AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತನ್ನ ಪ್ರಿಯಕರನ ಜೊತೆ ಮದುವೆಯಾದ ವಧುವಿನ ಕತ್ತು ಸೀಳಿದ ಯುವತಿ!

ನನಗೆ ಸಿಗದಿರುವುದು ಯಾರಿಗೂ ಸಿಗಬಾರದು ಎಂದು ರೊಚ್ಚಿಗೆದ್ದ ಯುವತಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾದ ವಧುವಿನ ಕುತ್ತಿಗೆ ಸೀಳಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಈ ಪ್ರಕರಣ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Shocking News: ತನ್ನ ಪ್ರಿಯಕರನ ಜೊತೆ ಮದುವೆಯಾದ ವಧುವಿನ ಕತ್ತು ಸೀಳಿದ ಯುವತಿ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Aug 22, 2024 | 10:04 PM

Share

ವಾರಾಣಸಿ: ತನ್ನ ಪ್ರಿಯಕರ ಬೇರೊಬ್ಬನ ಜೊತೆ ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿ ಮದುವೆ ಮುಗಿಸಿ ಮನೆಗೆ ಬಂದ ವಧುವಿನ ಕೋಣೆಗೆ ನುಗ್ಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. “ನನ್ನ ಮತ್ತು ನನ್ನ ಪ್ರೇಮಿಯ ನಡುವೆ ಯಾರೇ ಬಂದರೂ ಇದೇ ಗತಿ ಬರುತ್ತದೆ” ಎಂದು ಕಿರುಚಾಡಿದ್ದಾಳೆ.

ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬರು ಮದುಮಕ್ಕಳ ಮಲಗುವ ಕೋಣೆಗೆ ನುಗ್ಗಿ ನವ ವಧುವಿನ ಕತ್ತು ಸೀಳಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಆಘಾತಕಾರಿ ಘಟನೆಯು ಸ್ಥಳೀಯವಾಗಿ ಆಘಾತ ಸೃಷ್ಟಿಸಿದ್ದು, ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: Shocking News: ಅಮ್ಮನೊಂದಿಗೆ ಬೆಚ್ಚಗೆ ಮಲಗಿದ್ದ 3 ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ!

ವಾರಾಣಸಿಯ ಚೋಲಾಪುರ ಪ್ರದೇಶದಲ್ಲಿ ವಧು ತನ್ನ ಕೋಣೆಯಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಮದುವೆಯಾಗಿದ್ದಕ್ಕೆ ಕುಪಿತಳಾದ ಗೆಳತಿ ಆಕಯಿದ್ದ ಕೋಣೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಕೂಡಲೆ ಆಕೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಪೊಲೀಸರು ಹಲ್ಲೆ ಮಾಡಿದ ಪ್ರಿಯಾ ಶರ್ಮಾ ಎಂಬ ಯುವತಿಯನ್ನು ಆಕೆಯ ಪ್ರೇಮಿ ಬಬ್ಲು ಅನ್ಸಾರಿಯೊಂದಿಗೆ ಬಂಧಿಸಿದ್ದಾರೆ.

ಇದನ್ನೂ ಓದಿ: Mamata Banerjee: ಅತ್ಯಾಚಾರ ವಿರೋಧಿ ಕಾನೂನನ್ನು ಕಠಿಣಗೊಳಿಸುವಂತೆ ಕೋರಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

ಪ್ರಿಯಾ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದ್ದು, ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಿಯಾ ಶರ್ಮಾ ಮತ್ತು ಬಬ್ಲು ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಮದುವೆಯ ನೆಪದಲ್ಲಿ ಬಬ್ಲು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಆದರೆ, ಇದೀಗ ಆತ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡ ಆಕೆ ಈ ಕೃತ್ಯ ಎಸಗಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ