸೊಸೆಯನ್ನು) ಕೊಲೆ ಮಾಡಿದ್ದಾನೆ. ಅವಳು ಬೇರೊಬ್ಬನನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ.
ನವದೆಹಲಿ: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 22 ವರ್ಷದ ಸೊಸೆ (ಅಕ್ಕನ ಮಗಳು) ಬೇರೊಬ್ಬರನ್ನು ಮದುವೆಯಾಗಲು ಬಯಸಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಆತ ಆಕೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನನ್ನು ಬಿಟ್ಟು ಬೇರೆಯವರೊಂದಿಗೆ ಆಕೆ ಮದುವೆಯಾಗಲು ಮುಂದಾಗಿದ್ದರಿಂದ ಈ ಕೊಲೆ ನಡೆದಿದೆ.
ಕೊಲೆಯ ಆರೋಪಿ ಮಣಿಕಾಂತ್ ದ್ವಿವೇದಿ ತನ್ನ ಅಕ್ಕನ ಮಗಳ ಶವವನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ವಿಲೇವಾರಿ ಮಾಡಿ ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಆಕೆಯ ಮೊಬೈಲ್ ಅನ್ನು ಬಸ್‌ನಲ್ಲಿ ಎಸೆದಿದ್ದ. ಪೊಲೀಸರ ಪ್ರಕಾರ, ಮೃತ ಯುವತಿ ಮಾನಸಿ ಪಾಂಡೆ ರಕ್ಷಾಬಂಧನದ ಸಂದರ್ಭದಲ್ಲಿ ಸೋಮವಾರ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಳು. ಆಕೆ ಹಿಂತಿರುಗದಿದ್ದಾಗ, ಆಕೆಯ ತಂದೆ ರಾಮಸಾಗರ್ ಪಾಂಡೆ ಅವರು ಮಣಿಕಾಂತ್ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ. ಅವರೇ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದರು. ಆಗ ಪೊಲೀಸರು ಮಣಿಕಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದರು.
ಇದನ್ನೂ ಓದಿ: Crime News: ನಿಲ್ಲದ ಲೈಂಗಿಕ ದೌರ್ಜನ್ಯ; ಉತ್ತರಾಖಂಡದಲ್ಲಿ ಬಸ್ನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಆರೋಪಿಯು ಮಾನಸಿಯೊಂದಿಗೆ 2 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಜಾದೌನ್ ತಿಳಿಸಿದ್ದಾರೆ. “ಇತ್ತೀಚೆಗೆ, ಮಾನಸಿ ತಾನು ಬೇರೊಬ್ಬರನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಳು. ಇದರಿಂದ ಕೋಪಗೊಂಡ ಮಣಿಕಾಂತ್ ಅವಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ” ಎಂದು ಅವರು ಹೇಳಿದ್ದಾರೆ.
ಪೊಲೀಸರನ್ನು ದಾರಿತಪ್ಪಿಸಲು ಮಣಿಕಾಂತ್ ಚಲಿಸುತ್ತಿದ್ದ ಬಸ್ಸಿನಲ್ಲಿ ಮಾನಸಿಯ ಫೋನ್ ಅನ್ನು ಎಸೆದಿದ್ದಾನೆ ಎಂದು ಮತ್ತೊಬ್ಬ ಪೋಲೀಸ್ ಹೇಳಿದ್ದಾರೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ