ಚಂಡೀಗಢ: ಅಪ್ರಾಪ್ತ ಬಾಲಕಿ ಮೇಲೆ ಶಾಲಾ ಬಸ್​ ಚಾಲಕನಿಂದ ತಿಂಗಳುಗಟ್ಟಲೆ ಅತ್ಯಾಚಾರ

ಮಾರ್ಫ್​ ಮಾಡಿದ ಫೋಟೊಗಳನ್ನಿಟ್ಟುಕೊಂಡು ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ಶಾಲಾ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಚಂಡೀಗಢದ ಮಣಿಮಜ್ರಾದ 26 ವರ್ಷದ ಬಸ್ ಚಾಲಕ ಮೊಹಮ್ಮದ್ ರಝಾಕ್ ಎಂದು ಗುರುತಿಸಲಾಗಿದೆ.

ಚಂಡೀಗಢ: ಅಪ್ರಾಪ್ತ ಬಾಲಕಿ ಮೇಲೆ ಶಾಲಾ ಬಸ್​ ಚಾಲಕನಿಂದ ತಿಂಗಳುಗಟ್ಟಲೆ ಅತ್ಯಾಚಾರ
ಅಪರಾಧ
Follow us
ನಯನಾ ರಾಜೀವ್
|

Updated on: Aug 23, 2024 | 9:38 AM

ಅಪ್ರಾಪ್ತ ಬಾಲಕಿ ಮೇಲೆ ಶಾಲಾ ಬಸ್​ ಚಾಲಕನೊಬ್ಬ ತಿಂಗಳುಗಟ್ಟಲೆ ಅತ್ಯಾಚಾರವೆಸಗಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಚಂಡೀಗಢದ ಮಣಿಮಜ್ರಾದ 26 ವರ್ಷದ ಬಸ್ ಚಾಲಕ ಮೊಹಮ್ಮದ್ ರಝಾಕ್ ಎಂದು ಗುರುತಿಸಲಾಗಿದೆ.

ಮಾರ್ಫ್​ ಮಾಡಿದ ಚಿತ್ರ ಬಳಸಿ ಆಕೆಯನ್ನು ಬೆದರಿಸಿ ನಿರಂತರ ಅತ್ಯಾಚಾರವೆಸಗಿದ್ದಾನೆ. ಮೇ ಹಾಗೂ ಜೂನ್ ನಡುವೆ ಇವೆಲ್ಲವೂ ಆಕೆಯ ಮನೆಯಲ್ಲೇ ನಡೆದಿದೆ ಎನ್ನಲಾಗಿದೆ. ರಝಾಕ್ ತನ್ನನ್ನು ಹಿಂಬಾಲಿಸುತ್ತಿದ್ದ ಮೊದಲು ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದ, ಆದರೆ ಆಕೆ ನಿರಾಕರಿಸಿದಾಗ ಆಕೆಯ ಚಿತ್ರಗಳನ್ನು ಮಾರ್ಫ್​ ಮಾಡಿ ಬೆದರಿಕೆ ಹಾಕಲು ಶುರು ಮಾಡಿದ್ದ.

ಮೇ 18ರಂದು ಬಾಲಕಿ ಹಾಗೂ ಆಕೆಯ ಸಹೋದರಿ ಮನೆಯಲ್ಲಿದ್ದು, ಪೋಷಕರು ಕೆಲಸಕ್ಕೆ ಹೋಗಿದ್ದರು. ರಝಾಕ್ ಅವರ ಮನೆಗೆ ಬಂದಿದ್ದ. ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ, ಒಪ್ಪದಿದ್ದರೆ ಆ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೇಳಿದ್ದಾನೆ.

ಹೀಗೆ ಬೆದರಿಕೆ ಹಾಕಿ ಜುಲೈ 6 ಹಾಗೂ ಜುಲೈ 26ರಂದು ಮತ್ತೆರಡು ಬಾರಿ ಮನೆಗೆ ಬಂದು ಅತ್ಯಾಚಾರವೆಸಗಿದ್ದಾನೆ. ಬಳಿಕ ಈ ವಿಚಾರ ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ.

ಮತ್ತಷ್ಟು ಓದಿ: ಛತ್ತೀಸ್​ಗಢದಲ್ಲಿ ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಆರು ಮಂದಿ ಬಂಧನ

ವರದಿಗಳ ಪ್ರಕಾರ, ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಶಾಲಾ ಚಾಲಕನಿಂದ ಶಾಲಾ ಅಧಿಕಾರಿಗಳು ರಾಜೀನಾಮೆ ಕೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಆರೋಪಿಯನ್ನು ಜಿರಕ್‌ಪುರ ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ